ಬಳ್ಳಾರಿ:ಅರಣ್ಯ ಸಚಿವ ಆನಂದ್​ ಸಿಂಗ್​ರನ್ನು ಭೇಟಿಯಾಗಲು ಬಂದ ಮೊಸಳೆಯೊಂದು ಸೆರೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೀಗೆಂದು ನಾವು ಹೇಳುತ್ತಿಲ್ಲ. ಬಳ್ಳಾರಿಯ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು, ಇದು ಒಂದು ರೀತಿಯಲ್ಲಿ ತಮಾಷೆ ಅನ್ನಿಸಬಹುದು, ಆದರೆ, ಕಾಕತಾಳಿಯವೆಂಬಂತೆ ಹೊಸಪೇಟೆಯಲ್ಲಿರುವ ಆನಂದ ಸಿಂಗ್ ಅವರ ಬೃಹತ್ ಬಂಗಲೆ ಮುಂದೆಯೇ ಮೊಸಳೆ ಪ್ರತ್ಯಕ್ಷವಾಗಿದೆ.
ಇದನ್ನೂ ಓದಿ:ಡಿಕೆಶಿಗೆ ಮುಖಭಂಗ; ಕಾಂಗ್ರೆಸ್​ಗೆ ರಸಭಂಗ
ಆನಂದ್ ಸಿಂಗ್ ಮನೆಯ ಮುಂದೆ ಹೆಚ್​ಎಲ್​ಸಿ ಕಾಲುವೆ ಇದೆ. ತಡರಾತ್ರಿ ಕಾಲುವೆಯಿಂದ ಮೊಸಳೆಯು ಮನೆಯ ಮುಂಭಾಗದ ರಸ್ತೆ ಮೇಲೆ ಬಂದಿದೆ. ಇನ್ನೂ ಮೂರು ಮೊಸಳೆ ಕಾಲುವೆಯಲ್ಲಿ ಇದ್ದು, ಅರಣ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.
ಸದ್ಯ ರಸ್ತೆಯ ಮೇಲೆ ಬಂದ ಮೊಸಳೆಯನ್ನು ಅರಣ್ಯ ಇಲಾಖೆ ಹಿಡಿದುಕೊಂಡು ಹೋಗಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದೆ. ಈ ವಿಚಾರ ತಿಳಿದ ಅನೇಕರು ಎಲ್ಲೋ ಮೊಸಳೆ ಅರಣ್ಯ ಸಚಿವರ ಬಳಿ ತನ್ನ ಕಷ್ಟ ಹೇಳಿಕೊಳ್ಳೋಕೆ ಬಂದಿತ್ತೇನೋ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಿಹಾರ ಚುನಾವಣಾ ಫಲಿತಾಂಶ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಆರ್​ಜೆಡಿ-ಕಾಂಗ್ರೆಸ್​ ನಿಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
