|ಕೀರ್ತಿನಾರಾಯಣ ಸಿ.ಬೆಂಗಳೂರು
2023ರ ಜನವರಿಯಲ್ಲಿ 2ನೇ ಬಾರಿಗೆ ಅತಿಹೆಚ್ಚು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹವಾಗಿರುವ ದಾಖಲೆ ಬೆನ್ನಲ್ಲೇ, ದೇಶಾದ್ಯಂತ ಬೋಗಸ್ ಇನ್​ವಾಯ್್ಸ ಗಳನ್ನು ಸೃಷ್ಟಿಸಿ ಸಾವಿರಾರು ಕೋಟಿ ರೂ. ಜಿಎಸ್​ಟಿ ವಂಚಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ‘ಅಡ್ಡದಾರಿ’ಯಲ್ಲಿ ತೆರಿಗೆ ಸೋರಿಕೆ ತಡೆಯುವ ಉದ್ದೇಶದಿಂದ ಎಷ್ಟೇ ಬಿಗಿ ನಿಯಮಗಳನ್ನು ತಂದರೂ ತೆರಿಗೆ ವಂಚಕರ ಹೆಡೆಮುರಿ ಕಟ್ಟಲು ಸಾಧ್ಯವಾಗು ತ್ತಿಲ್ಲ. 2022ರ ಏಪ್ರಿಲ್​ನಲ್ಲಿ 1.68 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹವಾಗಿತ್ತು. ಈಗ 2023ರ ಜನವರಿ ಯಲ್ಲಿ 2ನೇ ಬಾರಿಗೆ ಅತಿಹೆಚ್ಚು 1.55 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಅದೇ ರೀತಿ ವಂಚನೆಯಲ್ಲೂ ದಾಖಲೆ ಸೃಷ್ಟಿಯಾಗಿದೆ. 2017-18ರಲ್ಲಿ ಜಿಎಸ್​ಟಿ ಜಾರಿಯಾದ ಮೊದಲ ವರ್ಷ 12 ಕೋಟಿ ರೂ. ವಂಚನೆ ಪ್ರಕರಣಗಳು ಪತ್ತೆಯಾಗಿದ್ದವು. ನಂತರ 2018-19ರಲ್ಲಿ 11,251 ಕೋಟಿ ರೂ. ವಂಚನೆ ಪತ್ತೆಯಾಗಿತ್ತು. 2017ರ ಜು.1ರಿಂದ 2019 ಜೂ.25ರವರೆಗೆ 13,829 ಕೋಟಿ ರೂ. ಹಾಗೂ 2020-21 ಹಾಗೂ 2021-22ರಲ್ಲಿ 55,575 ಕೋಟಿ ರೂ. ವಂಚನೆ ನಡೆದಿದೆ. 2017ರಲ್ಲಿ ಜಿಎಸ್​ಟಿ ಜಾರಿಯಾದಾಗಿನಿಂದ ಈವರೆಗೆ 68 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೋಸ ನಡೆದಿದೆ.
2020-21ರ ಅವಧಿಯಲ್ಲಷ್ಟೇ ವಂಚನೆಯಾಗಿದ್ದ ಜಿಎಸ್​ಟಿಯಲ್ಲಿ 2 ಸಾವಿರ ಕೋಟಿ ರೂ. ಮರು ವಸೂಲಿ ಮಾಡಲಾಗಿದೆ. ಜಿಎಸ್​ಟಿ ಪಾವತಿಸಿರುವಂತೆ ನಕಲಿ ಇನ್​ವಾಯ್್ಸ ಗಳನ್ನು ಸೃಷ್ಟಿಸಿ ಜಿಎಸ್​ಟಿ ಇನ್​ಪುಟ್ ಕ್ರೆಡಿಟ್ ಪಡೆಯುವ ಜಾಲ ಒಂದೆಡೆಯಾದರೆ, ಬಿಲ್​ಗಳನ್ನು ಕೊಡದೆ ತೆರಿಗೆ ವಂಚಿಸುವ ಜಾಲವೂ ಇನ್ನೊಂದೆಡೆ ಸಕ್ರಿಯವಾಗಿದೆ. ಇದರಲ್ಲಿ ಕಂಪನಿ ಮಾಲೀಕರು, ಕಮೀಷನ್ ಆಸೆಗೆ ಒಳಗಾಗಿ ಆಧಾರ್, ಪಾನ್ ಕಾರ್ಡ್ ಕೊಡುವ ಜನ, ಚಾರ್ಟರ್ಡ್ ಅಕೌಂಟೆಂಟ್​ಗಳು ಹಾಗೂ ಟ್ಯಾಕ್ಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಈವರೆಗೆ ದೇಶಾದ್ಯಂತ 8,200ಕ್ಕೂ ಅಧಿಕ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದು, ಅದರಲ್ಲಿ 1,000ಕ್ಕೂ ಅಧಿಕ ಆರೋಪಿಗಳು ಜೈಲು ಪಾಲಾಗಿದ್ದಾರೆ.
