|ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳುಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೆಯ ಬಜೆಟ್​ನಲ್ಲಿ ಹಿಂದಿನ ಸರ್ಕಾರವನ್ನು ಹಾಗೂ ಕೇಂದ್ರ ಸರ್ಕಾರವನ್ನು ರಾಜಕೀಯ ಉದ್ದೇಶಕ್ಕೆ ಟೀಕೆ ಮಾಡಿದ್ದು, ಈ ಮೂಲಕ ವಾಸ್ತವಿಕ ಅಂಶಗಳನ್ನು ಮರೆಮಾಚುವ ಕೆಲಸ ಮಾಡಿದ್ದಾರೆ.
ಬಜೆಟ್​ನಲ್ಲಿ ಹಿಂದಿನ ನಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರದಾಡಬೇಕಾಗಿತ್ತು ಎಂಬ ಸಿಎಂ ಮಾತು ಎಷ್ಟು ಸರಿ? ಕೊವಿಡ್ ಸಂದರ್ಭದಲ್ಲಿ ಹಸುವಿನಿಂದ ಬಳಲಿದ ಒಂದು ಉದಾಹರಣೆಯೂ ಇಲ್ಲ. ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ವಿವಿಧ ವೃತ್ತಿಯ ಜನರಿಗೆ ಕೊಟ್ಟಿರುವ ವಿಶೇಷ ಅನುದಾನದಿಂದ ಜನ ಪರದಾಡುವುದನ್ನು ತಪ್ಪಿಸಲಾಗಿದೆ.
ಜನರ ಮೇಲೆ ಹೊರೆ ಹಾಕದೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವುದಾಗಿ ಹೇಳಿರುವುದು, ಆಡಿದ್ದೊಂದು ಮಾಡಿದ್ದೊಂದು ಎನ್ನುವುದು ಇದೇ ಬಜೆಟ್​ನಲ್ಲಿ ವಿಧಿಸಿರುವ ತೆರಿಗೆಗಳಿಂದ ಸಾಬೀತಾಗಿದೆ. ಅಬಕಾರಿ ತೆರಿಗೆ, ಮೋಟರ್ ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿ ಸಾಮಾನ್ಯ ಜನರು ಜೀವನ ನಡೆಸದಂತೆ ಮಾಡಿದ್ದಾರೆ. ಅಲ್ಲದೇ, ತಮ್ಮ ಕಾಲದಲ್ಲಿ ಆರ್ಥಿಕವಾಗಿ ಔದ್ಯೋಗಿಕ ಮತ್ತು ಸೇವಾವಲಯದಲ್ಲಿ ಬೆಳವಣಿಗೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. 2019 ರಿಂದ 23 ರವರೆಗೂ ಕೊವಿಡ್ ಇದೆ ಎಂದು ತಾವೇ ಹೇಳಿದ್ದು ಕೊವಿಡ್ ಸಂದರ್ಭದಲ್ಲಿ ಸುಮಾರು ಒಂದೂವರೆ ವರ್ಷ ಇಡೀ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಇರುವುದನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆಯೂ ಎಫ್​ಡಿಐ ಆಕರ್ಷಿಸುವಲ್ಲಿ ಕರ್ನಾಟಕ ನಂಬರ್ ಒನ್ ಆಗಿರುವುದನ್ನು ಹೇಳದೆ ಜಾಣ ಮರೆವು ಪ್ರದರ್ಶಿಸಿದ್ದಾರೆ.
2013 -14 ರಲ್ಲಿ ಅಂದು ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 50,000 ಕೋಟಿ ರೂ.ಗಳ ಅವಶ್ಯಕತೆ ಇದ್ದು, ಇದನ್ನು ಮುಂದಿನ ಐದು ವರ್ಷಗಳಲ್ಲಿ ಒದಗಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಬಜೆಟ್​ನಲ್ಲಿ ಘೊಷಿಸಿದ್ದರು. ಆದರೆ 2018 ಮಾರ್ಚ್ ಅಂತ್ಯಕ್ಕೆ ಸುಮಾರು ರೂ 48,000 ಕೋಟಿ ರೂ.ಗಳನ್ನು ವೆಚ್ಚ ಮಾಡಿ, ಸುಮಾರು ಒಂದು ಲಕ್ಷ ಕೋಟಿ ರೂ. ಮೊತ್ತದ ಯೋಜನೆಯನ್ನು ಬಾಕಿ ಉಳಿಸಿ ಹೊಸ ಸರಕಾರಕ್ಕೆ ಹೊರೆಯನ್ನು ಬಿಟ್ಟು ಹೋಗಿದ್ದರು.
