ಬೆಂಗಳೂರು:ವಾಹನ ಸವಾರರಿಗೆ ಟ್ರಾಫಿಕ್​ ಪೊಲೀಸ್​ ಇಲಾಖೆಯಿಂದ ಎಚ್ಚರಿಕೆ ಸಂದೇಶವೊಂದು ಬಂದಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ, ಕೇವಲ ದಂಡ ಮಾತ್ರ ಬೀಳುವುದಿಲ್ಲ. ದಂಡದ ಜತೆಗೆ ಕ್ರಿಮಿನಲ್​ ಕೇಸ್​ ಕೂಡ ದಾಖಲಾಗುತ್ತದೆ.
ಸಂಚಾರ ನಿಯಮ ಉಲ್ಲಂಘಿಸಿದರೆ ಬರೀ ದಂಡ ಮಾತ್ರ ಹಾಕ್ತಾರೆ ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಒನ್​ ವೇನಲ್ಲಿ ಬರುವುದು ಹಾಗೂ ರಸ್ತೆಯಲ್ಲಿ ವಾಹನ ಪಾರ್ಕ್‌ ಮಾಡುವುದಕ್ಕೆ ಸಂಚಾರಿ ಪೊಲೀಸರು ಕ್ರಿಮಿನಲ್​ ಕೇಸ್​ ದಾಖಲಿಸುತ್ತಿದ್ದಾರೆ. ಐಪಿಸಿ ಸೆಕ್ಷನ್ 283ರ ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಲಾಗುತ್ತಿದೆ.
ಇದನ್ನೂ ಓದಿ:ಮಕ್ಕಳೆದುರು ಅರೆಬೆತ್ತಲಾಗಿದ್ದ ಪ್ರಕರಣ: ರೆಹನಾ ಫಾತಿಮಾಗೆ ಕೇರಳ ಹೈಕೋರ್ಟ್​ನಿಂದ ಬಿಗ್​ ರಿಲೀಫ್​!
ಒಮ್ಮೆ ಎಫ್​ಐಆರ್ ದಾಖಲಾದರೆ ನಿಮ್ಮ ವಾಹನವನ್ನು ಸೀಜ್ ಮಾಡಲಾಗುತ್ತಿದೆ. ಸೀಜ್ ಮಾಡಿದ ವಾಹನ ಬೇಕಾದರೆ, ನ್ಯಾಯಾಲಾಯದ ಅನುಮತಿಯನ್ನು ಪಡೆದೇ ಬಿಡಿಸಿಕೊಳ್ಳಬೇಕು. ಹೀಗಾಗಿ ಸಂಚಾರಿ ನಿಯಮಗಳ ಬಗ್ಗೆ ಎಚ್ಚರದಿಂದ ಇರುವಂತೆ ಟ್ರಾಫಿಕ್​ ಪೊಲೀಸರು ಸಲಹೆ ನೀಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದರೆ, ದಂಡ ಮಾತ್ರವಲ್ಲದೆ, ಕ್ರಿಮಿನಲ್ ಕೇಸ್ ಕೂಡ ಬೀಳುತ್ತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.(ದಿಗ್ವಿಜಯ ನ್ಯೂಸ್​)
ನ್ಯಾಯದೇವತೆ | ಗಂಡ ಪ್ರತಿ ದಿನ ಹೊಡೆದು ಹಿಂಸಿಸುತ್ತಾರೆ, ಏನು ಮಾಡಬೇಕು?

ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ 30 ಕೋಟಿ ರೂ. ನೆರವು ನೀಡಿದ್ರಾ ಕೊಹ್ಲಿ? ಇಲ್ಲಿದೆ ಅಸಲಿ ಸಂಗತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + nineteen =
Remember me
