ರಾಮ ಕಿಶನ್​ ಕೆ.ವಿ. ಬೆಂಗಳೂರು‘ಬ್ರ್ಯಾಂಡ್​ ಬೆಂಗಳೂರು’ ಅಭಿಯಾನದ ಮೂಲಕ ನಗರದ ವಿವಿಧ ಭಾಗಗಳು ಸುಂದರಗೊಳ್ಳುತ್ತಿವೆ. ವಿವಿಧ ಕಡೆಗಳಲ್ಲಿ ರಚನೆಯಾಗಿರುವ ಬಣ್ಣ ಬಣ್ಣದ ಕಲಾಕೃತಿಗಳು ಸಾರ್ವಜನಿಕರ ಮನಗೆಲ್ಲುತ್ತಿದ್ದು, ಆಕರ್ಷಣೀಯ ತಾಣವಾಗಿ ಬದಲಾಗುತ್ತಿವೆ. ಶಾಂತಿನಗರ ಡಬಲ್​ ರೋಡ್​ ರಸ್ತೆಯಲ್ಲಿ ಸಿಗುವ ಫ್ಲೈಓವರ್​ನಲ್ಲಿ ಬಿಡಿಸಲಾಗಿರುವ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ.
ರಾಜ್ಯದ ಸಾಕಷ್ಟು ಮಂದಿ ರಾಷ್ಟ್ರೀಯ ಹಾಗೂ ದೇಶೀಯ ಮಟ್ಟದಲ್ಲಿ ಕ್ರಿಕೆಟ್​ ಅನ್ನು ಪ್ರತಿನಿಧಿಸಿದ್ದಾರೆ. ಜತೆಗೆ ಅನೇಕ ದಾಖಲೆಗಳನ್ನೂ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಅವರಲ್ಲಿ ಪ್ರಮುಖ 10 ಜನ ಕ್ರಿಕೆಟ್​ ತಾರೆಯರನ್ನು ಶಾಂತಿನಗರ ಡಬಲ್​ ರೋಡ್​ನ ಫ್ಲೈಓವರ್​ನ ಪಿಲ್ಲರ್​ಗಳಲ್ಲಿ ಚಿತ್ರಿಸಲಾಗಿದೆ.
ಇಂಡಿಯಾ ರೈಸಿಂಗ್​ ಟ್ರಸ್ಟ್​ ಸಂಸ್ಥೆಯ ಮುಂದಾಳತ್ವದಲ್ಲಿ ಕಲಾಕೃತಿಗಳು ರಚನೆಯಾಗಿವೆ. ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​, ಅನಿಲ್​ ಕುಂಬ್ಳೆ, ಜಾವಗಲ್​ ಶ್ರೀನಾಥ್​, ಎರಪಳ್ಳಿ ಪ್ರಸನ್ನ, ರೋಜರ್​ ಬಿನ್ನಿ, ಸೈಯದ್​ ಕಿರ್ಮಾನಿ, ವಿ. ಸುಬ್ರಹ್ಮಣ್ಯ, ಶಾಂತಾ ರಂಗಸ್ವಾಮಿ, ಬಿ.ಎಸ್​. ಚಂದ್ರಶೇಖರ್​ ಅವರ ಆಕರ್ಷಕ ಚಿತ್ರಗಳನ್ನು ರಚಿಸಲಾಗಿದೆ.
ಕ್ರಿಕೆಟ್​ ದೇಶದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ರಾಜ್ಯದ ಅನೇಕ ಆಟಗಾರರು ಭಾರತ ತಂಡದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕರ್ನಾಟಕ ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಮುಂದಿನ ವರ್ಷ 50 ವಸಂತಗಳನ್ನು ಪೂರೈಸುತ್ತಿದೆ. ಇಂತಹ ಕುತೂಹಲಕರ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಕ್ರಿಕೆಟ್​ ತಾರೆಯರನ್ನು ಚಿತ್ರಿಸಲಾಗಿದೆ ಎಂದು ಇಂಡಿಯಾ ರೈಸಿಂಗ್​ ಟ್ರಸ್ಟ್​ ಸಂಸ್ಥೆಯ ಸ್ವಯಂ ಸೇವಕರು ವಿವರಿಸಿದ್ದಾರೆ.