ಪ್ರತಿವರ್ಷ ಸರಾಸರಿಯಾಗಿ ಸುಮಾರು ರೂ 20,000 ಕೋಟಿ ರೂ.ಗಳ ಹೊಸ ಕಾಮಗಾರಿಗಳನ್ನು ಅನುಮೋದಿಸಿ, ತಮ್ಮ ಅಧಿಕಾರದ ಅವಧಿಯ ಅಂತ್ಯಕ್ಕೆ ಸುಮಾರು ಒಂದು ಲಕ್ಷ ಕೋಟಿಗಳ ಠಟಜ್ಝಿ್ಝಡಛ್ಟಿ ಯೋಜನೆಗಳನ್ನು ಮುಂದಿನ ಸರಕಾರಕ್ಕೆ ಬಳುವಳಿಯಾಗಿ ಬಿಟ್ಟು ಹೋಗಿರುತ್ತಾರೆ. ಆ ಅವಧಿಯಲ್ಲಿ ಚ್ಠಿಛಜಛಿಠಿ ಚ್ಝ್ಝ್ಚಠಿಜಿಟ್ಞ ಐದು ವರ್ಷ ಸೇರಿ ಸುಮಾರು ರೂ 50, 000 ಕೋಟಿ ಮಾತ್ರ, ಆದರೆ ಅವರು ಕಾಮಗಾರಿಗಳನ್ನು ಅನುಮೋದಿಸಿದ್ದು ಸುಮಾರು ಒಂದು ಲಕ್ಷ ಕೋಟಿ ರೂ. ಆದರೆ, ಈಗ ಹಿಂದಿನ ಸರಕಾರ ಬಜೆಟ್ ಅಲೊಕೇಶನ್​ಗಿಂತಲೂ ಹೆಚ್ಚಿನ ಕಾಮಗಾರಿಗಳನ್ನು ಅನುಮೋದಿಸಿದ್ದು ಆರ್ಥಿಕ ಶಿಸ್ತು ಹಾಳಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ನಿಜವಾಗಲೂ ಆರ್ಥಿಕ ಶಿಸ್ತು ಹಾಳು ಮಾಡಿದ್ದು ಸಿದ್ದರಾಮಯ್ಯನವರೇ.
ಈಗ ಗ್ಯಾರಂಟಿಗಳ ಜಾರಿಯ ಭರಾಟೆಯಲ್ಲಿ ಮುಂದಿನ ಐದು ವರ್ಷ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುವುದು ಕಷ್ಟ ಎನ್ನುವ ಮೂಲಕ ನೀರಾವರಿ ಯೋಜನೆಗಳಿಗೆ ತಿಲಾಂಜಲಿ ನೀಡುವ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಮುಂಚೆ ಒಟ್ಟು ರಾಜ್ಯದ ಸಾಲ ಸುಮಾರು ಒಂದು ಲಕ್ಷ ಕೋಟಿ ರೂ. ಇತ್ತು. ಐದು ವರ್ಷ ಯಾವುದೇ ಕೊವಿಡ್ ಇಲ್ಲದೇ ಇದ್ದರೂ ಸಿದ್ದರಾಮಯ್ಯ ಅವರು ಒಟ್ಡು ಒಂದು ಲಕ್ಷ ಮೂವತ್ತು ಸಾವಿರ ಕೋಟಿ ರೂ. ಸಾಲ ಮಾಡಿದ್ದರು. ಅಂದರೆ 65 ವರ್ಷದಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಸಾಲವನ್ನು ಮೀರಿಸಿರುವ ಖ್ಯಾತಿ ಸಿದ್ದರಾಮಯ್ಯ ಅವರದು. ಸಿದ್ದರಾಮಯ್ಯ ಅವರ ಕಾಲದಲ್ಲಿ ಸಾಲ ಶೇ 118% ಹೆಚ್ಚಾಯಿತು. ಬಿಜೆಪಿ ಕಾಲದಲ್ಲಿ 2019 ರಿಂದ ನಾಲ್ಕು ವರ್ಷ ಶೇ 87% ಹೆಚ್ಚಳವಾಗಿದೆ. ಸಿದ್ದರಾಮಯ್ಯ ಅವರು ಮಾಡಿದ ಸಾಲದ ಒಟ್ಟು ಅಸಲನ್ನು ತೀರಿಸುವ ಹತ್ತು ವರ್ಷದ ಕಂತನ್ನು 2023-24 ರಲ್ಲಿ ಕೊಡುವುದು ಇರುವುದರಿಂದ ಸಾಲ ಮರುಪಾವತಿ ಹೆಚ್ಚಾಗಿದೆ.
