ಬೆಂಗಳೂರು:ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗಿನ 24 ಗಂಟೆ ಅವಧಿಯಲ್ಲಿ ಕೋವಿಡ್​ 19 ನ 210 ಹೊಸ ಕೇಸ್​ಗಳು ಖಚಿತವಾಗಿವೆ. ಅದೇ ರೀತಿ 12 ಸೋಂಕು ಪೀಡಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತ ಸಂಖ್ಯೆ 8 ಸಾವಿರದ ಸನಿಹ ತಲುಪಿದೆ.
ಇಂದಿನ 210 ಕೇಸ್​ಗಳೊಂದಿಗೆ ರಾಜ್ಯದಲ್ಲಿ ಒಟ್ಟು 7,944 ಕೇಸ್​ಗಳಾಗಿದೆ. ಮರಣ ಪ್ರಮಾಣ ಒಟ್ಟು 114 ತಲುಪಿದ್ದು, ಇದರಲ್ಲಿ 4 ಪ್ರಕರಣಗಳಲ್ಲಿ ಸೋಂಕು ಪೀಡಿತರು ಅನ್ಯಕಾರಣಗಳಿಗೆ ಮೃತಪಟ್ಟಿದ್ದಾರೆ. ಈ ದಿನ ಆಸ್ಪತ್ರೆಯಿಂದ ಒಟ್ಟು 179 ಜನ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಸೋಂಕು ಮುಕ್ತರಾದವರ ಸಂಖ್ಯೆ 4,983 ತಲುಪಿದೆ. ಒಟ್ಟು ಸಕ್ರಿಯ ಪ್ರಕರಣಗಳು 2, 843. ಐಸಿಯುನಲ್ಲಿ 73 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:VIDEO|ಗಡ್ಡ ಪ್ರಿಯರು ತಲೆ ಕೆಡಿಸಿಕೊಳ್ಳಬೇಕಾದ ಸುದ್ದಿ!
ಜಿಲ್ಲಾ ಮಟ್ಟದ ಡೇಟಾ ಗಮನಿಸಿದರೆ, ಬಳ್ಳಾರಿ ಮತ್ತು ಕಲಬುರಗಿಯಲ್ಲಿ ಇಂದು ಗರಿಷ್ಠ 48 ಪ್ರಕರಣಗಳು ಖಚಿತವಾಗಿವೆ. ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17 ಕೇಸ್​ಗಳು ಖಚಿತ ಪಟ್ಟಿದ್ದು ಟಾಪ್ 5ರ ಪಟ್ಟಿಯಲ್ಲಿವೆ. ಒಟ್ಟಾರೆ ಪ್ರಕರಣಗಳ ಪಟ್ಟಿಯಲ್ಲಿ ಕಲುಬರಗಿ 1074, ಉಡುಪಿ 1039 (ಇಂದು ಯಾವುದೇ ಕೇಸ್ ಇಲ್ಲ), ಯಾದಗಿರಿ 873, ಬೆಂಗಳೂರು ನಗರ 844, ರಾಯಚೂರು 414 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ರಾಜ್ಯದಲ್ಲಿ ಸಕ್ರಿಯ ಕರೊನಾ ಪ್ರಕರಣಗಳು 2987; 24 ಗಂಟೆಯಲ್ಲಿ 213ಮಂದಿಯಲ್ಲಿ ಸೋಂಕು ದೃಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
