ಸನಾತನ ಧರ್ಮದಲ್ಲಿ ಈಗಾಗಲೇ ಹೇಳಿಲ್ಲದ ಯಾವ ಧಾರ್ವಿುಕ ಚಿಂತನೆಯನ್ನೂ, ತತ್ವವನ್ನೂ, ಭವಿಷ್ಯದಲ್ಲಿ ಬರಬಹುದಾದ ಯಾವ ಧರ್ಮದಲ್ಲೂ ಧಾರ್ವಿುಕ ಚಿಂತನೆಯಲ್ಲೂ ಹೇಳಲಾಗುವುದಿಲ್ಲ. ಏಕೆಂದರೆ ಧಾರ್ವಿುಕ ಚಿಂತನೆಯ ಕೊನೆಯ ಮಾತನ್ನು ಉಪನಿಷತ್ತುಗಳಲ್ಲೇ ದಾಖಲಿಸಲಾಗಿದೆ. ಶ್ರೀರಾಮಕೃಷ್ಣರು ಅದ್ವೈತವನ್ನು ಕುರಿತು ಹೇಳುತ್ತಿದ್ದುದು ಅದು ಕೊನೆಯ ಮಾತು ಎಂದು.
ಧರ್ಮದ ವಿಷಯವೇ ಹಾಗೆ! ಅದು ಯಾರೆಂದರೆ ಅವರಿಗೆಲ್ಲ ತಿಳಿಯುವಂಥದ್ದಲ್ಲ. ಕಾರಣವಿಷ್ಟೇ! ಏನನ್ನು ತಿಳಿಯಬೇಕಾದರೂ ಅದಕ್ಕೆ ನಮ್ಮ ಮನಸ್ಸು ಮತ್ತು ಬುದ್ಧಿಗಳನ್ನೇ ಉಪಯೋಗಿಸಬೇಕು. ಸಾಮಾನ್ಯ ಮನಸ್ಸು ಮತ್ತು ಸಾಮಾನ್ಯ ಬುದ್ಧಿಗಳಿಗೆ ಎಟಕುವಷ್ಟು ಧರ್ಮ ಸುಲಭವಲ್ಲ. ಅಷ್ಟೇ ಅಲ್ಲ ಅದು ಬೇರೆ ಬೇರೆ ವ್ಯಕ್ತಿಗಳಿಗೆ, ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ರೀತಿಯಲ್ಲಿ ಅನ್ವಯಿಸುವಂಥದ್ದು. ಮೂರ್ತಿಪೂಜೆಯ ಬಗ್ಗೆ, ಹಬ್ಬ ಹರಿದಿನಗಳಲ್ಲಿ ನಾವು ಆಚರಿಸುವ ಸಂಪ್ರದಾಯಗಳ ಬಗ್ಗೆ ಕೆಲ ಜನರು ಬೊಬ್ಬೆ ಇಡುವುದನ್ನು ನಾವು ಕಾಣುತ್ತಿಲ್ಲವೇ? ಇದರ ಅರ್ಥವೇನು ಎಂದು ವಿವೇಕಾನಂದರಂಥವರೇ ಹತ್ತಾರು ಸಂದರ್ಭಗಳಲ್ಲಿ ವಿವರಿಸಿ ಹೇಳಿದ ಮಾತ್ರಕ್ಕೆ ಆಕ್ಷೇಪಕರಿಗೆ ಅರ್ಥವಾಗಿಬಿಡುತ್ತದೆಯೇ? ಅರ್ಥ, ವಿವರಣೆಯನ್ನು ಮಾತ್ರ ನಾವು ಕೊಡಬಹುದೇ ಹೊರತು ಅದನ್ನು ಅರ್ಥೈಸಬಲ್ಲ ಮಿದುಳನ್ನು ಎಲ್ಲಿಂದ ತಂದುಕೊಡೋಣ?
