| ರಮೇಶ ಹಾರ್ಸಿಮನೆ ಸಿದ್ದಾಪುರಪ್ರಸಕ್ತ ವರ್ಷ ಮಳೆ ಇಲ್ಲದೆ ಉತ್ತಮ ಬೆಳೆ ಬಾರದೆ ಆರ್ಥಿಕ ಸಮಸ್ಯೆಯ ಸುಳಿಗೆ ಸಿಲುಕಿದ್ದ ರೈತರ ಗಾಯದ ಮೇಲೆ ಸರ್ಕಾರ ಬರೆ ಎಳೆದಿದೆ. ಬೇಸಿಗೆ ಇನ್ನೂ ದೂರವಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುತ್ತಿರುವಾಗಲೇ ಕರ್ನಾಟಕ ಹಾಲು ಮಹಾಮಂಡಳ ನಂದಿನಿ ಪಶು ಆಹಾರದ ದರದಲ್ಲಿ ಏರಿಕೆ ಮಾಡಿದೆ. ಪ್ರತಿ ಮೆಟ್ರಿಕ್ ಟನ್​ಗೆ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಒಂದು ಸಾವಿರ ರೂ. ಗಳಷ್ಟು ಹೆಚ್ಚಿಗೆ ಮಾಡಿದ್ದು ಹೈನೋದ್ಯಮಕ್ಕೆ ಅಂಕುಶ ಹಾಕಿದಂತಾಗಿದೆ.
ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಹೈನೋದ್ಯಮಕ್ಕೆ ಬಿಸಿಲಿನ ಉರಿತಾಪ ಒಂದೆಡೆಯಾದರೆ ಈಗ ಪಶು ಆಹಾರ ದರವನ್ನು ಹೆಚ್ಚಿಗೆ ಮಾಡಿರುವುದರಿಂದ ಹೈನುಗಾರರು ಸಂಕಷ್ಟ ಎದುರಿಸುವಂತಾಗಿದೆ.
ನಂದಿನಿ ಗೋಲ್ಡ್, ಬೈಪಾಸ್ ಹಾಗೂ ಎಮ್ಮೆ ವಿಶೇಷ ಪಶು ಆಹಾರದ 50 ಕೆಜಿ ಚೀಲಕ್ಕೆ 49 ರೂ.ಗಳಷ್ಟು ಏರಿಕೆ ಮಾಡಿ ಧಾರವಾಡ ಹಾಲು ಒಕ್ಕೂಟ ತನ್ನ ವ್ಯಾಪ್ತಿಯ ಎಲ್ಲ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಸುತ್ತೋಲೆ ನೀಡಿದೆ.
ದರ ಪರಿಷ್ಕರಣೆ:ನಂದಿನಿ ಗೋಲ್ಡ್ 50 ಕೆಜಿ ಚೀಲಕ್ಕೆ ಒಕ್ಕೂಟದಿಂದ ಸಂಘಕ್ಕೆ ಈ ಹಿಂದಿನ ದರ 1224 ರೂ., ಈಗಿನ ನೂತನ ದರ 1273 ರೂ., ಬೈಪಾಸ್ ಪಶು ಆಹಾರ 50 ಕೆಜಿ ಚೀಲಕ್ಕೆ ಒಕ್ಕೂಟದಿಂದ ಸಂಘಕ್ಕೆ 1350 ರೂ. ಇದ್ದದ್ದು ಈಗ 1399 ರೂ. ಹಾಗೂ ಎಮ್ಮೆ ವಿಶೇಷ ಪಶು ಆಹಾರ ಮೊದಲಿನ ದರ ಒಕ್ಕೂಟದಿಂದ ಸಂಘಕ್ಕೆ 50 ಕೆಜಿ ಚೀಲಕ್ಕೆ 1350 ರೂ. ಇದ್ದದ್ದು ಈಗ ನೂತನ ದರ 1399ರೂ. ಆಗಿದೆ. ಪಶು ಅಹಾರ ದರವನ್ನು ಪರಿಷ್ಕರಣೆ ಮಾಡಿದರೂ ಹಾಲಿದ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ. ತಮ್ಮನ್ನು ಕೆಎಂಎಫ್ ಹಾಗೂ ಒಕ್ಕೂಟಗಳು ಕಡೆಗಣಿಸುತ್ತಿವೆ ಎಂದು ಹೈನುಗಾರ ರೈತರು ಆರೋಪಿಸುತ್ತಿದ್ದಾರೆ.
ಕಚ್ಚಾ ಪದಾರ್ಥಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪಶು ಆಹಾರದ ಬೆಲೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಬರಗಾಲದ ಹಿನ್ನೆಲೆಯಲ್ಲಿ ಈ ರೀತಿ ಆಗಿದೆ. ಹಿಂಗಾರಿನಲ್ಲಿ ಉತ್ತಮ ಬೆಳೆ ಬಂದು ಹೆಚ್ಚಿನ ಕಚ್ಚಾ ಪದಾರ್ಥ ಲಭ್ಯವಾದರೆ ಪಶು ಆಹಾರದ ಬೆಲೆ ಇಳಿಸುವ ಸಾಧ್ಯತೆಯಿದೆ.
| ಶಂಕರ ಮುಗದ, ಅಧ್ಯಕ್ಷ, ಧಾರವಾಡ ಕೆಎಂಎಫ್
ಪಶು ಆಹಾರದ ದರ ಹೆಚ್ಚಳದ ಕುರಿತು ಅನೇಕ ಹಾಲು ಉತ್ಪಾದಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅಕ್ಟೋಬರ್ 10ರಂದು ನಡೆಯುವ ಒಕ್ಕೂಟದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಈಗಾಗಲೆ ಒಕ್ಕೂಟದಿಂದ ರಸಮೇವುಗಳನ್ನು ಸಂಘಕ್ಕೆ ಪೂರೈಕೆ ಮಾಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.
| ಪಿ.ವಿ. ನಾಯ್ಕ ಬೇಡ್ಕಣಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ
ಹಾಲಿನ ದರ ಹೆಚ್ಚಳ ಮಾಡದೆ ಪಶು ಅಹಾರದ ದರ ಹೆಚ್ಚಿಗೆ ಮಾಡಿರುವುದರಿಂದ ಮುಂದಿನ ದಿನದಲ್ಲಿ ಹಾಲು ಶೇಖರಣೆ ಕಡಿಮೆ ಆಗುತ್ತದೆ. ಹೈನುಗಾರಿಕೆ ಮಾಡಲು ಸಾಕಷ್ಟು ರೈತರು ಈಗ ಹಿಂದೇಟು ಹಾಕಿದ್ದಾರೆ. ರೈತರ ಹಿತದೃಷ್ಟಿಯಿಂದ ಒಕ್ಕೂಟ ಉತ್ತಮ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.
| ಶ್ರೀಧರ ಎಂ. ಭಟ್ಟ ಮಾಣಿಕ್ನಮನೆ, ಅಧ್ಯಕ್ಷ, ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘ, ತಾ. ಸಿದ್ದಾಪುರ
ಪ್ರಧಾನಿ ಮೋದಿಗೆ ಆಪತ್ತಿದೆಯೇ?: ಸಹಾಯಕರ ಸೋಗಿನಲ್ಲಿ ಇರುವವರಿಂದಲೇ ತೊಂದರೆ!; ಏನಿದು ಭವಿಷ್ಯ?

‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
