ಬೆಂಗಳೂರು:ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸಭೆಯಿಂದ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೂರು ಪ್ರಮುಖ ಪಕ್ಷಗಳ ನಡುವೆ ಪೈಪೋಟಿ ನಡೆದಿದ್ದು. ಕೊನೇಕ್ಷಣದ ತಂತ್ರ-ಪ್ರತಿತಂತ್ರದೊಂದಿಗೆ ಸಜ್ಜಾಗಿವೆ.
ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದಾಗಿದೆ. ಆದರೆ, ಜೆಡಿಎಸ್ ಅಂತಿಮ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದು ಚುನಾವಣೆ ಕೌತುಕಕ್ಕೆ ಕಾರಣವಾಗಿದೆ. ಆದ್ದರಿಂದಲೇ ಅಡ್ಡ ಮತದಾನದ ಭೀತಿ ಮೂರು ಪಕ್ಷಗಳಲ್ಲಿಯೂ ಮನೆ ಮಾಡಿದೆ. ಕಾಂಗ್ರೆಸ್​ನಿಂದ ಎಐಸಿಸಿ ಖಜಾಂಚಿ ಅಜಯ್ ಮಾಕನ್, ಜಿ.ಸಿ. ಚಂದ್ರಶೇಖರ್, ಸೈಯದ್ ನಾಸೀರ್ ಹುಸೇನ್, ಬಿಜೆಪಿಯಿಂದ ನಾರಾಯಣಸಾ ಭಾಂಡಗೆ, ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.
ಹೋಟೆಲ್​ನಲ್ಲಿ ಕೈ ಶಾಸಕರು:ಕಾಂಗ್ರೆಸ್ ತನ್ನ ಶಾಸಕರನ್ನು ಖಾಸಗಿ ಹೋಟೆಲ್​ನಲ್ಲಿ ಇರಿಸಿದೆ. ಅಲ್ಲಿಯೇ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದ್ದು, ಮೊದಲ ಹಾಗೂ ಎರಡನೇ ಪ್ರಾಶಸ್ಱ ಮತಗಳನ್ನು ಯಾರಿಗೆ ಹಾಕಬೇಕೆಂದು ವಿಪ್ ನೀಡಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಎಲ್ಲ ಶಾಸಕರನ್ನು ಒಟ್ಟಿಗೆ ಕರೆತಂದು ಮತ ಹಾಕಿಸುವ ಉದ್ದೇಶವನ್ನು ಪಕ್ಷ ಹೊಂದಿದೆ. ಕೆಆರ್​ಪಿಪಿ ಪಕ್ಷದ ಜನಾರ್ದನ ರೆಡ್ಡಿ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್ ಹಾಗೂ ಎಸ್​ಕೆಪಿಯ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಪುಟ್ಟಸ್ವಾಮಿಗೌಡ ಸಹ ಕಾಂಗ್ರೆಸ್ ಜತೆಗಿದ್ದಾರೆ. ಪಕ್ಷದಲ್ಲಿನ ಅಸಮಾಧಾನಿತರು ಚದುರದಂತೆ ನೋಡಿಕೊಳ್ಳಲು ಹೋಟೆಲ್​ನಲ್ಲಿ ವಾಸ್ತವ್ಯ ಕಲ್ಪಿಸಿದ್ದಾರೆ.
ಅಜಯ್ ಮಾಕನ್ ಅವರು ಸೋನಿಯಾ ಹಾಗೂ ರಾಹುಲ್​ಗೆ ಆಪ್ತರು, ನಾಸೀರ್ ಹುಸೇನ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಿಷ್ಯ, ಚಂದ್ರಶೇಖರ್ ರಾಜ್ಯ ಮತ್ತು ಹೈಕಮಾಂಡ್ ಮಟ್ಟದಲ್ಲಿ ಅನೇಕರಿಗೆ ಆಪ್ತ. ಆದ್ದರಿಂದ ಮೂವರನ್ನೂ ಗೆಲ್ಲಿಸಿಕೊಳ್ಳಲೇಬೇಕಾದ ಸವಾಲು ಪಕ್ಷದ ಮುಖಂಡರಿಗಿದೆ. ಹೋಟೆಲ್​ನಲ್ಲಿ ಒಟ್ಟಾರೆ ಜವಾಬ್ದಾರಿಯನ್ನು ಇಬ್ಬರು ಸಚಿವರು ಸೇರಿದಂತೆ ಐವರಿಗೆ ವಹಿಸಲಾಗಿದೆ.