ಧರ್ಮದ ಸೂಕ್ಷ್ಮತೆ ಹೇಗಿರುತ್ತದೆ ಎಂಬುದಕ್ಕೆ ಒಂದು ಘಟನೆಯನ್ನು ವಿವರಿಸುತ್ತೇನೆ. ಶ್ರೀಮಂತನೊಬ್ಬ ಸಾವಿರಾರು ಜನರಿಗೆ ಅನ್ನಸಂತರ್ಪಣೆಯನ್ನು ವ್ಯವಸ್ಥೆ ಮಾಡಿದ. ಬಹುದೊಡ್ಡ ಪ್ರಮಾಣದಲ್ಲಿ ಅಡಿಗೆ ತಯಾರಾಗುತ್ತಿತ್ತು. ಅಡಿಗೆಯವರೆಲ್ಲ ತಮ್ಮ ತಮ್ಮ ಕಾರ್ಯದಲ್ಲಿ ಆಳವಾಗಿ ಮುಳುಗಿದ್ದಾಗ ಆಕಾಶದಲ್ಲಿ ರಣಹದ್ದೊಂದು ಹಿಡಿದು ಹೊರಟಿದ್ದ ನಾಗರಹಾವಿನ ಬಾಯಿಂದ ಕೆಲತೊಟ್ಟು ವಿಷ ಅಡಿಗೆಪಾತ್ರೆಗೆ ಬಿದ್ದಿದ್ದು ಯಾರ ಕಣ್ಣಿಗೂ ಬೀಳದೆ ಹೋಯಿತು. ಬಹಳ ರುಚಿಯಾಗಿದ್ದ ಅಡುಗೆಯನ್ನು ಎಲ್ಲರೂ ಚಪ್ಪರಿಸಿ ತಿಂದವರೇ! ಆದರೆ ಅದೇ ಅವರ ಕೊನೆಯೂಟವೆಂದು ಯಾರಿಗೆ ತಿಳಿದಿತ್ತು? ಊಟದ ನಂತರ ವಿಶ್ರಾಂತಿಗೆಂದು ಮಲಗಿದವರು ಯಾರೂ ಏಳಲಿಲ್ಲ. ಈ ಸುದ್ದಿ ಬಹುಕಾಲ ಜನರ ಬಾಯಿಗೆ ವಸ್ತುವಾಯಿತು. ಇಲ್ಲಿ ಅಪರಾಧಿಗಳು ಯಾರು? ಆಚಾರವಿಲ್ಲದ ನಾಲಿಗೆಗಳು ಈ ಪುಣ್ಯಕಾರ್ಯದ ಹಿಂದಿದ್ದ ಪ್ರತಿಯೊಬ್ಬರಿಗೂ ಹಿಡಿಶಾಪ ಹಾಕಿ ಚಪಲ ತೀರಿಸಿಕೊಂಡವು. ಇಲ್ಲಿ ಯಾರು ಅಪರಾಧಿ? ಶ್ರೀಮಂತನೆ? ಅಡಿಗೆಯವರೇ? ಬಡಿಸಿದವರೇ? ಹದ್ದೇ? ಹಾವೇ? ತಿಂದವರೇ? ಯಾರು? ಇಷ್ಟು ಜನ ಸತ್ತರಲ್ಲ ಈ ಪಾಪವನ್ನು ಯಾರ ಖಾತೆಗೆ ಹಾಕಬೇಕು ಎಂದು ಯೋಚಿಸಿದ ಯಮ ಒಂದು ನಿರ್ಧಾರಕ್ಕೆ ಬಂದ. ಇಲ್ಲಿ ಯಾರದ್ದೂ ತಪ್ಪಿಲ್ಲ. ಗೊತ್ತಿಲ್ಲದೆ ದೋಷಾರೋಪಣೆ ಮಾಡುವವರದ್ದೇ ತಪ್ಪು. ಆದ್ದರಿಂದ ಪಾಪ ಅವರ ಖಾತೆಗೇ ಹೋಗಬೇಕು ಎಂದು.
