ಬೆಂಗಳೂರು:ಕಿರುಕುಳದ ಕುರಿತು ದೂರು ಕೊಡಲು ಮುಂದಾಗಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಪತಿ ಮಂಜುನಾಥ್ (38) ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ರಾಜಗೋಪಾಲನಗರದಲ್ಲಿ ಮಂಗಳವಾರ ರಾತ್ರಿ 9.30ರಲ್ಲಿ ಹೇಮಾಳನ್ನು (32) ಹತ್ಯೆ ಮಾಡಿದ್ದ ಮಂಜುನಾಥ್, ನಂತರ ಪೊಲೀಸರಿಗೆ ಶರಣಾಗಿದ್ದಾನೆ.
ಚನ್ನರಾಯಪಟ್ಟಣ ಮೂಲದ ಮಂಜುನಾಥ್ ಮತ್ತು ಕುಣಿಗಲ್ ಮೂಲದ ಹೇಮಾ 12 ವರ್ಷದ ಹಿಂದೆ ಮದುವೆಯಾಗಿದ್ದರು. ಮಂಜುನಾಥ್ ಟೆಂಪೋ ಚಾಲಕನಾಗಿದ್ದು, ಪತ್ನಿ ಗಾರ್ವೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.
ಇದನ್ನೂ ಓದಿ:ಈ ವ್ಯಕ್ತಿಗೆ ನೀವೇನಾದರೂ ದುಡ್ಡು ಕೊಟ್ಟಿದ್ದೀರಾ?
ಮಂಜುನಾಥ್ ಮದ್ಯಪಾನದ ಚಟ ಅಂಟಿಸಿಕೊಂಡಿದ್ದ. ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಪತ್ನಿ ಜತೆ ಗಲಾಟೆ ಮಾಡುತ್ತಿದ್ದ. ಕೈತುಂಬ ಸಾಲ ಮಾಡಿಕೊಂಡಿದ್ದ. ಸಾಲ ವಾಪಸ್ ನೀಡದ ಹಿನ್ನೆಲೆಯಲ್ಲಿ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಮನೆಯ ಖರ್ಚಿಗೆ ಹಣ ಕೊಡುತ್ತಿರಲಿಲ್ಲ. ಅಲ್ಲದೆ, ಬೇರೆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ಪತ್ನಿಗೆ ಗೊತ್ತಾಗಿತ್ತು. ಇದರಿಂದ ಬೇಸತ್ತಿದ್ದ ಆಕೆ, ಪತಿಯಿಂದ ಪ್ರತ್ಯೇಕವಾಗಿ ವಾಸವಿರಲು ನಿರ್ಧರಿಸಿದ್ದಳು. ವಿಚ್ಛೇದನ ನೀಡಲು ಮುಂದಾಗಿದ್ದರೂ ಮಂಜುನಾಥ್ ಒಪ್ಪಿಗೆ ಸೂಚಿಸಿರಲಿಲ್ಲ. ಹಿರಿಯರು ರಾಜೀಸಂಧಾನ ಮಾಡಿಸಿದ್ದರಾದರೂ ಪತ್ನಿಗೆ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ ಎನ್ನಲಾಗಿದೆ.
ನಿನ್ನನ್ನೇ ಕೊಂದು ಠಾಣೆಗೆ ಹೋಗ್ತೀನಿ!:ಮಂಗಳವಾರ (ಜೂ. 30) ಸಂಜೆ ದಂಪತಿ ನಡುವೆ ಗಲಾಟೆಯಾಗಿತ್ತು. ಇದೇ ಸಿಟ್ಟಿನಲ್ಲಿ ರಾತ್ರಿ ಮದ್ಯ ಸೇವಿಸಿ ಮನೆಗೆ ಹೋಗಿ ಪತ್ನಿಗೆ ಹೊಡೆದಿದ್ದ. ಈ ವೇಳೆ ಆಕೆ, ತನ್ನ ಸಹೋದರನನ್ನು ಕರೆಸಿಕೊಂಡು ದೂರು ಕೊಡಲು ಪೊಲೀಸ್ ಠಾಣೆಗೆ ತೆರಳುತ್ತಿದ್ದಳು. ಪತ್ನಿಯನ್ನು ಮಾರ್ಗಮಧ್ಯೆ ತಡೆದು, ‘ನಿನ್ನನ್ನೇ ಕೊಲೆ ಮಾಡಿ ಠಾಣೆಗೆ ಹೋಗುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದ. ಆತನ ಮಾತನ್ನು ಲೆಕ್ಕಿಸದೆ ಹೇಮಾ ಮುಂದೆ ಹೋಗಿದ್ದಾಳೆ. ಈ ವೇಳೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ತಪ್ಪಿಸಿಕೊಂಡು ಮನೆಯೊಂದರ ಕಾಂಪೌಂಡ್ ಒಳಗೆ ಹೊಗಿದ್ದಾಳೆ. ಅಲ್ಲಿಗೂ ಬೆನ್ನಟ್ಟಿ ಹೋದ ಮಂಜುನಾಥ್, ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ನಂತರ ಆಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳೆ ವಿಮೆ ನೋಂದಣಿಗೆ 10 ಕಡೇ ದಿನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 7 =
Remember me