ಅಕ್ರಮಕ್ಕೆ ಕೈಜೋಡಿಸಿ ಅಮಾನತಾದರು!:ಜಿಎಸ್​ಟಿ ವಂಚನೆಯಲ್ಲಿ ಶಾಮೀಲಾದ ಆರೋಪಕ್ಕೆ ತುತ್ತಾದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ, ಸಹಾಯಕ ಆಯುಕ್ತರು ಸೇರಿ 18 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸರ್ಕಾರದ ಸೂಚನೆ ಮೇರೆಗೆ ಇತ್ತೀಚೆಗೆ ವಾಣಿಜ್ಯ ತೆರಿಗೆ ಇಲಾಖೆ ಅಮಾನತುಗೊಳಿಸಿ ಆದೇಶಿಸಿದೆ. ಅಮಾನತುಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ, ಜಿಎಸ್​ಟಿ ವಂಚಿಸಿ ಸರಕು ಸಾಗಣೆಗೆ ಅವಕಾಶ ಕಲ್ಪಿಸುತ್ತಿದ್ದರು. ಲಂಚ ಪಡೆದು ಅಕ್ರಮಕ್ಕೆ ಅವಕಾಶ ಕಲ್ಪಿಸಿರುವ ಆರೋಪ ಕೇಳಿಬಂದಿತ್ತು.
ಕಾಮಗಾರಿ ನಡೆಸದೆ ಬಿಲ್ ಸಲ್ಲಿಕೆ:ಸರ್ಕಾರಿ ಕಾಮಗಾರಿಗಳಿಗೆ ಬಳಸುವ ಕಬ್ಬಿಣ, ಸಿಮೆಂಟ್, ಜಲ್ಲಿ, ಮರಳು, ಬಿಟುಮಿನ್ ಸೇರಿ ಎಲ್ಲ ಬಗೆಯ ವಸ್ತುಗಳ ಖರೀದಿಗೆ ಗುತ್ತಿಗೆದಾರರಿಗೆ ಜಿಎಸ್​ಟಿ ಬಿಲ್ ನೀಡಲಾಗಿರುತ್ತದೆ. ಎಷ್ಟು ಪ್ರಮಾಣದ ವಸ್ತು ಬಳಸಿದ್ದಾರೆ ಎನ್ನುವುದು ಜಿಎಸ್​ಟಿ ಇನ್​ವಾಯ್್ಸಂದ ತಿಳಿಯಬಹುದು. ಆದರೆ, ಗುತ್ತಿಗೆದಾರರು ಕೆಲವು ಬಾರಿ ಯಾವುದೇ ಕಾಮಗಾರಿ ಮಾಡದೆ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣಪತ್ರ ಮತ್ತು ಫೋಟೊ ಸಲ್ಲಿಸಿ ಬೋಗಸ್ ಬಿಲ್ ಸಲ್ಲಿಸುವ ಆರೋಪವೂ ಕೇಳಿಬಂದಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಅಪವಾದವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಕಾಮಗಾರಿಗಳ ಮೇಲೆ ಕಳೆದ 5 ವರ್ಷಗಳಿಂದ ಸರಕು ಸೇವಾ ತೆರಿಗೆ (ಜಿಎಸ್​ಟಿ) ಪಾವತಿಸದೆ ಸರ್ಕಾರಕ್ಕೆ 1 ಸಾವಿರ ಕೋಟಿ ರೂ.ಗಿಂತ ಅಧಿಕ ಆರ್ಥಿಕ ನಷ್ಟ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಸಂಬಂಧ 2022ರ ಜುಲೈನಲ್ಲಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಸಂಸ್ಥೆಯಿಂದ ಪ್ರಧಾನಮಂತ್ರಿಗೂ ಪತ್ರ ಬರೆಯಲಾಗಿತ್ತು.
