ರುದ್ರಣ್ಣ ಹರ್ತಿಕೋಟೆ
ಬೆಂಗಳೂರು :ಉತ್ತರ ಪ್ರದೇಶ ಮಾದರಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ವಿಧೇಯಕ ಮಂಡಿಸಿದ್ದು, ಇದರ ಅನುಷ್ಠಾನಕ್ಕೆ ಸರ್ಕಾರದ ಮುಂದೆ ಸವಾಲುಗಳ ರಾಶಿಯೇ ಇದೆ. ಬಿಜೆಪಿಯ ಗೋವು ಪ್ರಕೋಷ್ಠ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ 2010ರ ಕಾಯ್ದೆಯನ್ನು ಮರು ಜಾರಿ ಮಾಡಬೇಕೆಂದು ಒತ್ತಾಯ ಮಾಡಿತ್ತು. ಅದರ ಆಧಾರದಲ್ಲಿಯೇ ಹೊಸ ಕಾಯ್ದೆ ವಿಧಾನಮಂಡಲದಲ್ಲಿ ಅಂಗೀಕಾರವಾಗಿದೆ.
ದೇವಾಲಯಗಳಿಂದ ಗೋಶಾಲೆ
ರಾಜ್ಯದ ದೇವಾಲಯಗಳಿಂದ ಗೋಶಾಲೆಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿತ್ತು. 25 ಮುಜುರಾಯಿ ದೇವಾಲಯಗಳ ಪಟ್ಟಿ ಸಹ ಮಾಡಲಾಗಿತ್ತು. ಆದರೆ ಇದುವರೆವಿಗೂ ಆ ಯೋಜನೆ ಜಾರಿಗೆ ಬಂದಿಲ್ಲ. ನೋಂದಾಯಿತ ಸಂಸ್ಥೆಯಿಂದ ಅನುಮತಿ ಪಡೆದು ಗೋಶಾಲೆಗಳನ್ನು ಸ್ಥಾಪಿಸಬಹುದಾಗಿದೆ. ಎಷ್ಟು ಖಾಸಗಿಯವರು ಮುಂದೆ ಬರುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ 2010ರಲ್ಲಿ ತಂದಿದ್ದ ಕಾಯ್ದೆಯನ್ನು ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಕಾಯ್ದೆ ಅನುಷ್ಠಾನ ಹೇಗೆ ಮಾಡಲಾಗುತ್ತದೆ ಎಂಬುದೇ ಸರ್ಕಾರದ ಮುಂದಿರುವ ಯಕ್ಷ ಪ್ರಶ್ನೆ. ರಾಜ್ಯದಲ್ಲಿ ಒಟ್ಟಾರೆ ಮೂರು ಕೋಟಿಗೂ ಅಧಿಕ ಜಾನುವಾರುಗಳಿವೆ. ಅದರಲ್ಲಿ ಹಸು, ಎತ್ತು ಸುಮಾರು 85 ಲಕ್ಷ ಇದ್ದರೆ, ಎಮ್ಮೆ, ಕೋಣ ಸುಮಾರು 29 ಲಕ್ಷ ಇವೆ ಎಂಬುದು ಸರ್ಕಾರದ ಅಂಕಿ-ಅಂಶಗಳಿಂದ ಲಭ್ಯ. ಉಳಿದವರು ಕುರಿ, ಮೇಕೆ, ಹಂದಿ, ಕತ್ತೆ, ಆನೆ ಮೊದಲಾದ ಪ್ರಾಣಿಗಳಾಗಿವೆ.
ಸವಾಲುಗಳೇನು?:ಉತ್ತರ ಪ್ರದೇಶದಲ್ಲಿ ಸಾಕಷ್ಟು ಸಿದ್ಧತೆಯೊಂದಿಗೆ ಜಾರಿ ಮಾಡಲಾಗುತ್ತಿದೆ. ಕೇವಲ ಕಾನೂನು ಮಾತ್ರ ರೂಪಿಸುವುದು ಹಾಗೂ ಶಿಕ್ಷೆಯ ಪ್ರಮಾಣದ ಬಗ್ಗೆ ಪ್ರಚಾರ ಮಾಡುವುದು ಮಾತ್ರವಲ್ಲ, ಕಾಯ್ದೆಯನ್ನು ಅನುಷ್ಠಾನ ಮಾಡುವುದೇ ಸವಾಲು ಎಂಬುದನ್ನು ಇಲಾಖೆ ಅಧಿಕಾರಿಗಳೇ ಒಪು್ಪತ್ತಾರೆ.
