ದಾವಣಗೆರೆ:ಸಾಕುಪ್ರಾಣಿಗಳನ್ನು ಮನುಷ್ಯರು ಪ್ರಾಣಾಪಾಯಗಳಿಂದ ಕಾಪಾಡಿದ ಪ್ರಕರಣಗಳು ಬಹಳಷ್ಟಿವೆ. ಆದರೆ ಇಲ್ಲೊಂದು ಕಡೆ ಸಾಕುಪ್ರಾಣಿಯೇ ಮನುಷ್ಯನ ಜೀವ ಉಳಿಸಿದೆ. ಹಸುವೊಂದು ತನ್ನ ಮಾಲೀಕನನ್ನು ಚಿರತೆ ದಾಳಿಯಿಂದ ಪಾರು ಮಾಡಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹತ್ತಿರದ ಕೊಡಕಿನಕೆರೆ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕೊಡಕಿನಕೆರೆ ಗ್ರಾಮದ ಕರಿಹಾಲಪ್ಪ ಚಿರತೆ ದಾಳಿಗೆ ಒಳಗಾಗಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಕರಿಹಾಲಪ್ಪ ತೋಟದಲ್ಲಿ ಹಸು ಮೇಯಿಸಲು ತೆರಳಿದ್ದಾಗ ಚಿರತೆ ಮೈಮೇಲೆ ಎರಗಿದೆ. ಆಗ ತಕ್ಷಣ ಧಾವಿಸಿದ ಹಸು ಗೌರಿ, ಚಿರತೆಗೆ ಗುದ್ದಿದೆ. ಆಗ ಬಿಟ್ಟು ಕದಲಿದ ಚಿರತೆ ಮತ್ತೆ ತನ್ನ ಮೈಮೇಲೆರಗಲು ಮುಂದಾಗುತ್ತಿದ್ದಂತೆ ಕರಿಹಾಲಪ್ಪ ದೊಣ್ಣೆ ಹಿಡಿದುಕೊಂಡು ಬೆದರಿಸಿದ್ದಾರೆ. ಇದರಿಂದ ಬೆದರಿದ ಚಿರತೆ ಓಡಿ ಹೋಗಿದೆ.
ಇದನ್ನೂ ಓದಿ:ಮನೆ ಬಳಿ ನಾಗರಹಾವುಗಳ ರಾಶಿಯೇ ಪ್ರತ್ಯಕ್ಷ!; 25ಕ್ಕೂ ಹೆಚ್ಚು ಸರ್ಪಗಳನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ
ಚಿರತೆ ದಾಳಿಯಿಂದ ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ ಹಸು ಬಗ್ಗೆ ಕರಿಹಾಲಪ್ಪ ಮತ್ತು ಕುಟುಂಬಸ್ಥರು ಖುಷಿಯಾಗಿದ್ದು, ಊರವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರತೆಯ ದಾಳಿಯಿಂದ ಕೊಡಕಿನಕೆರೆ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಆತಂಕ ಉಂಟಾಗಿದ್ದು, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದೆ. ಅಂದಹಾಗೆ ಈ ಪ್ರಕರಣ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಲೇಜು ಬಸ್ ಚಾಲಕನಿಂದಲೇ ವಿದ್ಯಾರ್ಥಿನಿಯ ಅಪಹರಣ?; ಮಗಳನ್ನು ಹುಡುಕಿಕೊಡಿ ಎಂದು ತಂದೆಯಿಂದ ದೂರು

ಚುಡಾಯಿಸಿದವನಿಗೆ ಚಪ್ಪಲಿಯಲ್ಲಿ ಹೊಡೆದ ಕಾಲೇಜು ವಿದ್ಯಾರ್ಥಿನಿ; ಪೊಲೀಸರ ವಶಕ್ಕೆ ಆರೋಪಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
