ಬೆಂಗಳೂರು:ಈತ, ಕಳೆದ ಏಳು ವರ್ಷಗಳಿಂದ ಕಳ್ಳತನದ ಅಪರಾಧಕ್ಕಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಆದರೆ ಈತ ಹೊರಬಂದ ಕೂಡಲೆ ಹಳೆ ಚಾಳಿಯನ್ನು ಮುಂದುವರೆಸಿದ್ದ.
ಇದೀಗ ಬೆಂಗಳೂರಿನ ಜೆಪಿ ನಗರ ಪೊಲೀಸರಿಂದ ಇತಿಹಾಸದ ಕುಖ್ಯಾತ ಅರೋಪಿ ಬಂಧನ ನಡೆದಿದೆ.  ಬಂಧಿತ, ಮಹಮದ್ ದಸ್ತಗಿರ್ ಅಲಿಯಾಸ್ ಶೂಟೌಟ್ ದಸ್ತಗಿರ್ ಅಲಿಯಾಸ್ ದಸ್ತು ಎಂಬಾತ. ಆರೋಪಿ ಕಳೆದ ಕಲ ದಿನಗಳ ಹಿಂದೆ ಇಬ್ಬರು ವಾಸ ಮಾಡ್ತಿದ್ದ ಮಹಿಳೆಯರ ಮನೆಗೆ ನುಗ್ಗಿದ್ದ. ಅಲ್ಲಿ ಚಾಕು ತೋರಿಸಿ ಬೆದರಿಸಿ ಚಿನ್ನದ ಸರಗಳು ಮತ್ತು ಉಂಗುರಗಳನ್ನು ದೋಚಿ ಪರಾರಿಯಾಗಿದ್ದ.
ಅಷ್ಟಕ್ಕೇ ನಿಲ್ಲದೇ ಈತ ಮರುದಿನ ಜಯನಗರದಲ್ಲಿ ಓರ್ವ ಮಹಿಳೆಯ ಸರವನ್ನು ಕದ್ದು ಕಾಲ್ಕಿತ್ತಿದ್ದ.  ದರೋಡೆ ನಡೆದ ಮನೆಯಲ್ಲಿ ಪೊಲೀಸರು ಮಾಹಿತಿ ಪಡೆದಾಗ ದಸ್ತಗಿರ್‍ ಮೇಲೆ ಅನುಮಾನ ಹುಟ್ಟಿದ್ದು ತನಿಖೆ ನಡೆಸಿದಾಗ ಕೃತ್ಯ ಎಸಗಿದ್ದು ಈತನೇ ಎನ್ನುವುದು ಖಚಿತವಾಗಿದೆ.
ಆರೋಪಿ ದಸ್ತಗಿರ್‍ ವಿರುದ್ದ, ಜಯನಗರ ಒಂದು ಕಳ್ಳತನ, ಕಬ್ಬನ್ ಪಾರ್ಕ್‍ನಲ್ಲಿ ಒಂದು ಕೊಲೆಯತ್ನ, ಒಂದು ರಾಬರಿ, ಕುಮಾರಸ್ವಾಮಿ ಲೇಔಟ್‍ನಲ್ಲಿ ಎರಡು ಕೊಲೆ ಯತ್ನ ಹಾಗೂ ಐದು ರಾಬರಿ ಕೇಸ್‍ಗಳು ಸೇರಿ ಒಟ್ಟು ಹತ್ತಕ್ಕೂ ಕೇಸ್‍ಗಳು ಇದ್ದವು. ಈ ಹಿಂದೆ 2012ರಲ್ಲಿ ಕುಮಾರಸ್ವಾಮಿ ಲೇಔಟ್‍ನ ಪೊಲೀಸರು ದಸ್ತಗಿರಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು.
ಬಳಿಕ ರಾಬರಿ ಕೇಸ್ ನಲ್ಲಿ ಏಳು ವರ್ಷ ಶಿಕ್ಷೆ ಆಗಿತ್ತು. ಮೊನ್ನೆ ಬ್ರಕಿದ್‍ಗೂ ಎರಡು ದಿನ ಇರುವಾಗ ಬೆಳಗಾವಿ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ. ಹೊರಬಂದು ಕೆಲ ದಿನಗಳಲ್ಲಿ ಮತ್ತೆರಡು ಎರಡು ಕೇಸ್ ಮಾಡಿದ್ದ. ಸದ್ಯ ಮತ್ತೊಮ್ಮೆ ಜೆಪಿ ನಗರ ಪೊಲೀಸರು ಈತನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ.
ಟ್ವಿಟರ್ ಎದುರು ಸೋಲುತ್ತಿದೆಯಾ ಥ್ರೆಡ್ಸ್? ಆಶ್ಚರ್ಯಕರ ಮಾಹಿತಿ ಬಿಚ್ಚಿಟ್ಟ ಗೂಗಲ್ ಟ್ರೆಂಡ್ಸ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 2 =
Remember me
