ಹುಬ್ಬಳ್ಳಿ:ಆತ ವನವಾಸ ಮಾಡಿದ ರಾಮನಲ್ಲ. ತನಗೆ ಅದು ಬೇಕು-ಇದು ಬೇಕು ಎಂದು ಹಂಬಲಿಸುವ ಮನುಷ್ಯ ಜೀವಿಯಂತೂ ಅಲ್ಲವೇ ಅಲ್ಲ. ಆದರೆ ತನ್ನ ಜೀವನವನ್ನೇ ಒಂದು ಕುಟುಂಬಕ್ಕಾಗಿ ಶ್ರಮಿಸಿದ ನಿಸ್ವಾರ್ಥ ಜೀವಿ ಈ ರಾಮ. ಅವನ ಅಗಲಿಕೆಗೆ ಕುಟುಂಬ ಮಾತ್ರವಲ್ಲದೆ ಊರಿಗೆ ಊರೇ ಕಂಬನಿ ಮಿಡಿದಿದೆ. ಹಾಗಿದ್ದರೆ ಯಾರು ಆ ರಾಮ‌? ಅಲ್ಲಿ ಆಗಿದ್ದಾದರೂ ಏನು ಅಂತೀರಾ? ಈ ಸ್ಟೋರಿ ಓದಿ.
ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೈತ ಅಶೋಕ ಗಾಮನಗಟ್ಟಿ ಕುಟುಂಬವು ತನ್ನ ಮನೆಯಲ್ಲಿ 1994ರ ಜುಲೈ 12ರಂದು ಜನಸಿದ ಎತ್ತಿಗೆ ರಾಮ ಎಂದು ನಾಮಕರಣ ಮಾಡಿ ಮಗನಂತೆ ಜೋಪಾನ ಮಾಡಿದ್ದರು. ಪ್ರತಿವರ್ಷ ರಾಮನ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿ ಆರತಿ ಬೆಳಗುವ ಮೂಲಕ ಮನೆಯ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಿದ್ದರು.ಇದನ್ನೂ ಓದಿರಿಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಸುಮಾರು 27 ವರ್ಷಗಳ ಕಾಲ ರೈತ ಅಶೋಕ ಗಾಮನಗಟ್ಟಿ ಕುಟುಂಬಕ್ಕಾಗಿಯೇ ದುಡಿದ ರಾಮ ಇಂದು(ಗುರುವಾರ) ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ‌ ಮುಗಿಲು ಮುಟ್ಟಿದೆ. ರಾಮ ಮಾಡಿದ ಸೇವೆಯನ್ನು ಮನೆ ಮಂದಿ ಮಾತ್ರವಲ್ಲದೆ ಗ್ರಾಮಕ್ಕೆ ಗ್ರಾಮವೇ ಮೆಲುಕು ಹಾಕುತ್ತಿದೆ. ಮೃತ ರಾಮನಿಗೆ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಿದ್ದ ಕುಟುಂಬಸ್ಥರು, ಟ್ರ್ಯಾಕ್ಟರ್​ನಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಸಕಲ ವಾದ್ಯ ಮೇಳದೊಂದಿಗೆ ಊರಲ್ಲಿ ಮೆರವಣಿಗೆ ಮಾಡಿದರು. ಗ್ರಾಮದ ಒಬ್ಬ ಗಣ್ಯವ್ಯಕ್ತಿ ನಿಧನರಾದರೆ ಯಾವ ರೀತಿಯಲ್ಲಿ ಮೆರವಣಿಗೆ ಮಾಡುತ್ತಾರೋ ಅದೇ ರೀತಿಯಲ್ಲಿ ಮೂಕಪ್ರಾಣಿ ರಾಮನಿಗೂ ಗೌರವ ಸಲ್ಲಿಸಲಾಯಿತು. ಇನ್ನೂ ಪ್ರತಿವರ್ಷ ಹುಟ್ಟು ಹಬ್ಬದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿತ್ತು.ಆದರೆ ‌ಇಂದು ನಿಧನ ಹೊಂದಿದ ರಾಮನಿಗೆ ಗಾಮನಗಟ್ಟಿ ರೈತ ಕುಟುಂಬ ಕಣ್ಣೀರು ಸಮರ್ಪಣೆ ಮಾಡಿದೆ.
ಮೂಕ ಪ್ರಾಣಿಯ ಜೊತೆಗೆ ಈ ಕುಟುಂಬ ಉತ್ತಮ ಬಾಂಧವ್ಯ ಹೊಂದಿತ್ತು. ದಿನದ 24 ಗಂಟೆಯೂ ರಾಮನೊಂದಿಗೆ ಒಡನಾಟ ಹೊಂದಿದ್ದ ಅಶೋಕ ಗಾಮನಗಟ್ಟಿ ಕುಟುಂಬ ರಾಮನಿಲ್ಲದೆ ಅನಾಥಭಾವದಲ್ಲಿ ಕಣ್ಣೀರು ಹಾಕಿದೆ. ರಾಮನ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೇ ಹುಟ್ಟಿ ಬಾ ರಾಮ ಎಂದು ಗ್ರಾಮಸ್ಥರು ರಾಮನಿಗೆ ವಿದಾಯ ಹೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.(ದಿಗ್ವಿಜಯ ನ್ಯೂಸ್​)
ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 13 =
Remember me