2022-23ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಬೋಗಸ್ ಇನ್​ವಾಯ್್ಸಳನ್ನು ಸೃಷ್ಟಿಸಿ ಜಿಎಸ್​ಟಿ ವಂಚಿಸಿರುವ ಪ್ರಕರಣಗಳು ಪತ್ತೆಯಾಗಿವೆ. ಅಂತಹ ಡೀಲರ್​ಗಳಿಂದ ಹಣ ಮರು ವಸೂಲಿ ಮಾಡಲಾಗಿದೆ. ಆಗಸ್ಟ್​ನಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ರಾಜ್ಯದಲ್ಲಿ ಜಿಎಸ್​ಟಿ ವಂಚನೆಗೆ ಸಂಬಂಧಿಸಿದಂತೆ ಆರ್ಥಿಕ ಗುಪ್ತವಾರ್ತೆ ಘಟಕ ಹಾಗೂ ಹೊರ ರಾಜ್ಯಗಳ ವಂಚನೆ ಸಂಬಂಧ ಅಂತಾರಾಜ್ಯ ಸಮನ್ವಯ ಶಾಖೆ ಸ್ಥಾಪಿಸಲಾಗಿದೆ. ಕೇಂದ್ರ ತಂಡಗಳ ಜತೆಗೂ ನಿರಂತರ ಮಾಹಿತಿ ವಿನಿಮಯ ಮಾಡಿಕೊಂಡು, ತೆರಿಗೆ ವಂಚಕರ ಪತ್ತೆ, ಬಂಧನ ಕಾರ್ಯಾಚರಣೆ ಮಾಡಲಾಗುತ್ತಿದೆ.
|ಪದ್ಮಾಕರ ಕುಲಕರ್ಣಿವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ
ಸರ್ಕಾರಕ್ಕೆ ಮೋಸ:ಪಾವತಿದಾರರಿಂದ ತೆರಿಗೆ ಪಡೆದು ಸರ್ಕಾರಕ್ಕೆ ನೀಡದೆ ವಂಚಿಸು ತ್ತಿದ್ದ ದಾವಣಗೆರೆ ಮೂಲದ ಲೆಕ್ಕಪರಿ ಶೋಧಕನನ್ನು ಬಂಧಿಸಲಾಗಿತ್ತು. ಈತನ ವಿರುದ್ಧ 12 ಪ್ರಕರಣಗಳು ದಾಖಲಾಗಿದ್ದು, 10 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 5.31 ಕೋಟಿ ರೂ. ವಸೂಲಿ ಮಾಡಿರುವುದಾಗಿ ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.
ಅವರು ಕೊಟ್ಟರೂ ಇವರು ಕಟ್ಟಲಿಲ್ಲ!:ಜಿಎಸ್​ಟಿ ಪಾವತಿಸಬೇಕೆಂದು ಕಂಪನಿ ಮಾಲೀಕರಿಂದ 9.60 ಕೋಟಿ ರೂ. ಪಡೆದ ಇಬ್ಬರು ಲೆಕ್ಕಪರಿಶೋಧಕರು ಅದನ್ನು ಸರ್ಕಾರಕ್ಕೆ ಪಾವತಿ ಮಾಡದೆ ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದಾರೆ. ಕಂಪನಿ ಕೊಟ್ಟ ದೂರಿನ ಮೇರೆಗೆ ಇತ್ತೀಚೆಗೆ ಇಬ್ಬರನ್ನೂ ಸಂಜಯನಗರ ಪೊಲೀಸರು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ದೇಶದ ಅತಿದೊಡ್ಡ ವಂಚನೆ ಜಾಲ:2018ರಲ್ಲಿ ಬರೋಬ್ಬರಿ 1,200 ಕೋಟಿ ರೂ. ವಹಿವಾಟಿನ ನಕಲಿ ಇನ್​ವಾಯ್್ಸಳನ್ನು ಸೃಷ್ಟಿಸಿ 200 ಕೋಟಿ ಕ್ಲೇಮ್ ಮಾಡಿಕೊಂಡಿದ್ದ ಅತಿದೊಡ್ಡ ಜಿಎಸ್​ಟಿ ವಂಚನೆ ಜಾಲ ಕರ್ನಾಟಕದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಮೂವರನ್ನು ಬಂಧಿಸಲಾಗಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