ಧರ್ಮ ಇಷ್ಟು ಸೂಕ್ಷ್ಮ (ಅದನ್ನು ವೇದಗಳಿಂದಲೇ ತಿಳಿಯಬೇಕು ಎನ್ನುತ್ತದೆ ಆರ್ಯೋಕ್ತಿ. ಆದರೆ ವೇದ ಎಲ್ಲರಿಗೂ ಅರ್ಥವಾಗುವುದಿಲ್ಲ. ಆದ್ದರಿಂದಲೇ ಮಹಾಭಾರತ ರಚನೆಯಾಯಿತು) ಆದ್ದರಿಂದ ಅದು ಸೂಕ್ಷ್ಮ, ಪರಿಶುದ್ಧ, ಅಂತಮುಖಿ, ತಪೋಶೀಲ ಮನಸ್ಸುಗಳಿಗೆ ಮಾತ್ರವೇ ತಿಳಿಯುವಂಥದ್ದು. ಹೀಗಾಗಿ ಬಹಳ ಜನರಿಗೆ ಇದರಲ್ಲಿ ಆಸಕ್ತಿಯೇ ಬರುವುದಿಲ್ಲ. ಏಕೆಂದರೆ ಅವರಿಗೆ ಅದು ಅರ್ಥವಾಗುವುದಿಲ್ಲ. ಅರ್ಥವಾಗದ ಯಾವ ವಿಷಯವೂ ಬೇಸರವೇ ತಾನೇ. ಬೇಸರದ ಕೆಲಸಕ್ಕೆ ಯಾರು ಹೋಗುತ್ತಾರೆ? ವಿವೇಕಾನಂದರೇ ಒಂದು ಕಡೆ ಹೇಳಿದ್ದುಂಟು. ್ಕ್ಝಜಜಿಟ್ಞ ಜಿಠ ್ಞಠಿ ್ಛ್ಟ ಞಚಠಠ, ‘ಧರ್ಮ ಎನ್ನುವುದು ಸಾಮಾನ್ಯ ಮನಸ್ಸುಗಳಿಗಲ್ಲ’ ಎಂದು! ಮೇಲಿನ ಕಥೆಯ ನೀತಿ ಏನೆಂದರೆ ಯಾವುದೇ ವ್ಯಕ್ತಿಯಾಗಲಿ, ವಿಷಯವಾಗಲಿ, ಘಟನೆಯಾಗಲಿ ಅದರ ಬಗ್ಗೆ ಪೂರ್ಣ ವಿವರಗಳಿಲ್ಲದೆ, ಆಳವಾಗಿ ಅದರ ಪೂರ್ವಾಪರಗಳ ಪರಿಚಯ ಮಾಡಿಕೊಳ್ಳದೆ ಅದನ್ನು ಟೀಕಿಸಬಾರದು. ತಪ್ಪು ಹೊರಿಸಬಾರದು. ಇದಮಿತ್ಥಂ ಎಂಬ ಅಧಿಕಾರವಾಣಿಯಿಂದ ಮಾತನಾಡಬಾರದು ಎಂದು. ಹಾಗೆಯೇ ಏನೂ ತಿಳಿಯದೆ ಪ್ರಶಂಸೆಯನ್ನೂ ಮಾಡದಿರುವುದು ಒಳಿತು.
ಆಧುನಿಕ ಬುದ್ಧಿಜೀವಿಗಳೊಬ್ಬರು ಜ್ಯೋತಿಶಾಸ್ತ್ರವನ್ನು ಕುರಿತು ಅಸಹ್ಯ, ಅಸಭ್ಯ ಮಾತುಗಳಿಂದ ಟೀಕಿಸುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದರು, ಒಂದೆರಡು ಕಡೆ ಅವರಿಗೆ ಪಂಡಿತರ ಲೆಕ್ಕಾಚಾರ ತಪ್ಪಾದ ಅನುಭವ ಇರಲಿಕ್ಕೂ ಸಾಕು. ಹಾಗೆಂದಮಾತ್ರಕ್ಕೆ ಇಡೀ ಶಾಸ್ತ್ರವನ್ನೇ ಬಯ್ಯುವುದು ಮೂರ್ಖತನ. ಎಲ್ಲ ಡಾಕ್ಟರುಗಳೂ ನಿಪುಣರೇ? ಎಲ್ಲ ಪೊ›ಫೆಸರ್​ಗಳೂ ವಿದ್ಯಾವಂತರೇ? ಎಲ್ಲ ಮಠಾಧಿಪತಿಗಳೂ ನಿಷ್ಕಲಂಕರೇ? ಎಲ್ಲ ಇಂಜಿನಿಯರ್​ಗಳೂ ವಿಶ್ವೇಶ್ವರಯ್ಯನವರೇ? ಎಲ್ಲ ಪ್ರಧಾನಿಗಳೂ ಲಾಲ್ ಬಹದ್ದೂರ್ ಶಾಸ್ತ್ರಿಗಳೇ? ಆದರೆ ಇವರು ಬುದ್ಧಿಜೀವಿಯಲ್ಲವೇ? ಸರ್ವಜ್ಞತ್ವ ಇವರ ಹುಟ್ಟು ಲಕ್ಷಣವೇ ಆಗಿರಬೇಕಲ್ಲವೇ? ಒಂದು ವೇದಿಕೆಯ ಕಾರ್ಯಕ್ರಮದಲ್ಲಿ ಇವರ ಜ್ಯೋತಿಶ್ಶಾಸ್ತ್ರದ ಮೇಲಿನ ಪ್ರಹಾರ ಅಪ್ರತಿಹತವಾಗಿ ನಡೆದಿತ್ತು. ಬಹುಶಃ ಇದನ್ನು ನಿರೀಕ್ಷಿಸಿಯೇ ಕೆಲ ನುರಿತ ಜ್ಯೋತಿಶ್ಶಾಸ್ತ್ರ ಪಂಡಿತರು ಅಲ್ಲಿಗೆ ದಯಮಾಡಿಸಿದ್ದರು. ಇವರ ಪ್ರಹಾರ ಮುಗಿದ ಮೇಲೆ ಅವರಲ್ಲೊಬ್ಬರು ವೇದಿಕೆಯ ಮೇಲೆ ಬಂದು, ‘ಬುದ್ಧಿಜೀವಿಗಳೇ, ನಿಮ್ಮ ಮಾತುಗಳನ್ನು ಕೇಳಿದರೆ ನೀವು ಈ ಶಾಸ್ತ್ರದಲ್ಲಿ ಉದ್ದಾಮ ಪಂಡಿತರೇ ಇರಬೇಕೆಂದೆನಿಸುತ್ತದೆ. ಈ ಶಾಸ್ತ್ರದ ಕೆಲ ಅಧ್ಯಾಯಗಳ ಬಗ್ಗೆ ನನ್ನಲ್ಲಿ ಸಂದೇಹಗಳಿವೆ. ದಯವಿಟ್ಟು ತಾವು ನಿವಾರಿಸಬೇಕು’ ಎಂದು ಹೇಳಿ ಕೆಲವು ಪ್ರಶ್ನೆಗಳನ್ನು ಅವರ ಮುಂದಿಟ್ಟರು. ಇದನ್ನು ಎಂದೂ ನಿರೀಕ್ಷಿಸದಿದ್ದ ಬುದ್ಧಿಜೀವಿ ಬಡಬಡಿಸತೊಡಗಿದರು. ಸಮಾಧಾನಕರ ಉತ್ತರಗಳನ್ನು ಕೊಡಲಾಗದೆ ತಾವು ಈ ಶಾಸ್ತ್ರಗಳನ್ನು ಎಂದೂ ಅಧ್ಯಯಿನಿಸಿಲ್ಲ ಎಂದು ಒಪ್ಪಿಕೊಂಡರು. ಇದಕ್ಕಾಗೇ ಕಾಯುತ್ತಿದ್ದ ಪಂಡಿತರು, ‘ಏನೂ ಗೊತ್ತಿಲ್ಲದ ವಿಷಯದ ಬಗ್ಗೆ ಇಷ್ಟು ಹೊತ್ತು ಪ್ರಹಾರಮಾಡಿದ ನಿಮ್ಮ ಉದ್ಧಟತನಕ್ಕೆ ಧಿಕ್ಕಾರ. ನೀವು ಸಭೆಯ ಬೇಷರತ್ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. ವಿಧಿ ಇಲ್ಲದೆ ಬುದ್ಧಿಜೀವಿಗಳು ಕ್ಷಮೆ ಕೇಳಿ ಸಾವರಿಸಿಕೊಂಡು ಹೊರಬಂದರು.
ಜ್ಯೋತಿಶಾ ್ಶ್ತ್ರದ ಕರಾರುವಾಕ್ಕು ನಿರ್ಣಯಗಳು ಹಲವಾರು ಸಂಗತಿಗಳನ್ನು ಅವಲಂಬಿಸಿರುತ್ತವೆ. ಆ ಅವಲಂಬನವಿಲ್ಲದ ವಿಷಯಗಳಲ್ಲಿ ದಿಗ್ಭ›ಮೆಗೊಳಿಸುವಂಥ ಕರಾರುವಾಕ್ಕು ನಿರ್ಣಯಗಳನ್ನು ಅದು ನೀಡುತ್ತದೆ. ಉದಾಹರಣೆಗೆ ಗ್ರಹಣ ಇತ್ಯಾದಿಗಳು. ‘ಗ್ರಹಗಳ ಚಲನೆ ಇತ್ಯಾದಿಗಳ ವಿಷಯಗಳಲ್ಲಿ 6000 ವರ್ಷಗಳ ಹಿಂದೆ ಹಿಂದೂಶಾಸ್ತ್ರಜ್ಞರು ನೀಡಿರುವ ನಿರ್ಣಯಗಳು ಆಧುನಿಕ ಕ್ಯಸೈನ್ ಮತ್ತು ಮೇಯರ್​ಗಳ ನಿರ್ಣಯಗಳೊಡನೆ ಒಂದು ಸೆಕೆಂಡಿನಷ್ಟೂ ವ್ಯತ್ಯಾಸವಿಲ್ಲದೆ ಹೊಂದಿಕೊಳ್ಳು ತ್ತದೆ’ ಎಂದು ಸರ್ ಐಸಾಕ್ ನ್ಯೂಟನ್ನಿನ ಸಹವರ್ತಿ ಮತ್ತು ಹ್ಯಾಲಿ ಧೂಮಕೇತುವನ್ನು ಕಂಡುಹಿಡಿದ ವಿಶ್ವವಿಖ್ಯಾತ ಖಗೋಳಶಾಸ್ತಜ್ಞ ಸಿಲ್ವನ್ ಬೈಲಿ ಹೇಳುತ್ತಾರೆ.
