ರೈತರ ಹೆಸರಲ್ಲಿ ಬೋನಫೈಡ್ ಸರ್ಟಿಫಿಕೇಟ್ ಸೃಷ್ಟಿಸಿ, ಅಕ್ರಮವಾಗಿ ಟ್ರ್ಯಾಕ್ಟರ್​ಗಳ ನೋಂದಣಿ ಮಾಡಿದ ಅಕ್ರಮ ರಾಮನಗರದ ಆರ್​ಟಿಒನಲ್ಲಿ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಾಗಿದೆ. ಸ್ಟೇಜ್ ಕ್ಯಾರಿಯರ್ ಮತ್ತು ಕಾಂಟ್ರಾಕ್ಟ್ ಕ್ಯಾರಿಯರ್ ವಾಹನಗಳ ‘ಸರೆಂಡರ್’ ಹೆಸರಲ್ಲಿ ಕೋಟ್ಯಂತರ ರೂ. ರಸ್ತೆತೆರಿಗೆ ವಂಚಿಸಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಹಾಗೆಯೇ ತೆರಿಗೆ ವಂಚಿಸಿರುವ ವಾಹನ ಮಾಲೀಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ಪ್ರಕ್ರಿಯೆಗೂ ಸಾರಿಗೆ ಇಲಾಖೆ ಚಾಲನೆ ಕೊಟ್ಟಿದೆ.
ಇದನ್ನೂ ಓದಿ:ಕೆಎಎಸ್ ಪ್ರಿಲಿಮ್ಸ್​ ಮುಂದೂಡಿಕೆಗೆ ಆಗ್ರಹ
ರಾಜ್ಯದ 71 ಆರ್​ಟಿಒಗಳಲ್ಲೂ ಖಾಸಗಿ ವಾಹನಗಳು ಸರೆಂಡರ್​ನಲ್ಲಿರುವಂತೆ ತೋರಿಸಿ ರಸ್ತೆ ತೆರಿಗೆ ವಂಚಿಸುತ್ತಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಲೋಕಾಯುಕ್ತ ಅಧಿಕಾರಿಗಳ ಮನವಿ ಮೇರೆಗೆ ಎಲ್ಲ ಆರ್​ಟಿಒಗಳ ವ್ಯಾಪ್ತಿಯಲ್ಲಿ ಅಧ್ಯರ್ಪಣೆಯಲ್ಲಿರುವ ವಾಹನಗಳ ಸಂಪೂರ್ಣ ವಿವರಗಳನ್ನು ಜು.8ರ (ಸೋಮವಾರ) ಒಳಗೆ ಕೊಡಬೇಕೆಂದು ಸಾರಿಗೆ ಇಲಾಖೆ ಆಯುಕ್ತರು ಆದೇಶಿಸಿದ್ದರು. ಆಯುಕ್ತರು ಕೊಟ್ಟಿದ್ದ ಗಡುವು ಮುಕ್ತಾಯವಾಗಿದ್ದು, ಬಹುತೇಕ ಕಚೇರಿಗಳಿಂದ ವರದಿ ಬಂದಿದೆ.
ಇದೀಗ ಎಲ್ಲ ಮಾಹಿತಿಗಳನ್ನು ಕ್ರೂಢೀಕರಣಗೊಳಿಸುವ ಕೆಲಸ ನಡೆಯುತ್ತಿದೆ. ಅಧ್ಯರ್ಪಣೆಗೊಂಡ ವಾಹನಗಳು ನಿರ್ದಿಷ್ಟ ಸ್ಥಳದಲ್ಲಿ ಇಲ್ಲದಿದ್ದರೆ, ಇಂಜಿನ್ ಮತ್ತು ಚಾಸ್ಸಿ ನಂಬರ್ ಟ್ಯಾಂಪರಿಂಗ್ ಮಾಡಿರುವುದು ದೃಢಪಟ್ಟರೆ ಆಯಾ ವಾಹನ ಮಾಲೀಕರ ವಿರುದ್ಧ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ, ಎಫ್​ಐಆರ್ ಮಾಡಿಸಲಾಗುತ್ತದೆ. ಆರ್​ಟಿಒ ಅಧಿಕಾರಿಗಳು ಕಳುಹಿಸಿರುವ ವರದಿ ಪರಿಶೀಲಿಸಲಾಗುತ್ತದೆ. ಅಲ್ಲದೆ ಈ ವರದಿಗಳು ನೈಜವಾಗಿದೆಯೇ ಎಂದು ಜಂಟಿ ಆಯುಕ್ತರಿಂದಲೂ ಮರುಪರಿಶೀಲನೆ ಆಗುತ್ತದೆ. ಕೆಲ ಕಚೇರಿಗಳಿಗೆ ಆಯುಕ್ತರೇ ಭೇಟಿ ಕೊಟ್ಟು ಪರಿಶೀಲನೆ ನಡೆಸಲು ತೀರ್ವನಿಸಲಾಗಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋಕಾ ದೂರಿನಲ್ಲೇನಿದೆ?
ಎಲ್ಲ ಆರ್​ಟಿಒಗಳಲ್ಲಿ ಸರೆಂಡರ್​ನಲ್ಲಿರುವ ವಾಹನಗಳ ಮಾಹಿತಿ ತರಿಸಿಕೊಳ್ಳಲಾಗಿದೆ. ನಂತರ ಲೋಕಾಯುಕ್ತಕ್ಕೆ ವರದಿ ಕೊಡಲಾಗುತ್ತದೆ. ಟ್ಯಾಂಪರಿಂಗ್ ಮಾಡಿರುವುದು ಕಂಡುಬಂದರೆ ಕ್ರಿಮಿನಲ್ ಕೇಸ್ ದಾಖಲಿಸ ಲಾಗುತ್ತದೆ. ಒಂದೇ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುತ್ತಿದ್ದ ಹಲವು ವಾಹನ ಜಪ್ತಿ ಮಾಡಲಾಗಿದೆ.
| ಸಿ.ಮಲ್ಲಿಕಾರ್ಜುನ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ
ಇದನ್ನೂ ಓದಿ:ಸ್ಟ್ರೀಟ್ ಗರ್ಲ್‌ಫ್ರೆಂಡ್ಸ್; ಕಿಸ್​​ಗೆ 110 ರೂ.,ಅಪ್ಪುಗೆಗೆ 11 ರೂ ಇದುವೆ ಹೊಸ ಆಫರ್
ಆಯುಕ್ತರ ಆದೇಶವೇನು?
ಜೀವ ಹೋದರೆ ವಿಮೆ ಸಿಗಲ್ಲ!
ವಂಚನೆ ಹೇಗೆ?
ಟಿ20 ಕ್ರಿಕೆಟ್​ನಲ್ಲಿ ಈ ಐತಿಹಾಸಿಕ ದಾಖಲೆ ಬರೆದ 2ನೇ ಕ್ರಿಕೆಟಿಗ ರಶೀದ್​ ಖಾನ್​! ಅಭಿನಂದನೆಗಳ ಸುರಿಮಳೆ

545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ಫಲಿತಾಂಶಕ್ಕಾಗಿ ರಕ್ತದಲ್ಲಿ ಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
