ಬೆಂಗಳೂರು :ಓಂ ಚಲನಚಿತ್ರದ ರೀತಿ ‘ಐ ಲವ್ ಯೂ.. ಯು ಮಸ್ಟ್ ಐ ಲವ್ ಮಿ‌’ ಅಂತ ಯುವತಿಗೆ ತರಹಾವರಿ ಹಿಂಸೆ ಕೊಟ್ಟ ಪಾಗಲ್​ ಪ್ರೇಮಿ, ಕೊನೆಗೆ ಪೊಲೀಸ್​ ಲಾಕಪ್​ ಸೇರಿದ ಪ್ರಸಂಗ ನಡೆದಿದೆ. ಬೆಂಗಳೂರಿನ ಚಂದ್ರ ಲೇಔಟ್​ ನಿವಾಸಿ ರಾಜೇಶ್ ಎಂಬುವ ಬಂಧಿತ.
ನಾಗರಭಾವಿಯ 22 ವರ್ಷದ ಯುವತಿಯನ್ನು ಪ್ರತಿನಿತ್ಯ ಫಾಲೋ ಮಾಡ್ತಿದ್ದ ರಾಜೇಶ್, ‘ಪ್ರೀತ್ಸೆ..ಪ್ರೀತ್ಸೆ’ ಅಂತ ಲವ್ ಮಾಡುವಂತೆ ಯುವತಿಯ ಬೆನ್ನುಬಿದ್ದಿದ್ದ. ಯುವತಿಯ ಸ್ನೇಹಿತರು ಮತ್ತು ಕ್ಲಾಸ್​ಮೇಟ್ಸ್​​ಗೆ “ಅವಳು ನನ್ ಹುಡ್ಗಿ, ಮಾತಾಡಿಸಿದ್ರೆ ಅಷ್ಟೇ..” ಅಂತ ವಾರ್ನ್ ಮಾಡ್ತಿದ್ದ. ಯುವತಿಯ ಪೊಷಕರಿಗೂ ಕರೆ ಮಾಡಿದ್ದ ಆರೋಪಿ ರಾಜೇಶ್, “ನಿಮ್ ಮಗಳನ್ನ ಲವ್ ಮಾಡ್ತಿದೀನಿ, ನಾನೇ ಮದುವೆ ಆಗ್ತೀನಿ” ಅಂದಿದ್ದ.
ಇದನ್ನೂ ಓದಿ:ಗೂಗಲ್‌ನಲ್ಲಿ ಪುರುಷರು ಅತೀ ಹೆಚ್ಚಾಗಿ ಹುಡುಕುವುದು ಇವಂತೆ- ಸಮೀಕ್ಷೆ ಏನು ಹೇಳಿದೆ ನೋಡಿ…
ಯುವತಿ ಒಪ್ಪದಿದ್ದಕ್ಕೆ ಬ್ಲೇಡ್ನಲ್ಲಿ ಕೈ ಹಾಗೂ ಕುತ್ತಿಗೆ ಕುಯ್ದುಕೊಳ್ತೀನಿ ಅಂತಲೂ ಹೆದರಿಸಿದ್ದ. “ನಾನು ಸಾಯೋವಾಗ ನಿಮ್ಮಪ್ಪ ಅಮ್ಮನ ಹೆಸರನ್ನ ಬರೆದಿಡ್ತೀನಿ.. ಅವರು ಜೈಲಿಗೆ ಹೋಗ್ತಾರೆ.. ಸುಮ್ಮನೇ ನನ್ನ ಲವ್ ಮಾಡು..” ಅಂತ ಯುವತಿಯನ್ನು ಎಂದು ಬ್ಲಾಕ್ ಮೇಲ್ ಮಾಡ್ತಿದ್ದ. ಒಂದು ದಿನದ ಒಳಗಾಗಿ ಲವ್ ಪ್ರಪೊಸಲ್ ಒಪ್ಪಿಕೊಳ್ಳಬೇಕು ಎಂದು ಡೆಡ್​​ಲೈನ್ ಕೊಟ್ಟಿದ್ದ ಎನ್ನಲಾಗಿದೆ.
ಈತನ ಟಾರ್ಚರ್​ ಸಹಿಸಲಾಗದೆ, ಯುವತಿ ಮತ್ತು ಪೋಷಕರು ಚಂದ್ರ ಲೇಔಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಚಂದ್ರ ಲೇಔಟ್ ಪೊಲೀಸರು ಪಾಗಲ್ ಪ್ರೇಮಿ ರಾಜೇಶ್​ನನ್ನು ಬಂಧಿಸಿದ್ದಾರೆ.
ಯುಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಗೆಲುವು; ಪಕ್ಷವಾರು ವಿವರ ಇಲ್ಲಿದೆ

ಕೋಟಿಕೋಟಿ ವರದಕ್ಷಿಣೆ ಕೊಟ್ಟರೂ ಸಂತೃಪ್ತನಾಗದ ಪತಿರಾಯ! ಹೆಂಡತಿಯನ್ನು ಆಹಾರ ಕೊಡದೆ ಕೂಡಿ ಹಾಕಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
