ಕನಕಪುರ: ಕೊಡಿಸಿದ ಸಾಲದ ಹಣ ಹಿಂತಿರುಗಿಸಲು ಸತಾಯಿಸುತ್ತಿದ್ದ ಫಿಲೇಚರ್ ಮಾಲೀಕನ ವರ್ತನೆ ಹಾಗೂ ಹಣ ನೀಡುವಂತೆ ಸಾಲ ಕೊಟ್ಟವರು ನೀಡುತ್ತಿದ್ದ ಕಿರುಕುಳದಿಂದ ರೋಸಿ ಹೋದ ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಕುರುಪೇಟೆಯ ಮಾಧವನಗರ ನಿವಾಸಿಗಳಾದ ಚಾಮಮ್ಮ (48) ಹಾಗೂ ಮಗಳು ಉಮಾ (32) ಮೃತರು. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು, ಮನೆಯ ಜಂತಿಗೆಗೆ ನೇಣು ಬಿಗಿದುಕೊಂಡಿದ್ದಾರೆ.
ಇದನ್ನೂ ಓದಿ:ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…
ಚಾಮಮ್ಮ ಹಾಗೂ ಉಮಾ ಖಾಲಕ್ ನಗರದ ರೇಷ್ಮೆ ಫಿಲೇಚರ್ ಫ್ಯಾಕ್ಟರಿಯಲ್ಲಿ ಹಲವು ವರ್ಷಗಳಿಂದ ಕಾರ್ಮಿಕರಾಗಿದ್ದರು. ಈ ನಡುವೆ ಹಣದ ಅಗತ್ಯ ಇದ್ದ ಫಿಲೇಚರ್ ಮಾಲೀಕ ಶಬ್ಬಿರ್‌ಗೆ ಮೂರನೇ ವ್ಯಕ್ತಿಯಿಂದ 3 ಲಕ್ಷ ರೂ. ಸಾಲ ಕೊಡಿಸಿದ್ದರು. ಈ ನಡುವೆ ಹಣ ವಾಪಸ್ ಕೊಡಿಸುವಂತೆ ಸಾಲ ಕೊಟ್ಟವರು ಒತ್ತಡ ಹೇರುತ್ತಿದ್ದರು.
ಇದನ್ನೂ ಓದಿ:ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ
ಆದರೆ, ಹಣ ಹಿಂತಿರುಗಿಸಲು ಶಬ್ಬೀರ್ ಸತಾಯಿಸುತ್ತಿದ್ದುದಲ್ಲದೆ, ಕಿರುಕುಳ ನೀಡುತ್ತಿದ್ದ. ಸಾಲ ಕೊಟ್ಟವರ ಒತ್ತಡ ಹಾಗೂ ಶಬ್ಬೀರ್‌ನ ಹಿಂಸೆಯಿಂದ ಮನ ನೊಂದ ತಾಯಿ-ಮಗಳು ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ಡೆತ್‌ನೋಟ್ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಬ್ಬೀರ್‌ನನ್ನು ಬುಧವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡ್ರಾಪ್ ಕೊಡುವ ನೆಪದಲ್ಲಿ ಚಾಲಕನಿಂದ ಲೈಂಗಿಕ ಕಿರುಕುಳ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
