|ರಮೇಶ ಮೇಳಕುಂದಾಕಲಬುರಗಿ
ಪಿಎಸ್​ಐ ನೇಮಕ ಪರೀಕ್ಷಾ ಅಕ್ರಮದ ಕಿಂಗ್​ಪಿನ್ ರುದ್ರಗೌಡ ಪಾಟೀಲ್(ಆರ್​ಡಿಪಿ) ಜೈಲಿಗೆ ಹೋಗಿ ಎರಡು ತಿಂಗಳಾಗುತ್ತಿದೆ. ಆದರೂ ನೂರಾರು ಅಭಿಮಾನಿಗಳು ತಮ್ಮ ಬಾಸ್ ಆರ್​ಡಿಪಿ ಎಂದು ಜೈಕಾರ ಹಾಕುತ್ತಿದ್ದಾರೆ. ಆರ್​ಡಿಪಿ ಮೂಲತಃ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದವ. ಪಿಎಸ್​ಐ ಪರೀಕ್ಷೆಯಲ್ಲಿನ ಅಕ್ರಮದಿಂದಾಗಿ ಜೈಲು ಸೇರಿದ್ದಾನೆ. ಆದರೆ ಅಫಜಲಪುರ ಲಕ್ಷ್ಮೀದೇವಿ ದೇವಸ್ಥಾನದ ಜಾತ್ರೆ, ಮಲ್ಲಾಬಾದ್ ದೇವಿ ಉತ್ಸವ ಸೇರಿ ಇನ್ನು ಹಲವು ಕಾರ್ಯಕ್ರಮಗಳ ಸ್ವಾಗತಕ್ಕಾಗಿ ಅಳವಡಿಸಿದ ಬ್ಯಾನರ್​ಗಳಲ್ಲಿ ಆರ್​ಡಿಪಿ ಫುಲ್ ಮಿಂಚುತ್ತಿದ್ದಾನೆ. ಹಳ್ಳಿಗಳಲ್ಲಿ ಆರ್.ಡಿ.ಪಾಟೀಲ್ ಬಾಯ್್ಸ ಆರ್.ಡಿ.ಪಾಟೀಲ್ ಗ್ರೂಪ್ಸ್, ಆರ್.ಡಿ.ಪಾಟೀಲ್ ಅಭಿಮಾನಿಗಳು ಎಂಬ ಹೆಸರಿನಡಿ ದೊಡ್ಡ ಬ್ಯಾನರ್​ಗಳನ್ನು ಹಾಕಿ ಕಿಂಗ್​ಪಿನ್ ಆರಾಧನೆ ನಡೆಯುತ್ತಿದೆ. ಫೋಟೋ ಮಾತ್ರವಲ್ಲದೆ ಫುಲ್ ಹೊಗಳಿಕೆಯ ಪದಗಳು ಬ್ಯಾನರ್​ನಲ್ಲಿ ರಾರಾಜಿಸುತ್ತಿವೆ. ಡೈನಾಮಿಕ್ ಲೀಡರ್, ಮಾಸ್ಟರ್ ಮೈಂಡ್, ಬಡವರ ಬಂಧು, ಅನ್ನದಾತ ಮುಂತಾದ ಹೊಗಳಿಕೆ ಪದಗಳು ಇರುವ ಬ್ಯಾನರ್​ಗಳನ್ನು ಕಟ್ಟಿ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೋತ್ಸವಕ್ಕೆ ಸ್ವಾಗತ ಕೋರಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸಿದ್ಧತೆ:ಆರ್​ಡಿಪಿ 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಕ್ಷೇತ್ರದಲ್ಲಿ ಕಳೆದ ನಾನಾ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದ. ಜೈಲಿನಲ್ಲಿ ಇದ್ದರೂ ಪರವಾಗಿಲ್ಲ 2023ರ ಚುನಾವಣೆ ಸ್ಪರ್ಧೆ ಖಚಿತ. ಅವರು ಗೆಲ್ಲುತ್ತಾರೋ ಬಿಡುತ್ತಾರೋ ತಿಳಿದಿಲ್ಲ. ಆದರೆ ಓರ್ವ ವ್ಯಕ್ತಿಯನ್ನು ಸೋಲಿಸುವ ಮಟ್ಟಿಗೆ ಕ್ಷೇತ್ರದಲ್ಲಿ ಹವಾ ಮಾಡಿದ್ದಾರೆ ಎಂದು ಅಫಜಲಪುರಕ್ಕೆ ಭೇಟಿ ನೀಡಿದ ವಿಜಯವಾಣಿ ತಂಡಕ್ಕೆ ಆರ್​ಡಿಪಿ ಅಭಿಮಾನಿಗಳು ಹೆಮ್ಮೆಯಿಂದ ಹೇಳಿದರು.