15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂಬ ಆರೋಪ: ಹಣಕಾಸು ಆಯೋಗ ಸಂವಿಧಾನಾತ್ಮಕವಾಗಿ ಸ್ವಾಯತ್ತ ಸಂಸ್ಥೆ. ಪ್ರತಿ ಐದು ವರ್ಷಕ್ಕೊಮ್ಮೆ ತನ್ನ ವರದಿ ಮಂಡನೆ ಮಾಡುವ ಮುಂಚೆ ಸುಮಾರು ಮೂರರಿಂದ ನಾಲ್ಕು ವರ್ಷ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಸಂವಾದ ಮಾಡಿ ವರದಿ ಸಿದ್ದಪಡಿಸುತ್ತದೆ. 2019 ರಲ್ಲಿ ಕೊಟ್ಟಿರುವ 15 ನೇ ಹಣಕಾಸು ವರದಿ 2015 ರಿಂದ ಕೆಲಸ ಪ್ರಾರಂಭ ಮಾಡಿತ್ತು. ಆ ಕಾಲದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ರಾಜ್ಯದ ಪರ ಸರಿಯಾದ ವಾದ ಮಾಡದೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಲು ವಿಫಲವಾಗಿದೆ. 2022 ರಲ್ಲಿ ಕರ್ನಾಟಕದಿಂದ 2.1 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಆದರೆ, ಕೇಂದ್ರದಿಂದ 69,110 ಕೋಟಿ ರೂ. ರಾಜ್ಯಕ್ಕೆ ಬಂದಿದೆ. ಅದು ಶೇ 33% ರಷ್ಟು. ಆದರೆ, 2014 ರಲ್ಲಿ 82500 ಕೋಟಿ ರೂಪಾಯಿ ತೆರಿಗೆ ಆದಾಯವನ್ನು ಕೇಂದ್ರಕ್ಕೆ ಕೊಟ್ಟಿದ್ದು, ಕೇವಲ 22,900 ಕೋಟಿ ರೂ. ರಾಜ್ಯಕ್ಕೆ ಬಂದಿರುತ್ತದೆ. ಅಂದರೆ ಶೇ 28%. ಆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಕಾಂಗ್ರೆಸ್ ಸರ್ಕಾರ ಇತ್ತು.
ಜಿಎಸ್​ಟಿ ಪರಿಹಾರ 2022 ಕ್ಕೆ ನಿಲ್ಲಿಸಿರುವ ಆರೋಪ: ಕೇಂದ್ರ ಸರ್ಕಾರ ಜಿಎಸ್​ಟಿ ಪರಿಹಾರ ನೀಡುವುದನ್ನು ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಹೇಳಿರುವುದು ಸೋಜಿಗದ ಸಂಗತಿ. ಜಿಎಸ್​ಟಿ ಪರಿಹಾರವನ್ನು ಐದು ವರ್ಷದವರೆಗೆ ಮಾತ್ರ ಕೊಡುವುದು ಎಂದು ಸಂಸತ್ತಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಕಾನೂನು ಮಾಡಲಾಗಿದೆ. ಈ ಸತ್ಯ ಗೊತ್ತಿದ್ದರೂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಜಿಎಸ್​ಟಿ ಪರಿಹಾರವನ್ನು ಐದು ವರ್ಷಕ್ಕೆ ಮೊಟಕುಗೊಳಿಸಿದೆ ಎನ್ನುವುದು ರಾಜಕೀಯ ಪ್ರೇರಿತವಾಗಿದೆ.
ಕೊವಿಡ್ ಸಂದರ್ಭದಲ್ಲಿಯೂ ಪರಿಹಾರ ಕಡಿಮೆ ಮಾಡದೆ ಕೇಂದ್ರ ತನ್ನ ಆದಾಯ ಇಲ್ಲದಿದ್ದರೂ ವಿಶೇಷ ಅನುದಾನ ಕೊಟ್ಟು ಆ ಸಾಲವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿರುವ ಸತ್ಯವನ್ನು ಮುಖ್ಯಮಂತ್ರಿಗಳು ಮರೆ ಮಾಚಿದ್ದಾರೆ. ಹಾಗೂ 26,954 ಕೋಟಿ ರೂ. ಕಡಿಮೆಯಾಗಿದೆ ಎನ್ನುವುದು ಒಂದು ಕಾಲ್ಪನಿಕ ಅಂದಾಜು ಎನ್ನುವುದು ಸ್ಪಷ್ಟವಾಗಿದೆ.