* ಉತ್ತರ ಪ್ರದೇಶಲ್ಲಿ 1500ಕ್ಕೂ ಹೆಚ್ಚು ಗೋಶಾಲೆಗಳಿವೆ. ಕೆಲವು ಸರ್ಕಾರದ ವ್ಯಾಪ್ತಿಯಲ್ಲಿದ್ದರೆ, ಖಾಸಗಿಯವೂ ಇವೆ. ರಾಜ್ಯದಲ್ಲಿ ಸರ್ಕಾರದ ಗೋಶಾಲೆಗಳಿಲ್ಲ. ಬೆರಳೆಣಿಕೆಯಷ್ಟು ಖಾಸಗಿ ಗೋಶಾಲೆಗಳಿವೆ. ಹಿಂದೆ ಪಿಂಜರಪೋಲ್​ಗಳಿದ್ದವು, ಈಗ ಅವೂ ಮುಚ್ಚಿವೆ. ಖಾಸಗಿ ಗೋಶಾಲೆಗಳಿಗೆ ಸರ್ಕಾರದ ನೆರವು ಇದ್ದೇ ಇದೆ. ಆದರೆ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ವಯಸ್ಸಾದ ಜಾನುವಾರುಗಳನ್ನು ನೋಡಿಕೊಳ್ಳಲು ಗೋಶಾಲೆಗಳ ಅಗತ್ಯ ಬೀಳುತ್ತದೆ. ಆ ನಿಟ್ಟಿನಲ್ಲಿ ದೊಡ್ಡ ಸವಾಲಿದು.* ರಾಜ್ಯದಲ್ಲಿಯೂ 1000 ಗೋಶಾಲೆಗಳಾದರೂ ಅಗತ್ಯವಿದೆ ಎಂಬ ಮಾಹಿತಿ ಇದೆ. ಅದಕ್ಕೆ ಜಾಗ, ಹಣ ಹೊಂದಿಸಬೇಕಾಗಿದೆ. ಸಿಬ್ಬಂದಿ ನೇಮಕವೂ ಆಗಬೇಕು.* ಉತ್ತರ ಪ್ರದೇಶ ಸರ್ಕಾರ ಜಾನುವಾರುಗಳ ನಿರ್ವಹಣೆಗೆಂದು ತಲಾ 30 ರೂ. ನೀಡುತ್ತಿದೆ ಎಂಬ ಮಾಹಿತಿ ಅಲ್ಲಿಗೆ ಅಧ್ಯಯನಕ್ಕೆ ಹೋದ ತಂಡಕ್ಕೆ ಲಭ್ಯವಾಗಿದೆ. ರಾಜ್ಯದಲ್ಲಿ ಈ ರೀತಿ ನೀಡಲು ಪ್ರತಿ ಬಜೆಟ್​ನಲ್ಲಿ ದೊಡ್ಡ ಮೊತ್ತವನ್ನೇ ಪಶು ಸಂಗೋಪನಾ ಇಲಾಖೆಗೆ ತೆಗೆದಿರಿಸಬೇಕಾಗುತ್ತದೆ. ಕಾಯ್ದೆಯಲ್ಲಿ ವಿಶೇಷ ಅನುದಾನ ನೀಡಿಲ್ಲ. ಬದಲಾಗಿ ಇಲಾಖೆ ಅನುದಾನವನ್ನೇ ಬಳಸುವುದಾಗಿ ಹೇಳಿದೆ.* ರಾಜ್ಯದಲ್ಲಿ ದನದ ಮಾಂಸದ ವಹಿವಾಟು ವಾರ್ಷಿಕ ಸುಮಾರು 455 ಕೋಟಿ ರೂ. ಇದೆ. ಅದನ್ನು ಸಂಪೂರ್ಣ ನಿಷೇಧ ಮಾಡಿದರೆ ವಹಿವಾಟು, ಅದರ ತೆರಿಗೆ ಭರಿಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಸರ್ಕಾರ ನೋಡಬೇಕಾಗಿದೆ. ಕಾಯ್ದೆಯಲ್ಲಿ ಪರ್ಯಾಯಗಳನ್ನು ಸರ್ಕಾರ ನೋಡಿಲ್ಲ.* ಉತ್ತರ ಪ್ರದೇಶದಲ್ಲಿ ಕಾಯ್ದೆ ಜಾರಿಗೆ ಬಂದ ನಂತರ ಸಾಕಷ್ಟು ಮೊಕದ್ದಮೆಗಳು ದಾಖಲಾಗುತ್ತಿವೆ. ಅಲ್ಲಿನ ನ್ಯಾಯಾಲಯವೇ ಕಾಯ್ದೆ ದುರುಪಯೋಗವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆ ರೀತಿ ದುರುಪಯೋಗವಾಗದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು.