ಹುಬ್ಬಳ್ಳಿ:ಇಂದು ಬೆಳ್ಳಂಬೆಳಗ್ಗೆ ಮೂಕಪ್ರಾಣಿಯೊಂದು ರಸ್ತೆಪಕ್ಕದ ಒಳಚರಂಡಿಗೆ ಬಿದ್ದು, ಸಾವು-ಬದುಕಿನ ನಡುವೆ ನರಳಾಡುತ್ತ ರೋದಿಸುತ್ತಿದ್ದ ಘಟನೆ ನಗರದ ದೇಸಾಯಿ ಸರ್ಕಲ್ ಬಳಿ ಸಂಭವಿಸಿದೆ.
ಇಲ್ಲಿನ ರಸ್ತೆ ಪಕ್ಕದಲ್ಲೇ ತೆರೆದ ಒಳಚರಂಡಿಗೆ ಬೀಡಾಡಿ ದನ ಬಿದ್ದಿದೆ. ಹುಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬೆಳಗ್ಗೆ 11 ಗಂಟೆಯಾದರೂ ಒಳಚರಂಡಿಯಲ್ಲಿದ್ದ ದನದ ರಕ್ಷಣೆ ಕಾರ್ಯ ಆರಂಭವಾಗಿರಲಿಲ್ಲ.
ಇದನ್ನೂ ಓದಿರಿಪತ್ನಿ ಮನೆಗೆ ಹೋಗಿ ವಾಪಸ್​ ಬರುತ್ತಿದ್ದ ಪತಿ ರಸ್ತೆಯಲ್ಲೇ ಸುಟ್ಟುಕರಕಲಾದ!
ರಸ್ತೆಬದಿಯ ಒಳಚರಂಡಿ ಮೇಲೆ ಮುಚ್ಚಳಿಕೆ ಇರಲಿಲ್ಲ. ಮೇಯುತ್ತ ಬಂದ ಬೀಡಾಡಿ ದನ ಈ ಚರಂಡಿಗೆ ಬಿದ್ದು, ರೋದಿಸುತ್ತಿದ್ದ ದೃಶ್ಯ ಎಂತಹವರಮನಕಲಕುವಂತಿದೆ. ದನದ ಕುತ್ತಿಗೆ ವರೆಗೂ ಚರಂಡಿ ನೀರು ಆವರಿಸಿದ್ದು, ತಲೆಯನ್ನು ಮೇಲಕ್ಕೆತ್ತಿ ಗಾಬರಿಯಿಂದ ಪಿಳಿಪಿಳಿ ಕಣ್ಣು ಬಿಟ್ಟು ಜನರನ್ನು ನೋಡುತ್ತಲೇ ಇತ್ತು. ಚರಂಡಿಗೆ ಬಿದ್ದ ದನವನ್ನು ಮೇಲೆತ್ತಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದರು. ಅಷ್ಟರಲ್ಲಿ ಮಾಹಿತಿ ತಿಳಿದ ಪಾಲಿಕೆ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಒಳಚರಂಡಿಯಿಂದ ದನವನ್ನು ಮಧ್ಯಾಹ್ನ 12ರ ಸುಮಾರಿಗೆ ಮೇಲಕ್ಕೆತ್ತಿದರು. ಪ್ರಾಣಭೀತಿಯಲ್ಲಿದ್ದ ದನ ಹೊರಬರುತ್ತಿದ್ದಂತೆ ನಿಟ್ಟುಸಿರುಬಿಟ್ಟಿತು.
https://www.facebook.com/VVani4U/videos/359197425080576/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
