ಬೆಂಗಳೂರು:ಗೋ ಹತ್ಯೆ ನಿಷೇಧ ಕಾನೂನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂಬ ಬಹುಜನರ ಬೇಡಿಕೆ ಈಡೇರುವ ಸಮಯ ಸಮೀಪದಲ್ಲಿದೆ. ಹೀಗೊಂದು ಸುಳಿವನ್ನು ರಾಜ್ಯದ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶುಕ್ರವಾರ ನೀಡಿದ್ದಾರೆ.
ದ ಕರ್ನಾಟಕ ಪ್ರಿವೆನ್ಶನ್ ಆಫ್​ ಸ್ಲಾಟರ್​ ಆ್ಯಂಡ್ ಪ್ರಿವೆನ್ಶನ್​ ಆಫ್ ಕ್ಯಾಟಲ್​ ಬಿಲ್​ ಅನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಪಶು ಸಂಗೋಪಾನ ಸಚಿವ ಪ್ರಭು ಚವಾಣ್ ಅವರಲ್ಲಿ ವಿನಂತಿ ಮಾಡಿದ್ದೇನೆ. ಅವರೂ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಈ ಕೆಲಸ ನಡೆಯಲಿದೆ ಎಂದು ಸಿ.ಟಿ.ರವಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ಅವಳು ನನ್ನ ಗಂಡನ ಜತೆಗಿದ್ದಾಳೆ ಎಂದು ಇವಳು ಕೋಣೆಗೆ ಬೀಗ ಹಾಕಿದಳು; ಗಂಡ-ಹೆಂಡತಿ ಮತ್ತು ಅವಳು.. ಆಮೇಲಾಗಿದ್ದೇನು?
ಸಿ.ಟಿ. ರವಿ ಕೆಲವು ದಿನಗಳ ಹಿಂದೆ ಲವ್ ಜಿಹಾದ್ ತಡೆಗೆ ಅಲಹಾಬಾದ್ ಹೈ ಕೋರ್ಟ್ ಆದೇಶದ ಅಂಶಗಳನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಮತಾಂತರ ಮಾಡುವುದಕ್ಕಾಗಿ ನಮ್ಮ ಸೋದರಿಯರನ್ನು ಪ್ರೀತಿ, ಪ್ರೇಮದ ಬಲೆಗೆ ಕೆಡವಿ ಬಲವಂತದ ಮತಾಂತರ ಮಾಡವುದನ್ನು ನೋಡುತ್ತ ಸುಮ್ಮನಿರಲಾಗದು. ಇಂತಹ ಕೆಲಸದಲ್ಲಿ ನಿರತರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇ ಬೇಕು ಎಂದು ಆಗ್ರಹಿಸಿದ್ದರು.
Cow Slaughter Ban will be a reality in Karnataka in the near future.
In have asked Animal Husbandry Minister Sri@PrabhuChavanBJPto get "The Karnataka Prevention of Slaughter & Preservation of Cattle Bill" passed in the Cabinet and present the same in upcoming Assembly Session.
— C T Ravi 🇮🇳 ಸಿ ಟಿ ರವಿ (@CTRavi_BJP)November 20, 2020

ರುಪೇ ಕಾರ್ಡ್​ ಫೇಸ್ 2 ಬಿಡುಗಡೆ ಮಾಡಿದ ಭಾರತ, ಭೂತಾನ್ ಪ್ರಧಾನಿಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
