ಬೆಂಗಳೂರು: ರಾಜ್ಯದಲ್ಲಿ ಕರೊನಾ ಕೋವಿಡ್​ 19 ವೈರಸ್ ಸೋಂಕು ಪೀಡಿತರ ಸಂಖ್ಯೆ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯ 24 ಗಂಟೆ ಅವಧಿಯಲ್ಲಿ 416 ಹೊಸ ಕೇಸ್​ಗಳು ಪತ್ತೆಯಾಗಿವೆ. ಈ ಅವಧಿಯಲ್ಲಿ ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ 9 ಆಗಿದ್ದು, ಇದುವರೆಗೆ ಮೃತರಾದವರ ಒಟ್ಟು ಸಂಖ್ಯೆ 132ಕ್ಕೆ ತಲುಪಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 181 ಮತ್ತು ಇದುವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರು 5,391.
ಪ್ರಸ್ತುತ ಕೋವಿಡ್ 19 ಸೋಂಕು ಸಕ್ರಿಯವಾಗಿರುವ ರೋಗಿಗಳ ಸಂಖ್ಯೆ 3170. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 74 ಮಂದಿ. ಇಂದು ದೃಢಪಟ್ಟ ಕೇಸ್​ಗಳ ಪೈಕಿ 22 ಜನರಿಗೆ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವಿದ್ದರೆ, 116 ಜನರದ್ದು ಅಂತಾರಾಜ್ಯ ಪ್ರಯಾಣದ ಹಿಸ್ಟರಿ ಕಂಡುಬಂದಿದೆ.
ಇದನ್ನೂ ಓದಿ:ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ
ಜಿಲ್ಲಾವಾರು ಅಂಕಿಅಂಶ ಗಮನಿಸಿದರೆ ಇಂದು ಕೂಡ ಬೆಂಗಳೂರು ನಗರದಲ್ಲೇ ಗರಿಷ್ಠ 94 ಕೇಸ್​ಗಳು ಪತ್ತೆಯಾಗಿರುವಂಥದ್ದು. ಬೀದರ್ 73, ಬಳ್ಳಾರಿ, ರಾಮನಗರ ತಲಾ 38, ಕಲಬುರಗಿಯಲ್ಲಿ 34 ಕೇಸ್​ಗಳು ಕಂಡುಬಂದಿವೆ. ಒಟ್ಟಾರೆ ಪ್ರಕರಣಗಳನ್ನು ಗಮನಿಸಿದರೆ ಬೆಂಗಳೂರು ನಗರ ಸಾವಿರದ ಗಡಿ ದಾಟಿದ್ದು, 1076 ಕೇಸ್​ಗಳಿವೆ. ಕಲಬುರಗಿಯಲ್ಲಿ 1160 ಕೇಸ್​, ಉಡುಪಿಯಲ್ಲಿ 1063, ಬೀದರ್ 484, ದಕ್ಷಿಣ ಕನ್ನಡ 418, ಬಳ್ಳಾರಿಯಲ್ಲಿ 402 ಪ್ರಕರಣಗಳಿವೆ. ಪೂರ್ಣವಿವರಗಳಿಗೆ ಗ್ಯಾಲರಿ ಗಮನಿಸಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 5 =
Remember me
