ಧಾರವಾಡ:ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ಪಾತಕಿಯೊಬ್ಬ ನಡುವೆ ಸಿಕ್ಕ ಸ್ವಲ್ಪ ಸಮಯದಲ್ಲೇ ಲಾಡ್ಜ್​​ವೊಂದರಲ್ಲಿ ಪ್ರೇಯಸಿಯೊಂದಿಗೆ ಸರಸಕ್ಕಿಳಿದು, ಸಿಕ್ಕಿಬಿದ್ದಿದ್ದಾನೆ. ಭೂಗತವಾಗಿದ್ದ ಪಾತಕಿ ಬಚ್ಚಾಖಾನ್​ ಪ್ರೇಯಸಿಯೊಂದಿಗೆ ಸರಸದಲ್ಲಿದ್ದಾಗಲೇ ಸಿಕ್ಕಿಹಾಕಿಕೊಂಡಿದ್ದಾನೆ.
ಈತನನ್ನು ಇಂದು ಬಳ್ಳಾರಿ ಜೈಲಿನಿಂದ ಧಾರಾವಾಡದ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆತರಲಾಗಿತ್ತು. ಆದರೆ ಈ ನಡುವೆ ಈತನಿಗೆ ಪ್ರೇಯಸಿಯ ಜತೆ ಕಾಲಕಳೆಯಲು ಕೆಲವು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ರಾಯಾಪುರದ ಬಳಿಯ ಪೃಕೃತಿ ಲಾಡ್ಜ್‌‌ನಲ್ಲಿ ಈತನಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ಈತನ ಪ್ರೇಯಸಿ ಮೊದಲೇ ಬಂದು ಕಾಯುತ್ತಿದ್ದಳು. ನಂತರ ಇಬ್ಬರೂ ಸರಸಕ್ಕಿಳಿದಿದ್ದರು.
ಬಚ್ಚಾಖಾನ್ ತನ್ನ ಪ್ರೇಯಸಿಯೊಂದಿಗೆ ಲಾಡ್ಜ್​​ನಲ್ಲಿ ಸರಸದಲ್ಲಿ ಇರುವುದನ್ನು ತಿಳಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್, ಲಾಡ್ಜ್​ ಮೇಲೆ ದಾಳಿ ಮಾಡಿದ್ದು, ಬಚ್ಚಾಖಾನ್​ನನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಿದ್ಯಾಗಿರಿ ಠಾಣೆಗೆ ಪೊಲೀಸರು ಕರೆತಂದಿದ್ದಾರೆ.
ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ

ಮದ್ಯಪಾನ-ಧೂಮಪಾನ ಪ್ರಿಯರಿಗಿದು ಆಘಾತಕಾರಿ ಸುದ್ದಿ; ಸಮೀಕ್ಷೆಯೊಂದು ಹೊರಗೆಡಹಿದೆ ಭೀಕರ ಸಂಗತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 17 =
Remember me
