ಬೆಂಗಳೂರು: ಬೈಕ್​ ಇದೆ ಅಂತ ರೀಲ್ಸ್​ ಮಾಡುವುದಕ್ಕಾಗಿ ಬೇಕಾ ಬಿಟ್ಟಿ ಚಾಲನೆ ಮಾಡಿದರೆ ಪೊಲೀಸರು ನಿಮ್ಮ ಬೆನ್ನ ಹಿಂದೆ ಬೀಳುವುದು ಗ್ಯಾರಂಟಿ. ಇಲ್ಲೊಬ್ಬ ಕ್ರೇಜಿ ಬೈಕ್​ ರೈಡರ್​ ಪೊಲೀಸರ ಅತಿಥಿಯಾಗಿದ್ದು, ಆತನ ಬೈಕ್​ ಕೂಡ ಜಪ್ತಿಯಾಗಿದೆ.
ಕೆಐಎಎಲ್ ಏರ್ಪೋರ್ಟ್ ರಸ್ತೆಯಲ್ಲಿ ಇತ್ತೀಚೆಗೆ ಸಿಗ್ನಲ್‌ ಜಂಪ್ ಮಾಡಿ ಬೈಕ್​ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಬಳಿಕ ಕಾರನ್ನು ಹಿಂಬಾಲಿಸಿದ ಬೈಕ್​ ಸವಾರ ಕಾರಿನ ಕನ್ನಡಿ ಹೊಡೆದು ಹಾಕಿದ್ದ. ನಂತರ ಓನ್ ವೇನಲ್ಲಿ ಬೈಕ್ ತಿರುಗಿಸಿಕೊಂಡು ಎಸ್ಕೇಪ್ ಆಗಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದ.
ವಿಡಿಯೋ ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಇದೊಂದೆ ವಿಡಿಯೋ ಅಲ್ಲದೆ, ತನ್ನ ಎಲ್ಲ ಸ್ಟಂಟ್​ ವಿಡಿಯೋಗಳನ್ನು ಬೈಕ್​ ಸವಾರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ಅಲ್ಲದೆ, ತನ್ನ ಬೈಕ್​ ಅನ್ನು ವಿಚಿತ್ರವಾಗಿ ಮಾರ್ಪಾಡು ಮಾಡಿಕೊಂಡಿದ್ದ. ವಿಡಿಯೋ ಪರಿಶೀಲನೆ ನಡೆಸಿದ ಯಲಹಂಕ ಪೊಲೀಸರು ಇದೀಗ ಬೈಕ್ ಮತ್ತು ಸವಾರನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಅತಿಯಾಗಿ ನೀರು ಕುಡಿದ್ರೆ ಏನಾಗುತ್ತೆ? ಈಕೆಯ ದುರಂತ ಸಾವಿಗೆ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!
ಈ ಬಗ್ಗೆ ಬೆಂಗಳೂರು (ಉತ್ತರ) ಉಪ ಪೊಲೀಸ್ ಕಮಿಷನರ್ ಸಚಿನ್ ಘೋರ್ಪಡೆ ಅವರು ಟ್ವೀಟ್​ ಮಾಡಿದ್ದು, ತನ್ನ ಅಕ್ರಮ ಸ್ಟಂಟ್​ಗಳಿಂದಾಗಿ ಮಿಸ್ಟರ್​ ಕ್ರೇಜಿ ಈಗ ನಮ್ಮ ಅತಿಥಿಯಾಗಿದ್ದಾನೆ. ಸಂಚಾರಿ ನಿಯಮ ಉಲ್ಲಂಘನೆಗಾಗಿ ಆತನ ಬೈಕ್​ ಅನ್ನು ಜಪ್ತಿ ಮಾಡಿದ್ದೇವೆ. ಚಾಲಕನ ವಿನಾಶಕಾರಿ ಹಾಗೂ ಹಿಂಸೆಯ ವರ್ತನೆ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಜರುಗಿಸಲಿದ್ದೇವೆ. ಇಂತ ಅಪರಾಧ ಚಟುವಟಿಕೆಗಳಲ್ಲಿ ಯಾರೂ ತೊಡಗಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಯ ಮುಖವನ್ನೇ ಕೊಯ್ದ ಬಾಡಿಗೆದಾರ: ಬಂಡೆಪಾಳ್ಯ ಪೊಲೀಸರ ವಿರುದ್ಧವೂ ಆರೋಪ

ಇನ್ಮುಂದೆ ಕೇರಳ ಅಂತ ಕರೆಯುವಂತಿಲ್ಲ… ರಾಜ್ಯದ ಹೆಸರು ಬದಲಾಯಿಸುವ ನಿರ್ಣಯ ಅಂಗೀಕಾರ

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಯಾಕಿಲ್ಲ? ಸ್ಪಷ್ಟನೆ ನೀಡಿದ ಅಮಿತ್ ಷಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eight =
Remember me
