ಹಿರೇಕೆರೂರು:ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ರಸ್ತೆ ಪಕ್ಕದ ಹೊಂಡಕ್ಕೆ ಜಿಗಿದು ಮೃತಪಟ್ಟಿದೆ.
ನಿಷೇಧದ ನಡುವೆಯೂ ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ರಾಜಾರೋಷವಾಗಿ ನಡೆಯುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸ್ಪರ್ಧೆಯ ವೇಳೆ ಬೆದರಿದ ಹೋರಿ ಹಗ್ಗ ಹಿಡಿದ ಯುವಕನ ಸಮೇತ ಪಕ್ಕದಲ್ಲಿನ ಹೊಂಡಕ್ಕೆ ಜಿಗಿಯಿತು. ಯುವಕ ನೀರಲ್ಲಿ ಈಜಿ ಅಪಾಯದಿಂದ ಪಾರಾದ. ಆದರೆ ಹೋರಿ ಇನ್ನೊಂದು ದಡಕ್ಕೆ ಈಜುತ್ತ ಹೋಗಲು ಯತ್ನಿಸಿತ್ತಾದರೂ ಅದಕ್ಕೆ ಕಟ್ಟಿದ ಹಗ್ಗ ಕಾಲಿಗೆ ಸಿಲುಕಿ ಈಜಲಾಗದೆ ಹೊಂಡದಲ್ಲೇ ಪ್ರಾಣಬಿಟ್ಟಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ಮೃತಪಟ್ಟ ಹೋರಿ ಹೆಸರು ವರದಾನಾಯಕ. ಹೋರಿ ಹಬ್ಬದ ಅಭಿಮಾನಿಗಳ ಎದುರೇ ವರದಾನಾಯಕ ಹೋರಿ ದುರ್ಮರಣಕ್ಕೀಡಾಗಿದೆ. ಸುಮಾರು ಎರಡು ಲಕ್ಷ ಮೌಲ್ಯದ ಕೊಬ್ಬರಿ ಹೋರಿಯನ್ನು ಕಳೆದುಕೊಂಡ ಮಾಲೀಕ ಸ್ಥಳದಲ್ಲೇ ಕಣ್ಣೀರು ಹಾಕಿದರು.
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