ವರಾಹಮಿಹಿರನ ತನ್ನ ಮಗನ ಕುರಿತ ಭವಿಷ್ಯ, ಭಾಸ್ಕರಾಚಾರ್ಯ ತನ್ನ ಮಗಳ ಕುರಿತ ನುಡಿದ ಭವಿಷ್ಯ ಇತ್ಯಾದಿಗಳು ಯಾರೂ ಮೂಗಿನಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತವೆ. ಕೆಲ ಪಂಡಿತರ ತಪ್ಪಿನಿಂದಾಗಿ ಇಡೀ ಶಾಸ್ತ್ರವನ್ನೇ ದೂರುವುದು ದೀಪದ ಬೆಳಕಿನಲ್ಲಿ ಯಾರೋ ಪಾಪಕಾರ್ಯ ಮಾಡಿದರೆ ದೀಪವನ್ನೇ ದೂರಿದಷ್ಟು ಮೂರ್ಖತನ.
ಒಂದು ಧರ್ಮದ ಬಗ್ಗೆಯೋ, ಒಂದು ಶಾಸ್ತ್ರದ ಬಗ್ಗೆಯೋ ಟೀಕಿಸುವವರು ಈ ಎಲ್ಲ ಧರ್ಮಸೂಕ್ಷ್ಮಗಳನ್ನು ಅರಿಯಬೇಕಾದ ಅವಶ್ಯಕತೆ ಇದೆ. ಅನಾದಿಕಾಲದಿಂದ ಈ ನಾಡು ಅನುಸರಿಸಿದ ಆಚಾರಸಂಹಿತೆ ಇದು. ಗೌರವದ ಸ್ಥಾನಗಳಲ್ಲಿ ಕುಳಿತವರು ಸಾಮಾಜಿಕ ಸ್ವಾಸ್ಥ್ಯ, ಗಾಂಭೀರ್ಯ, ಜವಾಬ್ದಾರಿಗಳ ದೃಷ್ಟಿಯಿಂದ ಇದನ್ನು ಅರಿಯಬೇಕಾದ್ದು ಅವಶ್ಯಕ. ಅದರಲ್ಲೂ ಸಹಸ್ರಾರು ವರ್ಷಗಳಿಂದ ಗೌರವಕ್ಕೆ, ಪೂಜ್ಯತೆಗೆ ಒಳಗಾದ ಸಂಗತಿಗಳನ್ನು ಸಾರ್ವಜನಿಕವಾಗಿ ಟೀಕಿಸುವಾಗ ಮತ್ತಷ್ಟು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಏಕೆಂದರೆ ಈ ಧರ್ಮಗಳು, ಸಂಪ್ರದಾಯಗಳು ನಿನ್ನೆ, ಮೊನ್ನೆ ಹುಟ್ಟಿದ್ದಲ್ಲ.