* ರಾಜ್ಯದೊಳಗೆ ಅಥವಾ ಹೊರ ರಾಜ್ಯಕ್ಕೆ ಜಾನುವಾರು ಸಾಗಣೆ ಮಾಡಲು ಅನುಮತಿ ಪಡೆಯಬೇಕಾಗುತ್ತದೆ. ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗದಂತೆ, ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕೃಷಿ ಹಾಗೂ ಪಶು ಪಾಲನೆಗೆ ಸಾಗಣೆಗೆ ಅಡ್ಡಿ ಇಲ್ಲ. ಕಾಯ್ದೆ ದುರುಪಯೋಗ ಆಗುವುದೇ ಇಲ್ಲಿ ಎಂಬುದು ತಜ್ಞರ ಅಭಿಪ್ರಾಯ.* ಉತ್ತರ ಪ್ರದೇಶದಲ್ಲಿ ಒಟ್ಟಾರೆ ಕಾಯ್ದೆ ನಿರ್ವಹಣೆಗೆ ಸಂಸ್ಥೆಯೊಂದನ್ನು ನೋಂದಾಯಿಸಲಾಗುತ್ತದೆ. ರಾಜ್ಯದಲ್ಲಿಯೂ ಅಂತಹದ್ದೆ ಸಂಸ್ಥೆ ಮಾಡಲಾಗುತ್ತಿದೆ. ಅದರ ಸ್ವರೂಪ ನಿಗದಿಯಾಗಬೇಕಿದೆ.* ರಾಜ್ಯದ ಕಾನೂನಿನಲ್ಲಿ ಗೋ ರಕ್ಷಕರ ಮೇಲೆ ಯಾವುದೇ ಕ್ರಮವಿಲ್ಲ ಎಂಬ ಅಂಶ ಇದೆ. ಇದು ಮುಂದಿನ ದಿನಗಳಲ್ಲಿ ಯಾವುದೇ ದುರುಪಯೋಗವಾಗದಂತೆ ಎಚ್ಚರ ವಹಿಸುವ ಹೊಣೆ ಸರ್ಕಾರದ ಮೇಲಿದೆ.
ಉತ್ತರ ಪ್ರದೇಶದ ಕಾಯ್ದೆಯಲ್ಲಿ ಏನಿದೆ? :ಅಕ್ರಮ ಹತ್ಯೆ, ಅಕ್ರಮ ಸಾಗಣೆ ಮಾಡುವುದಕ್ಕೆ 10 ವರ್ಷ ಜೈಲು, 5 ಲಕ್ಷ ರೂ. ತನಕ ದಂಡ ವಿಧಿಸಲಾಗುತ್ತದೆ. ರಾಜ್ಯದಲ್ಲಿಯೂ ಶಿಕ್ಷೆ ಪ್ರಮಾಣ ಇಷ್ಟೇ ಇದೆ. ರಾಜ್ಯದಲ್ಲಿಯೂ 2010ರ ಕಾಯ್ದೆಯಲ್ಲಿ ದಂಡದ ಪ್ರಮಾಣ ಇತ್ತು. ಯಾವುದೇ ರೀತಿಯ ಜಾನುವಾರು ವಧೆ ನಿಷೇಧವಿತ್ತು. 1964ರ ಕಾಯ್ದೆಯಲ್ಲಿ ಎಳೆಗರುಗಳ ಹತ್ಯೆ ನಿಷೇಧ ಇದ್ದರೆ, 12 ವರ್ಷ ಮೀರಿದ ಜಾನುವಾರುಗಳನ್ನು ಅನುಮತಿ ಪಡೆದು ವಧೆ ಮಾಡಲು ಅವಕಾಶ ಇತ್ತು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
35 ಲಕ್ಷ ರೂ. ವರೆಗಿನ ಫ್ಲ್ಯಾಟ್ ಖರೀದಿ ಮುದ್ರಾಂಕ ಶುಲ್ಕ ಶೇ. 2-3ರಷ್ಟು ಇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
