ಬೆಂಗಳೂರು:ಮುಂಗಾರು ಹಾಗೂ ಹಿಂಗಾರು ಕೈಕೊಟ್ಟಿದ್ದರಿಂದ ಬರದ ಛಾಯೆ ಆವರಿಸಿರುವುದರಿಂದ ರೈತರು ಬೆಳೆ ಸಾಲ ಮನ್ನಾ ಆಗಬಹುದೆಂಬ ನಿರೀಕ್ಷೆ ಹೊತ್ತಿದ್ದು, ರೈತ ಸಂಘಟನೆಗಳು ಹಾಗೂ ಪ್ರತಿಪಕ್ಷ ಬಿಜೆಪಿ ಕೂಡ ಈ ಬೇಡಿಕೆಗೆ ದನಿಗೂಡಿಸಿದೆ.ಬೆಳಗಾವಿ ಅಧಿವೇಶನದ ಕೊನೆ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮನ್ನಾ ೋಷಿಸುತ್ತಾರೆ ಅಥವಾ ಸಾಲದ ಮೇಲಿನ ಅಲ್ಪ ಹೊರೆಯಾದರೂ ಕಡಿಮೆ ಮಾಡುತ್ತಾರೆಂಬ ನಿರೀಕ್ಷೆ ರೈತಾಪಿ ವಲಯದಲ್ಲಿತ್ತು. ಆದರೆ, ರೈತರು ಮಾಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮಾತ್ರ ಮನ್ನಾ, ಅದೂ ಅಸಲು ಕಟ್ಟಿದರೆ ಮಾತ್ರ ಎಂಬ ಷರತ್ತು ಎಂದು ತೀರ್ಮಾನಿಸಿರುವುದು ಈ ವರ್ಗದಲ್ಲಿ ಖುಷಿಯನ್ನಂತೂ ತಂದಿಲ್ಲ.ಸರ್ಕಾರದಲ್ಲಿರುವ ಮಾಹಿತಿ ಪ್ರಕಾರ 2022-23ನೇ ಸಾಲಿನಲ್ಲಿ ಸಹಕಾರ ಸಂಸ್ಥೆ ಮೂಲಕ 28,86,548 ರೈತರು, 21,224.05 ಕೋಟಿ ರೂ. ಸಾಲ ಪಡೆದಿದ್ದಾರೆ. ಇದೇ ವೇಳೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 5,47,777 ರೈತರು 9761.85 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ.ಇನ್ನು ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಪೈಕಿ 47,733 ರೈತರು ಸುಸ್ತಿದಾರರಾಗಿದ್ದು, ಹಾಗೆಯೇ, 18,64,042 ರೈತರು 12,849.19 ಕೋಟಿ ರೂ. ಸಾಲ ಮರುಪಾವತಿ ಮಾಡಿದ್ದಾರೆ. ಸುಸ್ತಿ ಮೊತ್ತ ನವೆಂಬರ್ ಅಂತ್ಯದವರೆಗೆ 320 ಕೋಟಿ ರೂ. ದಾಟಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸುಸ್ತಿದಾರರ ಮಾಹಿತಿಯನ್ನು ಕಲೆಹಾಕುವ ಕೆಲಸ ಪ್ರಗತಿಯಲ್ಲಿದೆ.ಇದೇ ವೇಳೆ ಸಾಲ ಮನ್ನಾ ಅಸಾಧ್ಯವೆಂದ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಸಾಲ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಮಾರ್ಚ್ ಅಂತ್ಯದ ವರೆಗೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಗ್ಯಾರಂಟಿಯನ್ನು ಯಶಸ್ವಿಗೊಳಿಸುವುದು ಪ್ರಮುಖ ಗುರಿ, ಹೀಗಾಗಿ ದೊಡ್ಡ ಮೊತ್ತ ಸಾಲ ಮನ್ನಾಗೆ ಹೊಂದಿಸುವುದು ಕಷ್ಟವಾಗಲಿದೆ ಎಂದು ವಿವರಿಸಿದರು.ಇನ್ನೊಂದೆಡೆ ಎನ್‌ಡಿಆರ್‌ಎ್ನಡಿ ಪರಿಹಾರ ಒದಗಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಇಟ್ಟಿದೆ. ಇದನ್ನ ಆದಷ್ಟು ಶೀಘ್ರವಾಗಿ ನೀಡಿದರೆ ರೈತರಿಗೆ ತಕ್ಷಣವೇ ವರ್ಗಾಯಿಸಲು ಸರ್ಕಾರ ಬಯಸಿದೆ.
* ಹೆಚ್ಚು ಸುಸ್ತಿ ಎಲ್ಲಿ (ರೈತರ ಸಂಖ್ಯೆ)?ಬೆಳಗಾವಿ- 3716, ಬಾಗಲಕೋಟೆ- 5686, ವಿಜಯಪುರ- 7526, ಉತ್ತರ ಕನ್ನಡ- 4131, ತುಮಕೂರು- 2468, ಬೀದರ್- 3715, ರಾಯಚೂರು- 5671, ಮಂಡ್ಯ- 3885.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 4 =
Remember me
