ಬೆಂಗಳೂರು:ಬಹುಕೋಟಿ ವಂಚನೆ ಮಾಡಿದ್ದ ಅಜ್ಮೀರ್ ಗ್ರೂಪ್ ಕಂಪನಿಗೆ ಸೇರಿದ 8.41 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ಜಯನಗರದಲ್ಲಿ ಆರೋಪಿಗಳಾದ ತಬ್ರೇಜ್ ಪಾಷಾ, ಅಬ್ದುಲ್ ದಸ್ತಾಗಿರ್ ಸೇರಿದಂತೆ ಹಲವರು ಸೇರಿ ಅಜ್ಮೀರ್ ಗ್ರೂಪ್ ಕಂಪನಿಯನ್ನು ತೆರೆದಿದ್ದರು. ಕಡಿಮೆ ಅವದಿಯಲ್ಲಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದರು. ಅಂದಾಜು 256 ಕೋಟಿ ರೂ. ಸಂಗ್ರಹ ಮಾಡಿದ್ದರು. ಇದಕ್ಕೆ ಪ್ರತಿಲವಾಗಿ 183 ಕೋಟಿ ರೂ. ಲಾಭಾಂಶ ಕೊಡಲಾಗಿದೆ.
ಆದರೆ ಭರವಸೆಯಂತೆ 72 ಕೋಟಿ ರೂ. ನೀಡುವಲ್ಲಿ ವಿಲರಾಗಿದ್ದಾರೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖಾಧಿಕಾರಿಗಳು ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ತನಿಖೆ ವೇಳೆ ಅಜ್ಮೀರ್ ಗ್ರೂಪ್ ಆರ್‌ಬಿಐ, ಸೆಬಿಯಿಂದ ಅನುಮತಿ ಪಡೆಯದೆ ನೂರಾರು ಕೋಟಿ ರೂ. ವಹಿವಾಟು ನಡೆಸಿರುವುದು ಸಾಬೀತಾಗಿದೆ. ಇದರಿಂದಾಗಿ ಅಜ್ಮೀರ್ ಗ್ರೂಪ್ ಮತ್ತು ಪಾಲುದಾರರಿಗೆ ಸೇರಿದ 8.41 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