ಸರ್ವಪ್ಪಲ್ಲಿ ರಾಧಾಕೃಷ್ಣನ್ನರ ಮಾತಿನಲ್ಲಿ ಹೇಳಬೇಕೆಂದರೆ, ‘ಹಲವು ಶತಮಾನಗಳ ಘಟನಾವಳಿಗಳು ಇತಿಹಾಸವನ್ನು ನಿರ್ವಿುಸುತ್ತವೆ. ಹಲವು ನೂರು ಅಂಥ ಐತಿಹಾಸಿಕ ಘಟ್ಟಗಳು ಒಂದು ಸಂಪ್ರದಾಯವನ್ನು ನಿರ್ವಿುಸುತ್ತದೆ. ಆದ್ದರಿಂದ ದೀರ್ಘಕಾಲದ ಸಂಪ್ರದಾಯಗಳನ್ನು ಒಮ್ಮೆಲೇ ಟೀಕಿಸಿಬಿಡಬಾರದು’ ಎಂದು. ಭಾರತದಂಥ ವೈವಿಧ್ಯಮಯ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ಹೊಂದಿದ ದೇಶದಲ್ಲಿ ಅಭಿಪ್ರಾಯ ಭಿನ್ನತೆ, ಭೇದ ಸಾಮಾನ್ಯ. ಎಲ್ಲರಿಗೂ ವೈವಿಧ್ಯತೆಯನ್ನು ಆಸ್ವಾದಿಸುವಷ್ಟು, ಆನಂದಿಸುವಷ್ಟು ಬುದ್ಧಿ ಮತ್ತು ಹೃದಯಗಳು ಬೆಳೆದಿರುವುದಿಲ್ಲ ಎಂದು ಪ್ರಾರಂಭದಲ್ಲೇ ಹೇಳಿದ್ದೇನೆ. ಸೆಮೆಟಿಕ್ ಪಂಗಡಗಳಿಗಂತೂ ಈ ವೈವಿಧ್ಯ ರುಚಿಸುವುದೇ ಇಲ್ಲ. ಆಹಾರದಲ್ಲಿ, ವಸ್ತ್ರದಲ್ಲಿ, ಕೇಶವಿನ್ಯಾಸ, ಕಾರು, ಮನೆ ಇವುಗಳಲ್ಲಿ ಅವರಿಗೆ ವೈವಿಧ್ಯ ಬೇಕೇ ಬೇಕು. ಆದರೆ ಧರ್ಮದಲ್ಲಿ ಮಾತ್ರ ಬೇಡ. ಇದೊಂದು ಶುದ್ಧ ಅವಿವೇಕ! ಮನುಷ್ಯನ ಮನಸ್ಸೇ ಅದು ಯಾವ ಊರಿನಲ್ಲೇ ಇರಲಿ, ಯಾವ ಕಾಲದ್ದೇ ಆಗಿರಲಿ ಬಹುತ್ವವನ್ನು, ವೈವಿಧ್ಯತೆಯನ್ನು ಬಯಸುವಂಥದ್ದು. ಮತಾಂತರವನ್ನು ಬೆಂಬಲಿಸುವ ‘ಬುದ್ಧಿಜೀವಿ’ (?) ಒಂದೇ ಧರ್ಮದಲ್ಲಿ ನೂರು ಮತಕ್ಕೆ ಏಕೆ ವಿರೋಧಿಸುತ್ತಾನೆ? ಮನೆ ಇಕ್ಕಟ್ಟಾಗಿದೆ, ಅನಾನುಕೂಲವಾಗಿದೆ ಎಂದು ಮನೆಯನ್ನೇ ಬದಲಾಯಿಸಬೇಕೇ? ದೊಡ್ಡ ಮನೆಯೊಂದನ್ನು ಮಾಡಿ ಕೋಣೆಗಳ ಸಂಖ್ಯೆಯನ್ನು ಹೆಚ್ಚಿಸಿ, ವೈವಿಧ್ಯ ಮತ್ತು ಏಕತೆಯನ್ನು ಏಕಕಾಲದಲ್ಲಿ ಎತ್ತಿ ಹಿಡಿಯಲಾಗದೆ? ಸನಾತನ ಧರ್ಮ ಅನಾದಿಕಾಲದಿಂದಲೂ ಮಾಡಿದ್ದು ಇದನ್ನೇ. ಪಾಪ ನಮ್ಮ ಧರ್ಮ ಕೋವಿದರಿಗೆ ಗೊತ್ತಿಲ್ಲ ಅಷ್ಟೇ. ಭಾರತೀಯ ಧರ್ಮ ಈ ಹಿಂದೆ ಬಂದಿದ್ದ, ಇನ್ನು ಸಹಸ್ರಾರು ವರ್ಷಗಳ ಮುಂದೆಯೂ ಬರುವ ಎಲ್ಲ ಧರ್ಮಗಳ, ಸಾಮಾನ್ಯ ತತ್ವ (ಎಛ್ಞಿಛ್ಟಿಚ್ಝ ಕ್ಟಜ್ಞಿ್ಚಟ್ಝಛಿಠ) ಗಳ ರ್ತಾಕ ಸಂಗ್ರಹ ಎಂದು ; ಅಸ್ತಿಪಂಜರ ಎಂದು.
