ಮಂಡ್ಯ:ರೈತನನ್ನ ಮದುವೆಯಾಗಲು ಹೆಣ್ಣು ಕೊಡಲು ಒಪ್ಪುತ್ತಿಲ್ಲ. ಬೆಂಗಳೂರಿನಲ್ಲಿ ಇದ್ದೀನಿ ಅಂದ್ರೆ ಹೆಣ್ಣು ಕೊಡ್ತಾರೆ. ಸಿಎಂ ಬಳಿ ಮಾತನಾಡಿ ನಮ್ಮಂತಹವರಿಗಾಗಿ ಒಂದು ಯೋಜನೆ ತನ್ನಿ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಬಳಿ ರೈತನೊಬ್ಬ ಅಳಲು ತೋಡಿಕೊಂಡಿದ್ದಾನೆ.
ಲಾಕ್‌ಡೌನ್ ವೇಳೆ ಹಳ್ಳಿಯೇ ಸರಿ, ರೈತನೇ ಗ್ರೇಟ್ ಎಂದಿದ್ದ ಜನರೀಗ ಮತ್ತೆ ಉಲ್ಟಾ ಹೊಡೆದಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿರೋ ಯುವಕರಿಗೆ ಮದುವೆ ಆಗಲು ಹೆಣ್ಣು ಸಿಗ್ತಿಲ್ಲ. ಹೆಣ್ಣು ನೋಡಲು ಹೋದರೆ ಹೆಣ್ಣೆತ್ತವರು ಹಳ್ಳಿಗೆ ಮದುವೆ ಮಾಡಿಕೊಡಲ್ಲ, ಹಳ್ಳಿಗೆ ಹೆಣ್ಣೇ ಕೊಡಲ್ಲಾ ಅಂತ ನೇರವಾಗಿಯೇ ಹೇಳ್ತಾರೆ ಎಂದು. ರೈತನನ್ನ ಮದುವೆಯಾದ್ರೆ ಪ್ರೋತ್ಸಾಹ ಧನ ನೀಡುವ ಯೋಜನೆಯೊಂದನ್ನ ಜಾರಿಗೆ ತನ್ನಿ. ಆಗಲಾದರು ರೈತನಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ ಎಂದು ಸಚಿವರ ಬಳಿ ಮಳವಳ್ಳಿ ಮೂಲದ ರೈತ ಪ್ರವೀಣ್ ಮನವಿ ಮಾಡಿದ್ದಾರೆ.
ರೈತನ ಮನವಿಗೆ ಸ್ಪಂದಿಸಿದ ಯೋಗೇಶ್ವರ್​, ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಚಿವರೊಂದಿಗೆ ರೈತ ಪ್ರವೀಣ್ ಮಾತನಾಡಿರುವ ಆಡಿಯೋ ವೈರಲ್.
ಹಳ್ಳಿಯಲ್ಲಿ ಮನೆ-ತೋಟ-ಗದ್ದೆ ಎಲ್ಲವೂ ಇರ್ಬೇಕು. ಆದರೆ ಕೃಷಿ ಕೆಲಸ ಮಾಡಿಕೊಂಡಿರೋನು ಮಾತ್ರ ಅಳಿಯ ಆಗ್ಬಾರ್ದು. ಅಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರೂ ಪರವಾಗಿಲ್ಲ, ನನ್ನ ಮಗಳು ಸಿಟಿಯಲ್ಲೇ ವಾಸ ಮಾಡಬೇಕು ಎಂಬುದು ಬಹುತೇಕ ಹೆಣ್ಮಕ್ಕಳ ಪಾಲಕರ ಡಿಮಾಂಡ್​. ಕರೊನಾ ಲಾಕ್​ಡೌನ್​ ವೇಳೆ ಈ ಡಿಮಾಂಡ್​ನಿಂದ ಸ್ವಲ್ಪ ಹಿಂದೆ ಸರಿದಿದ್ದ ಜನರ ಪೈಕಿ ಹಲವರಲ್ಲಿ ಮತ್ತೆ ಸಿಟಿ ವ್ಯಾಮೋಹ ಚಿಗುರೊಡೆದಿದೆ.
ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
