ಬೆಂಗಳೂರು:ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುವನ್ನು ಕದಿಯಲು ಎಷ್ಟು ಹೊತ್ತು ಬೇಕಾಗಬಹುದು? ಸೆಕೆಂಡುಗಳಲ್ಲಂತೂ ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಪ್ರಕರಣದಲ್ಲಿ ಕ್ಷಣ ಮಾತ್ರದಲ್ಲೇ ಕಳ್ಳರು ಕೋಟಿ ರೂ. ಗೂ ಅಧಿಕ ಮೌಲ್ಯವಿರುವ ಸ್ವತ್ತನ್ನು ದೋಚಿದ್ದಾರೆ.
ಇದನ್ನೂ ಓದಿ:ಗಗನಕ್ಕೇರಿದ ಟೊಮ್ಯಾಟೋ ಬೆಲೆ: ಹೊಲಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಳ್ಳತನ
ನಿನ್ನೆ ರಾತ್ರಿ, ಕೆ.ಆರ್‍ ಮಾರ್ಕೆಟ್‍ ಫ್ಲೈ ಓವರ್‍ ಮೇಲೆ ಸಿನಿಮೀಯ ಶೈಲಿಯಲ್ಲಿ ಕಳ್ಳತನ ನಡೆದಿದೆ. ವ್ಯಾಪಾರಿ ಒಬ್ಬರು, ರಾತ್ರಿ ವೇಳೆ ತಮ್ಮ  ಸ್ಕೂಟರ್‍ನಲ್ಲಿ ಸುಮಾರು 3.5 ಕೆ.ಜಿ ಚಿನ್ನವನ್ನು ಸಾಗಿಸುತ್ತಿದ್ದರು. ಅವರು ಕೆ.ಆರ್‍ ಮಾರ್ಕೆಟ್‍ ಫ್ಲೈ ಓವರ್‍ ಮೇಲೆ ಪ್ರಯಾಣಿಸುತ್ತಿದ್ದಾಗ, ಹಿಂದಿನಿಂದ ಮತ್ತೊಂದು ಬೈಕ್‍ನಲ್ಲಿ ಬಂದ ಕಳ್ಳರ ತಂಡ ಇವರ ವಾಹನವನ್ನು ಅಡ್ಡಗಟ್ಟಿದ್ದಾರೆ. ನಂತರ ಸ್ಕೂಟರ್‍ನಲ್ಲಿದ್ದ ಚಿನ್ನದ ಚೀಲವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ದೇವಸ್ಥಾನದ ಹೊರಗೆ ಬಿಟ್ಟ ನನ್ನ ಚಪ್ಪಲಿ ಕಳ್ಳತನವಾಗಿದೆಯೆಂದು ಎಫ್​ಐಆರ್​ ದಾಖಲಿಸಿದ ವ್ಯಕ್ತಿ!
ಒಟ್ಟಿನಲ್ಲಿ ಕೆಲವೇ ಸೆಕಂಡುಗಳಲ್ಲಿ ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಚಿತ್ರಣ ಸಿಗುವುದರ ಒಳಗಾಗಿ ಈ ಕಳ್ಳರು ಕೃತ್ಯ ನಡೆಸಿ ಪರಾರಿಯಾಗಿದ್ದಾರೆ. ಕಳೆದುಕೊಂಡ ಚಿನ್ನದ ಮೌಲ್ಯ ಸುಮಾರು 1 ಕೋಟಿ 70 ಲಕ್ಷ ರೂ.ಗೂ ಅಧಿಕ ಎನ್ನಲಾಗಿದೆ.
ಇದನ್ನೂ ಓದಿ:ಹೀಗಾಗುತ್ತೆ ನೋಡಿ ಸರಣಿ ಕಳ್ಳತನ ಮಾಡುತ್ತಿದ್ದವರು ಗ್ರಾಮಸ್ಥರ ಕೈಗೆ ಸಿಕ್ಕಾಗ…
ಘಟನೆ ನಡೆದ ತಕ್ಷಣ, ಈ ವ್ಯಾಪಾರಿ ನೇರವಾಗಿ ಕಾಟನ್ ಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಕಳ್ಳರು ಹೊಂಚು ಹೇಗೆ ಹಾಕಿದ್ದರು ಎಂದರೆ, ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇಲ್ಲ. ಹೀಗಾಗಿ ಕಳ್ಳರ ಪತ್ತೆ ಕಠಿಣವಾಗಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಶುರು ಮಾಡಿದ್ದು ಹಲವಾರು ಅನುಮಾನಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twenty =
Remember me
