ಬೆಂಗಳೂರು:ಮಹಾಲಕ್ಷ್ಮಿ ಲೇಔಟ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ಹಿಂದೆ ಏನೇನು ಅಡಗಿದೆ ಎಂದು ಜಾಡು ಹಿಡಿದ ಪೊಲೀಸರಿಗೆ ಹೊಸ ಮಾಹಿತಿಗಳು ಸಿಗುತ್ತಿವೆ. ಸಾಕಷ್ಟು ವಯಸ್ಸಾದರೂ ಮಕ್ಕಳಿಬ್ಬರಿಗೂ ಮದುವೆ ಆಗಿರಲಿಲ್ಲ. ಅದರಿಂದ ಬೇಸರಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ವಿಷ ಸೇವಿಸಿದ್ದಾರೆ ಎನ್ನಲಾಗಿತ್ತು. ಈಗ ಈ ಘಟನೆಗೆ ಹಣ- ಬಂಗಾರದ ಆ್ಯಂಗಲ್​ ಕೂಡ ಸೇರಿಕೊಂಡಿದೆ!
ಮಹಾಲಕ್ಷ್ಮೀ ಲೇಔಟ್ ಆಂಜನೇಯಸ್ವಾಮಿ ದೇವಸ್ಥಾನ ಬಳಿಯ ಏಕಾಂಶ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿತ್ತು. 70 ವರ್ಷದ ಯಶೋಧ, ಅವರ ಪುತ್ರಿ, 41 ವರ್ಷದ ಸುಮನಾ ಮತ್ತು ಪುತ್ರ, 36 ವರ್ಷದ ನರೇಶ್ ಮೃತಪಟ್ಟವರು. 2 ದಿನಗಳಿಂದ ಕುಟುಂಬ ಸದಸ್ಯರು ಕರೆ ಸ್ವೀಕರಿಸದೆ ಇದ್ದಾಗ ಆತಂಕಗೊಂಡು ಸೋಮವಾರ ರಾತ್ರಿ ತಾಯಿಯ ಮನೆಗೆ ಹಿರಿಯ ಪುತ್ರಿ ಅರ್ಪಣಾ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಈಗ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಮೂವರೂ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ಮಾಹಿತಿ ಲಭಿಸಿದೆ. ತಾಯಿ ಯಶೋದ, ಮಕ್ಕಳಾದ ಸುಮನಾ,ನರೇಶ್ ಶನಿವಾರ ರಾತ್ರಿಯೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್​ನೋಟ್​ನಲ್ಲಿ ನಮ್ಮ ಸಾವಿಗೆ ನಾವೆ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಸ್ಥಳ ಮಹಜರು ವೇಳೆ ಮನೆಯಲ್ಲಿ 15 ಲಕ್ಷ ರೂ. ಹಣ ಮತ್ತು‌ 10 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ಡೆತ್​ನೋಟ್​ನಲ್ಲಿ ಹಣ ಮತ್ತು ಚಿನ್ನ ಇನ್ಮೊಬ್ಬ ಮಗಳಿಗೆ ಸೇರಬೇಕು ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಸದ್ಯ‌ಕ್ಕೆ ಹಣ ಮತ್ತು ಬಂಗಾರವನ್ನು ಪೊಲೀಸರು ಇನ್ನೊಬ್ಬ ಮಗಳಿಗೆ ಒಪ್ಪಿಸಿದ್ದಾರೆ. ಸದ್ಯ ಸೂಸೈಡ್ ಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮಗಳು ಅಪರ್ಣಾ, ನರೇಶ್​ ಸ್ನೇಹಿತರು ಮನೆಗೆ ಬಂದು ಹೋಗಿದ್ರು ಎಂದಿದ್ದಾರೆ.
ಭಾನುವಾರ ಬೆಳಿಗ್ಗೆ ಮನೆ ಬಳಿ ಬಂದು ಹೋಗಿದ್ದ ನರೇಶ್ ಸ್ನೇಹಿತರು ಬಾಗಿಲು ಹಾಕಿರೋದನ್ನ ನೋಡಿ ವಾಪಸ್ ಹೋಗಿದ್ದರು. ಇದರ ಬಗ್ಗೆ‌ಯೂ ತನಿಖೆ ನಡೆಸುವಂತೆ ಇನ್ನೊಬ್ಬ ಮಗಳು ಅಪರ್ಣಾ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಸ್‌ ದಾಖಲಿಸಿಕೊಂಡು ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಾ ಇದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 9 =
Remember me
