ಚಿಕ್ಕಮಗಳೂರು:ಗೋಕಳ್ಳರು ದೇವಸ್ಥಾನದ ಬಸವನನ್ನೂ ಬಿಟ್ಟಿಲ್ಲ. ಆದರೆ ದೇವರ ಮಹಿಮೆಯೋ ಏನೋ ಎಂಬಂತೆ ಆ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ನಡೆದಾಡುವ ಮೈಲಾರಲಿಂಗ ಎಂದೇ ಹೆಸರಾಗಿದ್ದ ದೇವರ ಬಸವ ವಾಪಸ್ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿರುವ ಮೈಲಾರಲಿಂಗ ದೇವಸ್ಥಾನದ ಬಸವ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಾಡುವ ಮೈಲಾರಲಿಂಗ ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ ದೇವಸ್ಥಾನದ ಆವರಣದಲ್ಲಿ ಬಸವ ಕಾಣಿಸದೇ ಇರುವುದರಿಂದ ಭಕ್ತರು ಚಿಂತೆಗೀಡಾಗಿದ್ದರು.
ಮೈಲಾರಲಿಂಗ ದೇವಸ್ಥಾನದ ಈ ಬಸವನನ್ನೂ ಗೋಕಳ್ಳರು ಬಿಟ್ಟಿರಲಿಲ್ಲ. ಆದರೆ ಕದ್ದುಕೊಂಡು ಹೋಗಿದ್ದವರು ತುಮಕೂರು ಜಿಲ್ಲೆಯ ಅಮೃತೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಹೀಗೆ ಸಿಕ್ಕ ಬಸವ ಮೈಲಾರಲಿಂಗ ದೇವಸ್ಥಾನದ್ದು ಎಂದು ತಿಳಿದ ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದು ಈ ಬಸವ ಮರಳಿ ದೇವಸ್ಥಾನಕ್ಕೆ ಬಂದಿದ್ದು, ನೂರಾರು ಮಂದಿ ಸೇರಿ ಭರ್ಜರಿ ಸ್ವಾಗತ ಕೋರಿದರು.

ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 6 =
Remember me
