ಬೆಂಗಳೂರು:ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಬೌಲರ್, ಕರ್ನಾಟಕ ರಣಜಿ ತಂಡದ ಕ್ರಿಕೆಟಿಗ ಕೆಸಿ ಕಾರಿಯಪ್ಪ ತನ್ನ ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.   ಕ್ರಿಕೆಟಿಗ ಕಾರಿಯಪ್ಪ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದ ಮಹಿಳೆಗೆ ಆರ್‌.ಟಿ. ನಗರ ಪೊಲೀಸರು ನೋಟಿಸ್‌ ನೀಡಿದ್ದಾರೆ.
ಘಟನೆ ಬಗ್ಗೆ ವಿವರ ನೀಡುವಂತೆ ಕಾರಿಯಪ್ಪ ಪ್ರೇಯಸಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಈಕೆಯಿಂದ ಮಾಹಿತಿ ಪಡೆದ ಬಳಿಕ ಕ್ರಿಕೆಟಿಗ ಕಾರಿಯಪ್ಪಗೆ ನೋಟಿಸ್‌ ನೀಡಲು ಆರ್‌.ಟಿ. ನಗರ ಪೊಲೀಸರು ಮುಂದಾಗಿದ್ದಾರೆ.
ಕೆಸಿ ಕಾರಿಯಪ್ಪ ದಾಖಲಿಸಿದ ದೂರು:ನಿನ್ನೆ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ. ನಿನ್ನ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತೇನೆ. ಆನ್​ಲೈನ್​ನಲ್ಲಿ ಚಾಕು ತೊರಿಸಿಕೊಂಡು ಬೆದರಿಕೆ ಹಾಕಲಾಗಿದೆ. ಮಾನಸಿಕ ಹಿಂಸೆ ನೀಡುತ್ತಿದ್ದಾಳೆಂದು ಕಾರಿಯಪ್ಪ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತಾಗಿ ಕಾರಿಯಪ್ಪ ಬಗಲಗುಂಟೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವತಿಯ ಆರೋಪ:ನನಗೆ 2018ರಲ್ಲಿ ಮದುವೆಯಾಗಿದ್ದು, 2020ರಲ್ಲಿ ಡಿವೋರ್ಸ್ ಆಗಿರುತ್ತದೆ. ಒಂದೂವರೆ ವರ್ಷದ ಹಿಂದೆ ಕಾರಿಯಪ್ಪ ಪರಿಚಯವಾಯ್ತು. ಇಬ್ಬರೂ ಪರಸ್ಪರ ಒಪ್ಪಿಕೊಂಡು ದೈಹಿಕ ಸಂಪರ್ಕ ಬೆಳಿಸಿ ನಂತರ ಗರ್ಭಪಾತವಾಯ್ತು. ಈ ಸಂಬಂಧ ದೂರು ದಾಖಲಾಗಿತ್ತು. ನಂತರ ಆರೋಪಿ ಮನವಿ ಮೇರೆಗೆ ದೂರು ಹಿಂಪಡೆಯಲಾಗಿತ್ತು. ಮದುವೆಯಾಗೋಣ ಎಂದು ಹೇಳಿ ಕಾರಿಯಪ್ಪ ನನ್ನ ಬಳಿ 2 ಲಕ್ಷ ರೂಪಾಯಿ ಪಡೆದುಕೊಂಡಿರುತ್ತಾರೆ. ನಂತರ ಆರೋಪಿ ಪೋಷಕರು ಮದುವೆಗೆ ವಿರೋಧಿಸುತ್ತಾರೆ. ಇದಾದ ಬಳಿಕ ಕಾರಿಯಪ್ಪ ಸಹ ಮದುವೆಯಾಗಲ್ಲ, ನಾನು ಹಣ ಪಡೆದುಕೊಂಡಿಲ್ಲ ಎಂದು ಹಲ್ಲೆಗೈದು ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿದೆ ಎಂದು ಯುವತಿ ಹೇಳಿದ್ದಾರೆ. ಈ ಕುರಿತಾಗಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕ್ರಿಕೆಟ್ ಭವಿಷ್ಯ ಹಾಳು ಮಾಡ್ತೀನಿ ಅಂತ ಮನೆ ಬಳಿ ಗಲಾಟೆ ಮಾಡ್ತಾಳೆ! ಬೀದಿಗೆ ಬಂತು ಕಾರಿಯಪ್ಪ ಲವ್ ಸ್ಟೋರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 15 =
Remember me
