ಮೈಸೂರು:ನಗರದಲ್ಲಿರುವ ಚಲನಚಿತ್ರ ನಟರೊಬ್ಬರ ಫಾರ್ಮ್​ಹೌಸ್​ನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಬಿಹಾರ ಮೂಲದವನಿಗೆ ನಗರದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮಾ ಖಮ್ರೋಜ್​ ಅವರು 40 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ.
ಬಿಹಾರ ಮೂಲದ ನಾಜೀಮ್​ ಶಿಕ್ಷೆಗೆ ಗುರಿಯಾದ ಅಪರಾಧಿ. ಶಿಕ್ಷೆ ಜತೆಗೆ 51 ಸಾವಿರ ರೂ. ದಂಡ ವಿಧಿಸಿದ್ದಾರೆ. ತಿ.ನರಸೀಪುರ ರಸ್ತೆಯ ಫಾರ್ಮ್​ಹೌಸ್​ನಲ್ಲಿ ನಾಜೀಮ್​ ಕುದುರೆಗಳಿಗೆ ಲಾಳ ಕಟ್ಟುವ ಕೆಲಸ ಮಾಡಿಕೊಂಡಿದ್ದ. ಕುಟುಂಬದೊಂದಿಗೆ ವಾಸವಿದ್ದ 10 ವರ್ಷದ ಅಪ್ರಾಪ್ತೆಗೆ 2021ರಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೇ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಮತ್ತೆ ಅದೇ ಕೃತ್ಯವೆಸಗಲು ಮುಂದಾಗಿದ್ದಾಗ ಅಪ್ರಾಪ್ತೆ ಪಾಲಕರಿಗೆ ಕೈಗೆ ಸಿಕ್ಕಿ ಬಿದ್ದಿದ್ದ. ಈ ಬಗ್ಗೆ ನರಸೀಪುರ ಪೊಲೀಸ್​ ಠಾಣೆಗೆ ಪಾಲಕರು ದೂರು ನೀಡಿದ್ದರು. ಪೊಲೀಸರು ನಗರದ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗೆ 40 ವರ್ಷ ಕಠಿಣ ಶಿಕ್ಷೆ, 51 ಸಾವಿರ ರೂ. ದಂಡ ವಿಧಿಸಿದ್ದಾರೆ. ಜತೆಗೆ ಅಪ್ರಾಪ್ತೆ ಸರ್ಕಾರದಿಂದ 7 ಲಕ್ಷ ರೂ. ಪರಿಹಾರ ಪಡೆಯಲು ಅರ್ಹಳು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.
ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

ಶಾಲೆಗೆ ಹೋಗುವಾಗ ಬಿಎಂಟಿಸಿ ಬಸ್​ಗೆ ಮಗಳು ಬಲಿ, ಅಮ್ಮ-ಮಗನ ಸ್ಥಿತಿ ಗಂಭೀರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಣಬೆ ಪದಾರ್ಥ ತಿಂದು ತಂದೆ-ಮಗ ಸಾವು!? ರಾತ್ರಿಯಿಡೀ ನರಳಾಡಿ ಮನೆಯ ಅಂಗಳದಲ್ಲೇ ದುರಂತ ಅಂತ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen + 8 =
Remember me