ಕೇಂದ್ರ ಪ್ರಾಯೋಜಿತ ಯೋಜನೆಗಳಿಂದ ಅನುದಾನ ಕಡಿತ ಆರೋಪ: ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಕಡಿಮೆಯಾಗಿದೆ ಎಂಬ ಆರೋಪ ಮಾಡಿದ್ದಾರೆ. ಆದರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ (ಸಿಎಸ್​ಎಸ್) ಅನುದಾನ ಎರಡು ಮಾದರಿಯಲ್ಲಿ ಬರುತ್ತದೆ. ಒಂದು ಎಸ್​ಎನ್​ಎ ಬ್ಯಾಂಕ್ ಅಕೌಂಟ್, ಮತ್ತೊಂದು ರಾಜ್ಯದ ಏಕೀಕೃತ ನಿಧಿ (ಕನ್ಸಾಲಿಡೇಟೆಡ್ ಫಂಡ್) ಮೂಲಕ ಬರುತ್ತದೆ. 2022-23 ಕ್ಕೆ ಜನವರಿವರೆಗೂ ಎಸ್​ಎನ್​ಎ ಬ್ಯಾಂಕ್ ಅಕೌಂಟ್ ಮೂಲಕ 4,966 ಕೋಟಿ ರೂ. ಬಂದಿದ್ದು, ಇದು ರಾಜ್ಯದ ಸಂಚಿತ ನಿಧಿಯ ಖಾತೆಯಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಸೇರಿಸಿದರೆ ಕೇಂದ್ರದ ಸಿಎಸ್​ಎನ್ ಯೋಜನೆಗಳಿಗೆ ಗ್ರಾ್ಯಂಟ್ ಇನ್ ಏಡ್ ಕಡಿಮೆಯಾಗಿರುವುದಿಲ್ಲ. 2022-23 ರಲ್ಲಿ ಸಂಚಿತ ನಿಧಿಗೆ 13,005 ಕೋಟಿ ಒದಗಿಸಲಾಗಿದೆ. ಕೇಂದ್ರ ಬಜೆಟ್ ನಲ್ಲಿ ಕಳೆದ ವರ್ಷ 34,596 ಕೋಟಿ ರೂ. ಇದ್ದಿದ್ದು, ಅದು 37,252 ಕೋಟಿ ರೂ. ಬಂದಿದೆ. ಇದು ಕೇಂದ್ರದಿಂದ ಬರುವ ಅನುದಾನ ಹೆಚ್ಚಾಗಿರುವುದಕ್ಕೆ ಸ್ಪಷ್ಟ ನಿದರ್ಶನ.
ರಾಜ್ಯ ಸರ್ಕಾರ ಕಡ್ಡಾಯ ವೆಚ್ಚ ಹೆಚ್ಚು ಮಾಡಿದೆ ಎಂಬ ಆರೋಪ: ರಾಜ್ಯ ಸರ್ಕಾರ ಸಂಬಳ, ಪಿಂಚಣಿ, ಸಾಲ ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಕಡ್ಡಾಯವಾಗಿ ನೀಡಬೇಕಿರುವುದರಿಂದ ವೆಚ್ಚ ಹೆಚ್ಚಾಗುತ್ತಲೇ ಹೋಗುತ್ತದೆ. ಕಡ್ಡಾಯ ವೆಚ್ಚ ಸಂಬಳ, ಪಿಂಚಣಿ, ಬಡ್ಡಿ, ಹಾಗೂ ವಿವಿಧ ಯೋಜನೆಗಳ ಸಬ್ಸಿಡಿ, ಸಾಮಾಜಿಕ ಭದ್ರತೆ ಯೋಜನೆಗಳು, ಗ್ರಾ್ಯಂಟ್ ಇನ್ ಏಡ್, ಸ್ಥಳಿಯ ಆಡಳಿತಕ್ಕೆ ಹಣ ಹಂಚಿಕೆ, ಇವೆಲ್ಲವೂ ಹೆಚ್ಚಾಗುವುದರಿಂದ ಬದ್ದ ವೆಚ್ಚಗಳು ಹೆಚ್ಚಾಗುತ್ತವೆ.
ನಮ್ಮ ಕಾಲದಲ್ಲಿ ರಾಜಸ್ವ ವೆಚ್ಚ ಪ್ರತಿ ವರ್ಷ ಹೆಚ್ಚಾಗುತ್ತ ಬಂದಿದ್ದು 2019ರಲ್ಲಿ 40 ಸಾವಿರ ಇದ್ದಿದ್ದು 2023-24 ಕ್ಕೆ 61 ಸಾವಿರಕ್ಕೆ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಹಿಂದಿನ ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳ ಬಗ್ಗೆ ಮಾತನಾಡದೇ ಕೇಂದ್ರ ಸರ್ಕಾರದಿಂದ ಬಂದಿರುವ ಅನುದಾನದ ಬಗ್ಗೆಯೂ ಸತ್ಯಕ್ಕೆ ದೂರವಾದ ಮಾಹಿತಿ ನೀಡಿ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಜನರು ಖುಷಿ: ಸಚಿವ ಕೃಷ್ಣಭೈರೇಗೌಡ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + 9 =
Remember me
