ಬಾಗಲಕೋಟೆ:ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿರುವಂತಹ ಅಚ್ಚರಿಯ ಘಟನೆಯೊಂದು ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.
ಆಸಂಗಿ ಗ್ರಾಮದ ರವೀಂದ್ರ ಬಾಳಪ್ಪ ಶಿರಹಟ್ಟಿ ಎಂಬುವವರಿಗೆ ಸೇರಿ ಆಕಳು ನಾಲ್ಕು ಕರುಗಳಿಗೆ ಜನ್ಮ ನೀಡಿದ ವಿಶೇಷ ಹಸು. ನಾಲ್ಕು ಕರುಗಳಲ್ಲಿ ಎರಡು ಗಂಡು ಹಾಗೂ ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.
ನಾಲ್ಕು ಕರುಗಳಿಗೆ ಏಕಕಾಲಕ್ಕೆ ಜನ್ಮ ನೀಡಿದ ಹಸುವಿಗೆ ಇದು ಮೊದಲ ಹೆರಿಗೆಯಾಗಿದ್ದು, ತಾಯಿ ಸೇರಿದಂತೆ ಕರುಗಳು ಆರೋಗ್ಯದಿಂದ ಇವೆ. ರವೀಂದ್ರ ಅವರು ಕುಟುಂಬ ಮೊದಲಿನಿಂದಲೂ ಹೈನುಗಾರಿಕೆ ಮಾಡಿಕೊಂಡು ಬರುತ್ತುದೆ. ಈ ರೀತಿಯ ವಿಶೇಷ ಹೆರಿಗೆ ಒಮ್ಮೆಯೂ ಆಗಿಲ್ಲ. ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಹಸು ಜನ್ಮ‌ ನೀಡಿದ್ದು ಕುಟುಂಬದಲ್ಲಿ ಸಂತಸ ತಂದಿದೆ ಎಂದು ರವೀಂದ್ರ ಹೇಳಿಕೊಂಢಿದ್ದಾರೆ.
Sign in to your account
Please enter an answer in digits:16 − eleven =
Remember me
