ಕಲಬುರಗಿ:‌ಮಾಜಿ ಮುಖ್ಯಮಂತ್ರಿ ದಿವಂಗತ ‌ಎನ್. ಧರ್ಮಸಿಂಗ್ ಅವರ ಪುತ್ರ, ‌ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್​ಗೆ ಕೋವಿಡ್ ಸೋಂಕು ತಗುಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಜಯ್ ಸಿಂಗ್, ‘ಕೋವಿಡ್ ತಪಾಸಣೆ ‌ಮಾಡಿಸಿಕೊಂಡ ಬಳಿಕ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಎರಡು ವಾರ ಕ್ವಾರಂಟೈನ್​ಗೆ ಒಳಗಾಗಿದ್ದೇನೆ. ನನ್ನೊಂದಿಗೆ ‌ಪ್ರಥಮ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕೆ ‌ಕಾಯ್ದುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿರಿಬೆಂಗಳೂರಿನ ರಾಜಕಾಲುವೆಯಲ್ಲಿ ಕೊಚ್ಚಿಹೋದ 6 ವರ್ಷದ ಬಾಲಕಿ
ಗುರುವಾರವಷ್ಟೇ ಕಲಬುರಗಿ ಜಿಲ್ಲೆಯ ‌ಸೇಡಂ ಶಾಸಕ ರಾಜಕುಮಾರ ‌ಪಾಟೀಲ ತೇಲ್ಕೂರ ಮತ್ತು ಅವರ ಪತ್ನಿ ಹಾಗೂ ‌ಮಗನಿಗೆ ಕರೊನಾ ಸೋಂಕು ಇರುವುದು ಖಚಿತಪಟ್ಟಿತ್ತು.
I have tested positive for Covid-19. I am asymptomatic and will be in quarantine for 2 weeks. Would request the people who were my primary contacts to take the necessary precautions. Do stay safe.
— Dr. Ajay Dharam Singh / ಡಾ. ಅಜಯ ಸಿಂಗ್ (@Dr_Ajay_Singh)July 10, 2020

ಎಲ್ಲ ವಲಯದಲ್ಲೂ ಕಾಲಿಟ್ಟಿರುವ ಕರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಹೊಸಕೋಟೆ ಶಾಸಕ ಶರತ್​ ಬಚ್ಚೇಗೌಡ ದಂಪತಿ, ಕುಣಿಗಲ್​ ಶಾಸಕ ಡಾ. ರಂಗನಾಥ್, ಎಂಎಲ್​ಸಿ ಪುಟ್ಟಣ್ಣ ಸೇರಿದಂತೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಸಿಎಂ ಗೃಹ ಕಚೇರಿ ಕೃಷ್ಣಾ ಮತ್ತು ಬಿಎಸ್​ವೈ ನಿವಾಸದ ಸಿಬ್ಬಂದಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಪ್ತಸಹಾಯಕ… ಹೀಗೆ ಹಲವರಿಗೆ ಕರೊನಾ ವಕ್ಕರಿಸಿದೆ.
ಸಿಎಂ ಕಚೇರಿ-ನಿವಾಸದಲ್ಲಿ 7 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್​ನಲ್ಲಿ ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 1 =
Remember me
