ಶಿವಮೊಗ್ಗ:ಇಲ್ಲಿ ದನಗಳ್ಳರನ್ನು ಗೋಪ್ರೇಮಿಗಳು ಅಕ್ಷರಶಃ ಹಿಮ್ಮೆಟ್ಟಿಸಿದ್ದಾರೆ. ಅರ್ಥಾತ್​, ದನಗಳನ್ನು ಕದ್ದೊಯ್ಯಲು ಬಂದ ಕಳ್ಳರು ಕಾರನ್ನು ತಿರುಗಿಸಲೂ ಆಗದೆ ರಿವರ್ಸ್​ ಗೇರ್​ನಲ್ಲೇ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾರೆ. ಈ ದೃಶ್ಯದ ವಿಡಿಯೋ ತುಣುಕು ಇದೀಗ ವೈರಲ್​ ಆಗಿದ್ದು, ದನಗಳ್ಳರ ಪರಾರಿ ವಿಷಯ ಬೆಳಕಿಗೆ ಬಂದಿದೆ.
ಶಿವಮೊಗ್ಗದ ತೀರ್ಥಹಳ್ಳಿಯ ಕೊಪ್ಪ ಸರ್ಕಲ್​ನಲ್ಲಿ ರಾತ್ರಿ ದನಗಳನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಅದೇ ಸಮಯಕ್ಕೆ ಆ ದಾರಿಯಲ್ಲಿ ಸಾಗುತ್ತಿದ್ದ ಸುದೀಪ್ ಶೆಟ್ಟಿ ಹಾಗೂ ಜಾವೀದ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾರನ್ನು ತಿರುಗಿಸಲು ಆಗದ್ದರಿಂದ ಹಸುಗಳನ್ನು ಅಲ್ಲೇ ಬಿಟ್ಟ ದನಗಳ್ಳರು ರಿವರ್ಸ್​ ಗೇರ್​ನಲ್ಲೇ ಚಲಾಯಿಸಿಕೊಂಡು ಹಿಂದಕ್ಕೆ ಹೋಗಿದ್ದಾರೆ. ಆದರೂ ಬಿಡದ ಸುದೀಪ್​-ಜಾವೀದ್​ ಅವರನ್ನು ಚೇಸ್​ ಮಾಡಿದ್ದಾರೆ.
ಇದನ್ನೂ ಓದಿ:ಬರಲಿದೆ ಮತ್ತೊಂದು ಭೀಕರ ರೋಗ!: ಕರೊನಾ ಪೂರ್ತಿ ಹೋಗಲು ವರ್ಷಗಳೆಷ್ಟು ಬೇಕು ಗೊತ್ತಾ?; ಇಲ್ಲಿದೆ ಭವಿಷ್ಯ..
ಹೀಗೆ ಸುಮಾರು ಒಂದು ಕಿಲೋಮೀಟರ್​ನಷ್ಟು ದೂರ ರಿವರ್ಸ್​ನಲ್ಲೇ ಹೋದ ದನಗಳ್ಳರು, ಕೊನೆಗೆ ಸುದೀಪ್​-ಜಾವೀದ್ ಇದ್ದ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಅಂದಹಾಗೆ ಈ ಘಟನೆ ಮೊನ್ನೆ ರಾತ್ರಿ ನಡೆದಿದ್ದು, ಅದರ ವಿಡಿಯೋ ತುಣುಕು ವೈರಲ್​ ಆಗಿ ಪ್ರಕರಣ ಇದೀಗ ಎಲ್ಲರ ಗಮನ ಸೆಳೆಯಲಾರಂಭಿಸಿದೆ.
ತೀರ್ಥಹಳ್ಳಿ ಪಟ್ಟಣದಲ್ಲಿ ದನಗಳನ್ನು ಕಳ್ಳತನ ಮಾಡುವಾಗ ಕಳ್ಳರ ಕಾರನ್ನು ಅಡ್ಡಗಟ್ಟಿದ ಯುವಕರು. ಇನ್ನು ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಮಲೆನಾಡಿನಲ್ಲಿ ದನಗಳವು ಪ್ರಕರಣ ಹೆಚ್ಚಾಗುತ್ತಿದ್ದು, ರಾತ್ರಿ ದನಗಳನ್ನು ಕದ್ದು ಕಾರಿನಲ್ಲಿ ತುಂಬಿಸಿಕೊಂಡು ಹೋಗುವವರ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್​ಡೌನ್​ ವಿಸ್ತರಣೆ: ಸಿಎಂ ಬಿಎಸ್​ವೈ ಘೋಷಣೆ

ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
