ಬೆಂಗಳೂರು:ವಿಶ್ವವನ್ನೆ ಕಾಡುತ್ತಿರುವ ಕರೊನಾ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿ ಅಗತ್ಯವಿರುವ ಪರೀಕ್ಷೆಗಳನ್ನು ನಡೆಸಲು ದೇಶೀಯವಾಗಿ ಪರೀಕ್ಷಾ ಕಿಟ್‌ಗಳನ್ನು ಬೆಂಗಳೂರಿನ ಸ್ಟಾರ್ಟಪ್ ಸಂಸ್ಥೆಯೊಂದು ರೂಪಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಇನ್‌ಕ್ಯುಬೇಷನ್ ಸೌಲಭ್ಯ ಪಡೆದಿದ್ದ ಸ್ಟಾರ್ಟಪ್ ಈಕ್ವಿನ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಅನುಮೋದನೆ ನೀಡಿದೆ.
ಕೇವಲ ಒಂದೂವರೆ ಗಂಟೆಕರೊನಾ ಸೋಂಕನ್ನು ಪತ್ತೆ ಮಾಡುವಲ್ಲಿ ಸರ್ಕಾರದಿಂದ ಎರಡು ಮಾದರಿಗಳನ್ನು ಮುಖ್ಯವಾಗಿ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತಿದೆ. ರಿವರ್ಸ್ ಟ್ರಾನ್ಸ್‌ಕ್ರಿಪ್ಟೇಸ್- ಪಾಲಿಮರೇಸ್ ಚೈನ್ ರಿಯಾಕ್ಷನ್(ಆರ್‌ಟಿ-ಪಿಸಿಆರ್) ಹಾಗೂ ರ‌್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳು. ಕರೊನಾ ಸೋಂಕು ಪತ್ತೆ ಮಾಡುವಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಯು ಶೇ.100 ನಿಖರವಾಗಿದೆಯಾದರೂ ಒಂದು ಪರೀಕ್ಷೆಯ ಲಿತಾಂಶ ದೊರಕಲು 4-8 ಗಂಟೆ ಅವಧಿ ತೆಗೆದುಕೊಳ್ಳುತ್ತದೆ. ಪ್ರಯೋಗಾಲಯಕ್ಕೆ ಕೊಂಡೊಯ್ಯುವ ಅವಧಿಯೂ ಸೇರಿ ಒಂದು ದಿನ ತಗಲುತ್ತದೆ. ತ್ವರಿತ ಲಿತಾಂಶಕ್ಕಾಗಿ ಬಳಸುವ ರ‌್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ, ಪಾಸಿಟಿವ್ ಇದ್ದವರಿಗೂ ನೆಗೆಟಿವ್ ವರದಿ ಬರುವ ಸಾಧ್ಯತೆಯಿರುತ್ತದೆ. ಈಕ್ವಿನ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ‘ಗ್ಲೋಬಲ್ ಕೋವಿಡ್-19 ಆರ್‌ಟಿ-ಪಿಸಿಆರ್ ಕಿಟ್’ ಶೇ.100 ನಿಖರ ಲಿತಾಂಶದ ಜತೆಗೆ, ಕೇವಲ ಒಂದೂವರೆ ಗಂಟೆಯೊಳಗೆ ಲಿತಾಂಶ ಲಭಿಸುತ್ತದೆ ಎಂದು ಐಐಎಸ್‌ಸಿ ಬಯೋಕೆಮಿಸ್ಟ್ರಿ ಪ್ರಾಧ್ಯಾಪಕ ಹಾಗೂ ಈಕ್ವಿನ್ ಬಯೋಟೆಕ್ ಸಂಸ್ಥಾಪಕ ಉತ್ಪಲ್ ಟಾಟು ಹೇಳಿದ್ದಾರೆ.
ದರದಲ್ಲೂ ಕಡಿಮೆಸದ್ಯ ಭಾರತದಲ್ಲಿ ಕೆಲವು ಸಂಸ್ಥೆಗಳು ಆರ್‌ಟಿ-ಪಿಸಿಆರ್ ಪರೀಕ್ಷೆ ಕಿಟ್ ಉತ್ಪಾದನೆ ಮಾಡುತ್ತಿವೆಯಾದರೂ ಬಹಳ ಪ್ರಮಾಣದ ಕಿಟ್‌ಗಳು ವಿದೇಶದಿಂದ ಆಮದಾಗುತ್ತಿವೆ ಹಾಗಾಗಿ ದುಬಾರಿಯಾಗುತ್ತವೆ. ಭಾರತದಲ್ಲೆ ಉತ್ಪಾದನೆಯಾಗುವ ಪರೀಕ್ಷಾ ಕಿಟ್‌ಗಳಿಂದ ಪರೀಕ್ಷಾ ವೆಚ್ಚದಲ್ಲಿ ಇಳಿಕೆಯಾಗುತ್ತದೆ. ಬೃಹತ್ ಸಂಖ್ಯೆಯಲ್ಲಿ ಪರೀಕ್ಷಾ ಕಿಟ್‌ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ತರಲು ಕಂಪನಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಉತ್ಪಲ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 8 =
Remember me