ನಗರದ ಪ್ರಮುಖ ಐದು ಕ್ರೀಡಾಂಗಣಗಳಾದ ಚಿನ್ನಸ್ವಾಮಿ ಕ್ರೀಡಾಂಗಣ, ಕಂಠೀರವ ಕ್ರೀಡಾಂಗಣ, ಕೆಎಸ್​ಎಚ್​ಎ ಹಾಕಿ ಕ್ರೀಡಾಂಗಣ, ಬೆಂಗಳೂರು ುಟ್​ಬಾಲ್​ ಕ್ರೀಡಾಂಗಣ ಹಾಗೂ ಕರ್ನಾಟಕ ರಾಜ್ಯ ಲಾನ್​ ಟೆನಿಸ್​ ಅಸೋಸಿಯೇಷನ್​ ಕ್ರೀಡಾಂಗಣಗಳು ಈ ಮೇಲ್ಸೇತುವೆಯಿಂದ 2 ಕಿ.ಮೀ. ಅಂತರದಲ್ಲಿವೆ. ಜತೆಗೆ ಜಂಕ್ಷನ್​ ಸುತ್ತಮುತ್ತಲಿರುವ ಸಾಕಷ್ಟು ಶಾಲಾ&ಕಾಲೇಜುಗಳು ಅನೇಕ ಕ್ರೀಡಾಪಟುಗಳನ್ನು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಹೀಗಾಗಿ ರಾಜ್ಯದ ಹೆಸರಾಂತ ಕ್ರಿಕೆಟ್​ ಪಟುಗಳನ್ನು ಚಿತ್ರಿಸಲಾಗಿರುವ ಪ್ರದೇಶವನ್ನು “ಕ್ರೀಡಾ ಜಂಕ್ಷನ್​’ ಎಂದು ಇಂಡಿಯಾ ರೈಸಿಂಗ್​ ಟ್ರಸ್ಟ್​ ಸಂಸ್ಥೆ ಕರೆದಿದೆ.
ಮೇಲ್ಸೇತುವೆಯ ಪಿಲ್ಲರ್​ಗಳಿಗೆ ಪೋಸ್ಟರ್​ಗಳನ್ನು ಅಂಟಿಸುವ ಮೂಲಕ, ವಿರೂಪಗೊಳಿಸುವುದು ಸರಿಯಲ್ಲ. ಇವುಗಳು ಆಕರ್ಷಕವಾಗಿ ಕಾಣುವಂತೆ ಮಾಡಬೇಕಾಗಿದೆ. ಸದ್ಯ ಐದು ಪಿಲ್ಲರ್​ಗಳಲ್ಲಿ ಕ್ರಿಕೆಟ್​ ಕ್ಷೇತ್ರದ ಸಾಧಕರನ್ನು ಚಿತ್ರಿಸಲಾಗಿದೆ. 12 ಪಿಲ್ಲರ್​ಗಳು ಬಾಕಿಯಿದ್ದು, ಅವುಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾ ಸಾಧಕರನ್ನು ಚಿತ್ರಿಸುವ ಗುರಿ ಹೊಂದಿದ್ದೇವೆ. ಬಳಿಕ ಬ್ರಾ$್ಯಂಡ್​ ಬೆಂಗಳೂರು ಕಾರ್ಯಕ್ರಮದಡಿ ಇವುಗಳನ್ನು ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಇಂಡಿಯಾ ರೈಸಿಂಗ್​ ಟ್ರಸ್ಟ್​ ಸಂಸ್ಥೆಯ ಪದಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 12 =
Remember me
