ಬೆಂಗಳೂರು:ಪ್ರತಿಷ್ಠಿತ ಹೋಟೆಲ್‌ಗಳಿಗೆ ಕ್ಯಾಷಿಯರ್ ಕೆಲಸಕ್ಕೆ ಸೇರಿಕೊಂಡು ಗ್ರಾಹಕರು ನೀಡುವ ನಗದು ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಮಾಲೀಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬನಶಂಕರಿಯ ಕತ್ರಿಗುಪ್ಪೆ ನಿವಾಸಿ ಎಂ.ಎಸ್. ರವಿಕುಮಾರ್ (66) ಸೆರೆ ಸಿಕ್ಕವ. ಪ್ರಸ್ತುತ ದೇವನಹಳ್ಳಿ ಬಳಿಯ ನಂದಗೋಕುಲ ಹೋಟೆಲ್‌ನಲ್ಲಿ ಕ್ಯಾಷಿಯರ್‌ಯಾಗಿ ಕೆಲಸಕ್ಕೆ ಸೇರಿದ್ದ. ಈ ಮಾಹಿತಿ ತಿಳಿದ ಕೆ.ಆರ್.ಪುರ ಬಳಿಯ ಭಟ್ಟರಹಳ್ಳಿಯ ನ್ಯೂ ಉಡುಪಿ ಗ್ರಾಂಡ್ ಹೋಟೆಲ್ ಮಾಲೀಕ ಸತೀಶ್ ಶೆಟ್ಟಿ ಸ್ಥಳಕ್ಕೆ ಹೋಗಿ ಆತನನ್ನು ಹಿಡಿದು ಕೆ.ಆರ್.ಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದರ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂ.ಕಾಂ ಓದಿರುವ ರವಿಕುಮಾರ್, ದೊಡ್ಡ ದೊಡ್ಡ ಹೋಟೆಲ್ ಮಾಲೀಕರ ಬಳಿಗೆ ಹೋಗಿ ನಾನು ಇಂತಹ ಜಾರಿಗೆ ಸೇರಿದವ. ಪ್ರತಿಷ್ಠಿತ ಹೋಟೆಲ್‌ನಲ್ಲಿ ಕ್ಯಾಷಿಯರ್‌ಯಾಗಿ ಕೆಲಸ ಮಾಡಿದ ಅನುಭವ ಇದೆ. ವಯಸ್ಸಾಗಿದೆ, ಆರ್ಥಿಕವಾಗಿ ಸಂಕಷ್ಟವಿದ್ದು ಕೆಲಸ ಕೊಟ್ಟರೆ ಮಾಡುವುದಾಗಿ ಗೋಗರೆದು ಕ್ಯಾಷಿಯರ್ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ.
ಗ್ರಾಹಕರು ನಗದು ರೂಪದಲ್ಲಿ ಹಣ ಪಾವತಿ ಮಾಡಿದಾಗ ಮತ್ತು ಇನ್ನಿತರ ಖರ್ಚಿಗೆ ನಗದು ಸಂಗ್ರಹ ಮಾಡಿದಾಗ ಮಾಲೀಕರಿಗೆ ಗೊತ್ತಾಗದಂತೆ ನಗದು ದೋಚಿ ಪರಾರಿಯಾಗುತ್ತಿದ್ದ. ಇದೇ ರೀತಿಯಲ್ಲಿ ನಗರದ ಪ್ರತಿಷ್ಠಿತ ಹೋಟೆಲ್ ಮಾಲೀಕರಿಗೆ ವಂಚನೆ ಮಾಡಿದ್ದ.
ಕೆ.ಆರ್.ಪುರದ ಬಸವನಪುರ ಬಳಿಯ ಉಡುಪಿ ಗ್ರಾಂಡ್ ಹೋಟೆಲ್‌ನಲ್ಲಿ ಕಳೆದ ವರ್ಷ ಕೆಲಸಕ್ಕೆ ಸೇರಿದ್ದ ರವಿಕುಮಾರ್, 3-4ದಿನ ನೌಕರಿ ಮಾಡಿ 1 ಲಕ್ಷ ರೂ. ನಗದು ದೋಚಿದ್ದ. ಈ ಬಗ್ಗೆ ಹೋಟೆಲ್ ಮಾಲೀಕರು ಕೆ.ಆರ್.ಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಾಗಿತ್ತು.
ಇದಾದ ಮೇಲೆ ಹಲವು ಕಡೆಗಳಲ್ಲಿ ಇದೇ ರೀತಿಯಲ್ಲಿ ವಂಚನೆ ಮಾಡುತ್ತಿದ್ದ. ಭಾನುವಾರ ದೇವನಹಳ್ಳಿಯ ನಂದಗೋಕುಲ ಹೋಟೆಲ್‌ಗೆ ಕೆಲಸಕ್ಕೆ ಸೇರಿರುವ ಮಾಹಿತಿ ಕಲೆ ಹಾಕಿದ ನ್ಯೂ ಉಡುಪಿ ಗ್ರಾಂಡ್ ಹೋಟೆಲ್ ಮಾಲೀಕ ಸತೀಶ್ ಶೆಟ್ಟಿ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದೆ. ವಿವಿಧ ಹೋಟೆಲ್ ಮಾಲೀಕರು ಸಹ ದೂರು ಕೊಡುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೂಜಾಟದಲ್ಲಿ ವಿನಿಯೋಗಹೋಟೆಲ್ ಮಾಲೀಕರಿಗೆ ವಂಚಿಸಿದ ಹಣವನ್ನು ರವಿಕುಮಾರ್, ಜೂಜಾಟವಾಡಿ ಕಳೆಯುತ್ತಿದ್ದ. ಒಂದಿಷ್ಟು ಹಣವನ್ನು ಆನ್‌ಲೈನ್‌ನಲ್ಲಿ ಷೇರುಮಾರುಕಟ್ಟೆಯಲ್ಲಿ ವಿನಿಯೋಗ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾನೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಹೊರಬರಲಿದೆ.
ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ಫಿಕ್ಸ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