ಬ್ಯಾನರ್ ವೀಕ್ಷಿಸಿದ್ರಾ ಸಿಐಡಿ?:ಮಲ್ಲಾಬಾದ್ ಕ್ರಾಸ್​ನಿಂದ ಗ್ರಾಮದವರೆಗೆ ಹಾಗೂ ಅಫಜಲಪುರ ಮಹಾಲಕ್ಷ್ಮೀ ಜಾತ್ರೆ ನಿಮಿತ್ತ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ಆರ್​ಡಿಪಿ ಭಾವಚಿತ್ರವಿರುವ ಬೃಹತ್ ಬ್ಯಾನರ್​ಗಳನ್ನು ಸಿಐಡಿ ಅಧಿಕಾರಿಗಳ ತಂಡ ಶನಿವಾರ ವೀಕ್ಷಣೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಜಾಲತಾಣದಲ್ಲಿ ಆ್ಯಕ್ಟಿವ್!:ಆರ್​ಡಿಪಿ ಹವಾ ಬ್ಯಾನರ್​ಗಳಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿ ನಡೆದಿದೆ. ಫೇಸ್​ಬುಕ್​ನಲ್ಲಿ ಅಫಜಲಪುರಕ್ಕಾಗಿ ಆರ್.ಡಿ.ಪಾಟೀಲ್, ಆರ್.ಡಿ.ಪಾಟೀಲ್ ಯುವ ಬ್ರಿಗೇಡ್ ಸೇರಿ ಹಲವು ಪೇಜ್​ಗಳನ್ನು ರಚಿಸಲಾಗಿದೆ.
ಬೆಂಗಳೂರು:‘ಭ್ರಷ್ಟಾಚಾರದ ಮಂಡಿ’ಯಲ್ಲಿ ರಾಜ್ಯದ ಯುವಕರ ಭವಿಷ್ಯ ಮಾರಾಟವಾಗುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ವಿಜಯವಾಣಿಯಲ್ಲಿ ಪ್ರಕಟವಾದ ಮುಖಪುಟ ವರದಿ ‘ಎಸೈ ್ಸ ಡೀಲು ಎಲ್ಲರಿಗೂ ಪಾಲು’ ಉಲ್ಲೇಖಿಸಿರುವ ಸುರ್ಜೆವಾಲ, ಭವಿಷ್ಯದ ಉಳಿವಿಗಾಗಿ ಶೇ.40 ಕಮಿಷನ್ ಬೊಮ್ಮಾಯಿ ಸರ್ಕಾರ ತೊಲಗಬೇಕು. ಲಂಚದ ಹಗರಣ ಈಗ 50 ಕೋಟಿ ರೂ. ತಲುಪಿದೆ. ಸಂಪೂರ್ಣ ತನಿಖೆ ನಡೆದರೆ 100 ಕೋಟಿ ರೂ. ದಾಟಲಿದೆ ಎಂದು ಆಪಾದಿಸಿದ್ದಾರೆ.
ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nineteen =
Remember me
