ಕೋಲಾರ:ಹುಲ್ಲನ್ನು ಮೇಯುವುದರಲ್ಲಿ ಮಗ್ನವಾಗಿದ್ದ ಹಸು, ತನ್ನ ಮುಂದೆ ಏಕಾಏಕಿ ಬಂದ ಹಾವನ್ನು ನೋಡಿ, ತೀವ್ರ ಕಂಗಾಲಾಗಿ ಬಾವಿಗೆ ಬಿದ್ದ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.
ಬೂದಿಕೋಟೆ ಹೋಬಳಿಯ ಆಲಂಬಾಡಿ ಗ್ರಾಮದ ವೆಂಕಟೇಶ್​ ಎಂಬುವರಿಗೆ ಸೇರಿದ ಹಸು ಬಾವಿಯೊಂದರ ಪಕ್ಕ ಹುಲುಸಾಗಿ ಬೆಳೆದ ಹುಲ್ಲನ್ನು ಮೇಯುತ್ತಿತ್ತು. ಹೀಗೆ ಮೇಯುತ್ತ ಮುಂದೆ ಹೋಗುತ್ತಿದ್ದ ಹಸುವಿಗೆ ಮುಂದೆ ಒಂದು ಹಾವು ಕಾಣಿಸಿದೆ. ಆ ಹಾವೂ ಕೂಡ ಹಸುವನ್ನು ನೋಡಿ ಬುಸುಗುಟ್ಟಿದೆ. ಹೆದರಿ ಕಂಗಾಲಾದ ಹಸು ಸುಮಾರು 60 ಅಡಿ ಆಳದ ಬಾವಿಗೆ ಬಿದ್ದು ಪರದಾಡುವಂತಾಯಿತು.ಇದನ್ನೂ ಓದಿ:ರಾಗಿಣಿ ವಾಟ್ಸ್​ಆ್ಯಪ್​​​ನಲ್ಲಿ ‘ಶ್ರೀ’ ಎಂದು ಸೇವ್​ ಆಗಿದ್ದವ ಅರೆಸ್ಟ್​; ನಟಿ ಇಲ್ಲದಾಗಲೂ ಫ್ಲ್ಯಾಟ್​ಗೆ ಹೋಗಿದ್ದ !
ಆದರೆ ಬಾವಿಯಲ್ಲಿ ತುಂಬ ನೀರು ಇಲ್ಲದ ಕಾರಣ ಹಸು ಮುಳಗದೆ ಅಪಾಯದಿಂದ ಪಾರಾಯಿತು. ನಂತರ ಯಂತ್ರಗಳ ಮೂಲಕ ಹಸುವನ್ನು ಎತ್ತಲಾಗಿದೆ. ಈ ಗೋವನ್ನು ಸುಮಾರು 2 ಗಂಟೆಗಳ ಸತತ ಕಾರ್ಯಾಚರಣೆ ನಂತರ ಬಾವಿಯಿಂದ ಮೇಲಕ್ಕೆತ್ತಲಾಗಿದೆ. ಆದರೆ ಹಸುವಿನ ಒಂದು ಕಾಲು ಮುರಿದಿದ್ದು, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಅಪಾಯದಲ್ಲಿ ಹಾವೇರಿ; ಮುನ್ನೆಚ್ಚರಿಕೆಗೆ ಗೃಹ ಸಚಿವರಿಂದ ಖಡಕ್​ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + thirteen =
Remember me
