ಚಿತ್ರದುರ್ಗ:ರಾತ್ರೋರಾತ್ರಿ ಮನೆಯಲ್ಲಿ ಕಳ್ಳತನ ಮಾಡಲೆಂದು ಬಂದ ಖದೀಮರು ಚಿನ್ನಾಭರಣ, ನಗದು ದೋಚಿದ್ದಲ್ಲದೆ, ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೂ ಕದ್ದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಕಾರಿನಲ್ಲಿದ್ದ ವಸ್ತುಗಳನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಕಳ್ಳತನ ಮಾಡಿದ 24 ಗಂಟೆಯೊಳಗೆ ಆ ಕಾರಿನ ಜತೆಗೆ ಚಿನ್ನಾಭರಣವನ್ನೂ ವಾಪಸ್​ ಬಿಟ್ಟು ಎಸ್ಕೇಪ್​ ಆಗಿದ್ದಾರೆ.
ಹೌದು ಇಂತಹದ್ದೊಂದು ಘಟನೆ ಚಿತ್ರದುರ್ಗದ ಬಸವೇಶ್ವರ ನಗರದಲ್ಲಿ ಸಂಭವಿಸಿದೆ. ಮಾ.13ರ ರಾತ್ರಿ ಎಸ್ಪಿ ಕಚೇರಿಯ ಸಿಪಿಐ ಮೃತ್ಯುಂಜಯರ ಅವರ ಮನೆಯಲ್ಲಿ ಕಳವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೂ ಕಳ್ಳರು ದೋಚಿದ್ದರು. ಇದು ಪೊಲೀಸ್ ಅಧಿಕಾರಿಯೊಬ್ಬರ ಮನೆ ಎಂಬುದು ಆರಂಭದಲ್ಲಿ ಆ ಖದೀಮರಿಗೂ ಗೊತ್ತಿರಲಿಲ್ಲ ಅನ್ನಿಸುತ್ತೆ. ಕಳತನ ಆಗಿರುವ ಬಗ್ಗೆ ಮಾ.‌14ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಇದನ್ನೂ ಓದಿರಿಜಾರಕಿಹೊಳಿ ಸಿಡಿ ಕೇಸ್​ಗೆ ಟ್ವಿಸ್ಟ್: ವಿಡಿಯೋದಲ್ಲಿನ ಧ್ವನಿ ಚಿಕ್ಕಮಗಳೂರು ವ್ಯಕ್ತಿಯದ್ದು?
ಆ ದಿನವೇ ಖದೀಮರು ಕದ್ದ ಕಾರಿನಲ್ಲಿ ಬೆಳ್ಳಿ ಆಭರಣ, ಪಿಸ್ತೂಲ್ ಇಟ್ಟು ಆ ಕಾರನ್ನು ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ ದೇವಾಲಯ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಪೊಲೀಸ್ ಲಾಠಿ, ಐಡಿ ಕಾರ್ಡ್ ನೋಡಿ ಬೆಚ್ಚಿಬಿದ್ದ ಕಳ್ಳರು, ಇದು ಪೊಲೀಸ್​ ಅಧಿಕಾರಿಯದ್ದು. ನಮ್ಮನ್ನು ಬಿಡಲ್ಲ ಎಂದು ಭಯಗೊಂಡು ವಾಪಸ್​ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ, ಕದ್ದಿದ್ದ ನಗದನ್ನು ಕಳ್ಳರು ಇಟ್ಟಿಲ್ಲ, ಇನ್ನೂ ಸ್ವಲ್ಪ ಚಿನ್ನಾಭರಣ ರಿಕವರಿ ಆಗಬೇಕಿದೆಯಂತೆ.
ಕಾರು ಕಳುವು ಮತ್ತು ಅದನ್ನು ವಾಪಸ್​ ಬಿಟ್ಡು ಹೋಗಿರುವ ಕುರಿತು ಎಸ್ಪಿ ರಾಧಿಕಾ ಖಚಿತ ಪಡಿಸಿದ್ದಾರೆ. ಕಾರಿನಲ್ಲಿದ್ದ ಲಾಠಿ ನೋಡಿ ಹಿಂತಿರುಗಿಸಿದ್ದಾರೋ ಅಥವಾ ಬೇರೆ ಕಾರಣಕ್ಕೆ ಬಿಟ್ಟು ಹೋಗಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾರು ಸಿಕ್ಕಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

ರಸ್ತೆಬದಿಯ ತಂಗುದಾಣದಲ್ಲಿ ಹಾಡಹಗಲೇ ವೃದ್ಧೆ ಮೇಲೆ ಅತ್ಯಾಚಾರ! ಪೈಶಾಚಿಕ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 9 =
Remember me