ಸನಾತನ ಧರ್ಮದಲ್ಲಿ ಈಗಾಗಲೇ ಹೇಳಿಲ್ಲದ ಯಾವ ಧಾರ್ವಿುಕ ಚಿಂತನೆಯನ್ನೂ, ತತ್ವವನ್ನೂ, ಭವಿಷ್ಯದಲ್ಲಿ ಬರಬಹುದಾದ ಯಾವ ಧರ್ಮದಲ್ಲೂ ಧಾರ್ವಿುಕ ಚಿಂತನೆಯಲ್ಲೂ ಹೇಳಲಾಗುವುದಿಲ್ಲ. ಏಕೆಂದರೆ ಧಾರ್ವಿುಕ ಚಿಂತನೆಯ ಕೊನೆಯ ಮಾತನ್ನು ಉಪನಿಷತ್ತುಗಳಲ್ಲೇ ದಾಖಲಿಸಲಾಗಿದೆ. ಶ್ರೀರಾಮಕೃಷ್ಣರು ಅದ್ವೈತವನ್ನು ಕುರಿತು ಹೇಳುತ್ತಿದ್ದುದು ಅದು ಕೊನೆಯ ಮಾತು ಎಂದು. ಅದರ ಸಾರವೇ ಭಗವದ್ಗೀತೆ. ನಮ್ಮ ಜಲವನ್ನೇ ವಾಟರ್ ಎಂತಲೋ, ನೀರು ಎಂತಲೋ ಕರೆದ ಮಾತ್ರಕ್ಕೆ ಅವರು ಬೇರೆ ವಸ್ತುವನ್ನೇ ಕಂಡುಹಿಡಿದಂತಾಯಿತೇ? ಇಂಥ ವಿಷಯಗಳಲ್ಲಿ ಯಾರದ್ದು ಅಧಿಕಾರವಾಣಿ? ಸ್ವಾಮಿ ವಿವೇಕಾನಂದರದ್ದು! ಭೂತ, ಭವಿಷ್ಯದ ಸಕಲ ಧರ್ಮಗಳ ಸಾಕಾರಮೂರ್ತಿ ಅವರು. ನರೇಂದ್ರನಾಥರ ಧೀಶಕ್ತಿಗೆ ಯಾವ ಗ್ರಂಥಾಲಯವೂ ಸವಾಲಾಗುತ್ತಿರಲಿಲ್ಲ! ಹತ್ತು ವಿಶ್ವಕೋಶ (ಉ್ಚcಟಟಚಛಿಛಜಿಚ)ಗಳನ್ನು ಹತ್ತು ದಿನದಲ್ಲಿ ಕಂಠಪಾಠ ಮಾಡಿದ್ದವರು ಅವರು.
ಇಂದಿನ ಅಥವಾ ಮುಂದಿನ ಯಾವ ಧರ್ಮವೂ ಇಷ್ಟನ್ನು ಮಾತ್ರವೇ ಹೇಳುವುದು. ಯಾವುದೇ ಸಾಂತ ಶಕ್ತಿ (ಜೀವಿ) ಸ್ವಭಾವತಃ ಅನಂತಶಕ್ತಿಯೇ (ಬ್ರಹ್ಮ) ಅಜ್ಞಾನದಿಂದಾಗಿ ತನ್ನನ್ನು ಸಾಂತನೆಂದು ಭಾವಿಸಿದ್ದಾನೆ. ಈ ಅಜ್ಞಾನಕ್ಕೂ ಮತ್ತು ಅಜ್ಞಾನದಿಂದ ಬಿಡುಗಡೆಗೂ ಕಾರಣವಾಗಿರುವುದೇ ಮಾಯಾ (ಜಗತ್ತು). ಮನಸ್ಸಿಗೆ ಕೆಲವು ಶಿಸ್ತು (ಧರ್ಮ)ಗಳನ್ನು ಕೊಡುವುದರ ಮೂಲಕ ಅಜ್ಞಾನದಿಂದ ಬಿಡುಗಡೆ ಹೊಂದಿ ಅನಂತತೆಯ ಭವ್ಯತೆ, ಆನಂದಗಳನ್ನು ಅನುಭವಿಸುವುದೇ ಪ್ರತಿ ಮನುಷ್ಯನ ಜೀವನದ ಗುರಿ. ಧರ್ಮವಷ್ಟೇ ಅಲ್ಲ. ಪ್ರಪಂಚದ ಯಾವುದೇ ವಿಜ್ಞಾನವೂ ಇದನ್ನೇ ಹೇಳುವುದು, ಯಾವುದೇ ನೀತಿಶಾಸ್ತ್ರವೂ ಇದನ್ನೇ ಹೇಳುವುದು. ಯಾವುದೇ ಜ್ಞಾನದ ಸಾರವೂ ಅಷ್ಟೇ ಆದರೆ ಇದನ್ನು ಬೇರೆಲ್ಲರಿಗಿಂತ ಮೊದಲು, ಬೇರೆಲ್ಲರಿಗಿಂತ ಸ್ಪಷ್ಟವಾಗಿ, ಬೇರೆಲ್ಲರಿಗಿಂತ ವಿವರ ಪೂರ್ಣವಾಗಿ, ವೈವಿಧ್ಯಮಯ ರೀತಿಯಲ್ಲಿ ಜಗತ್ತಿನ ಮುಂದೆ ಇಟ್ಟದ್ದು ಸನಾತನ ಧರ್ಮ. ಬೇರೆಲ್ಲ ಮತಗಳು ಇದರ ಒಂದು ಭಾಗವನ್ನು ಮಾತ್ರ ಹೇಳುತ್ತವೆ. ಮುಂದೆ ಬರುವುದೂ ಅದನ್ನೇ ಹೇಳಲಿದೆ. ಜಗತ್ತಿನ ಬೇರೆ ಬೇರೆ ಭಾಗಗಳ, ಬೇರೆ ಬೇರೆ ವಿನ್ಯಾಸದ ಮಡಿಕೆಗಳು ತಮ್ಮ ಮೇಲಿನ ವಿವಿಧ ಬಣ್ಣ, ಚಿತ್ತಾರಗಳನ್ನು ಕಂಡು ತಾವು ಜೇಡಿಮಣ್ಣಿಗಿಂತ ಬೇರೆ ಎಂದರೆ ಅರ್ಥವುಂಟೇ. ಜಗತ್ತಿನ ಯಾವುದೇ ಮತ ತಾನು ಸನಾತನಧರ್ಮಕ್ಕಿಂತ ಬೇರೆ ಎನ್ನುವುದೂ ಇಷ್ಟೇ ಅರ್ಥವುಳ್ಳದ್ದು. ವಿವೇಕಾನಂದರು ಇದನ್ನು ಸಂಶಯಕ್ಕೆಡೆಯಿಲ್ಲದಂತೆ ಪ್ರಪಂಚದಾದ್ಯಂತ ಘಂಟಾನುಘೊಷವಾಗಿ ಮೊಳಗಿದ್ದಾರೆ. ಸಭೆಗಳಲ್ಲಿ ಸವಾಲಿನೋಪಾದಿಯಲ್ಲಿ ಗುಡುಗಿದ್ದಾರೆ. ಆದರೆ ಅವರೇ ಹೇಳಿದಂತೆ ಖಜಛಿ ಚ್ಝಿಜ್ಞಿಛ ್ಚ್ಞಠಿ ಠಛಿಛಿ ಚ್ಞಛ ಠಿಜಛಿ ಟಛ್ಟಿಡಛ್ಟಿಠಿಛಿಛ ಡಿಜ್ಝಿ್ಝ ್ಞಠಿ ಠಛಿಛಿ ಅರ್ಥಾತ್ ಕುರುಡ ಕಾಣಲಾರ; ವಿಕೃತ ಕಾಣಲೊಲ್ಲ. ಆದರೆ ಜಗತ್ತು ಸತ್ಯಗಳನ್ನು ಮುಚ್ಚಿಡಲಾರದು. ಸತ್ಯಾನ್ವೇಷಣೆ ಕರ್ತವ್ಯವಷ್ಟೇ ಅಲ್ಲ; ಆನಂದದಾಯಕ ಕೂಡ. ಅದಕ್ಕೆ ಆಧುನಿಕ ವಿಜ್ಞಾನವೇ ಸಾಕ್ಷಿ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ಗಣೇಶೋತ್ಸವ ಅನುಮತಿಗೆ ಏಕಗವಾಕ್ಷಿ ಕೇಂದ್ರ; ಪಿಒಪಿ ಗಣೇಶ ಮೂರ್ತಿಗೆ ನಿಷೇಧ; ತುಷಾರ್ ಗಿರಿ ನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 16 =
Remember me