ಸಾಧ್ಯಾಸಾಧ್ಯತೆಗಳ ಪರಾಮರ್ಶೆ:ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮಧ್ಯಾಹ್ನದ ಭೋಜನ ನೆಪದಲ್ಲಿ ಜೆಡಿಎಸ್, ಬಿಜೆಪಿ ನಾಯಕರು ಸಭೆ ಸೇರಿ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದ್ದಾರೆ. ಆಡಳಿತ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೂಡುವ ಸಾಧ್ಯಾಸಾಧ್ಯತೆಗಳನ್ನು ಪರಾಮಶಿಸಿದ್ದಾರೆ.ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಅಭ್ಯರ್ಥಿ ಕುಪೇಂದ್ರರೆಡ್ಡಿ ಭಾಗಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಅವರಿಗೆ 46 ಬದಲು 48 ಮೊದಲ ಆದ್ಯತೆ ಮತಗಳನ್ನು ಚಲಾಯಿಸಿದರೆ, ಹೆಚ್ಚುವರಿ 18 ಮತಗಳು ಉಳಿಯಲಿವೆ.ಜೆಡಿಎಸ್​ನ 19 ಮತಗಳನ್ನು ಸೇರಿಸಿದರೆ 37 ಮತಗಳಾಗಲಿವೆ. ಕುಪೇಂದ್ರರೆಡ್ಡಿಗೆ ಕೊರತೆ ಬೀಳುವ ಮತಗಳನ್ನು ‘ಅಡ್ಡಮತದಾನ’ದ ಸರಿದೂಗಿಸಿಕೊಳ್ಳುವುದು ಸವಾಲಿನದ್ದಾಗಿದೆ. ಈ ಬಗ್ಗೆ ಸ್ವಲ್ಪ ಹೊತ್ತು ವಿಚಾರ ವಿಮರ್ಶೆ ಮಾಡಿದರು ಎಂದು ಹೇಳಲಾಗಿದೆ. ಸ್ವಪಕ್ಷದ ಶಾಸಕರ ಮೇಲೆ ಡೌಟು: ಸ್ವಪಕ್ಷದ ಕೆಲ ಶಾಸಕರ ಮೇಲೆ ಜೆಡಿಎಸ್, ಬಿಜೆಪಿ ನಾಯಕರಿಗೆ ಅನುಮಾನವಿದೆ. ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು, ಕೊರತೆ ಬೀಳುವ ಮತಗಳನ್ನು ‘ಮನಸಾಕ್ಷಿ’ಯಿಂದ ಸರಿದೂಗಿಸಿಕೊಳ್ಳುವ ತಂತ್ರೋಪಾಯ ನಡೆದಿದೆ.
ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್ ಹಾಗೂ ಎಸ್​ಕೆಪಿಯ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಪುಟ್ಟಸ್ವಾಮಿಗೌಡ ಸಹ ಕಾಂಗ್ರೆಸ್ ಜತೆಗಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ನಿರಾಳವಾಗಿರುವಂತೆ ಮಾಡಿದ್ದಾರೆ. ಪಕ್ಷದಲ್ಲಿನ ಅಸಮಾಧಾನಿತರು ಚದುರದಂತೆ ನೋಡಿಕೊಳ್ಳಲು ಹೋಟೆಲ್​ನಲ್ಲಿ ವಾಸ್ತವ್ಯ ಕಲ್ಪಿಸಿದ್ದಾರೆ.
ಅಜಯ್ ಮಾಕನ್ ಅವರು ಸೋನಿಯಾ ಹಾಗೂ ರಾಹುಲ್​ಗೆ ಆಪ್ತರು, ನಾಸೀರ್ ಹುಸೇನ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಿಷ್ಯ, ಚಂದ್ರಶೇಖರ್ ರಾಜ್ಯ ಮತ್ತು ಹೈಕಮಾಂಡ್ ಮಟ್ಟದಲ್ಲಿ ಅನೇಕರಿಗೆ ಆಪ್ತ. ಆದ್ದರಿಂದ ಮೂವರನ್ನೂ ಗೆಲ್ಲಿಸಿಕೊಳ್ಳಲೇಬೇಕಾದ ಸವಾಲು ಪಕ್ಷದ ಮುಖಂಡರಿಗಿದೆ. ಹೋಟೆಲ್​ನಲ್ಲಿ ಒಟ್ಟಾರೆ ಜವಾಬ್ದಾರಿಯನ್ನು ಇಬ್ಬರು ಸಚಿವರು ಸೇರಿದಂತೆ ಐವರಿಗೆ ವಹಿಸಲಾಗಿದೆ.
ಜಂಟಿ ತಾಲೀಮು:ರಾಜ್ಯಸಭೆ ಚುನಾವಣೆಗೆ ಮತದಾನಕ್ಕೆ ಮುನ್ನಾ ದಿನ ಜೆಡಿಎಸ್, ಬಿಜೆಪಿ ನಾಯಕರು ಮೊದಲ ಬಾರಿಗೆ ಸೋಮವಾರ ಜಂಟಿ ತಾಲೀಮು ನಡೆಸಿದರು. ಜೆಡಿಎಸ್ ಎನ್​ಡಿಎ ಒಕ್ಕೂಟದ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಾಥ್ ನೀಡಿ, ಹೆಚ್ಚುವರಿ ಮತಗಳ ಜತೆಗೆ ದ್ವಿತೀಯ ಪ್ರಾಶಸ್ಱದ ಎಲ್ಲ ಮತಗಳನ್ನು ವರ್ಗಾಯಿಸಲು ಯೋಚಿಸಿದೆ.
ಸಾಧ್ಯಾಸಾಧ್ಯತೆಗಳ ಪರಾಮರ್ಶೆ:ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮಧ್ಯಾಹ್ನದ ಭೋಜನ ನೆಪದಲ್ಲಿ ಜೆಡಿಎಸ್, ಬಿಜೆಪಿ ನಾಯಕರು ಸಭೆ ಸೇರಿ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದ್ದಾರೆ. ಆಡಳಿತ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೂಡುವ ಸಾಧ್ಯಾಸಾಧ್ಯತೆಗಳನ್ನು ಪರಾಮಶಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಅಭ್ಯರ್ಥಿ ಕುಪೇಂದ್ರರೆಡ್ಡಿ ಭಾಗಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಅವರಿಗೆ 46 ಬದಲು 48 ಮೊದಲ ಆದ್ಯತೆ ಮತ ಚಲಾಯಿಸಿದರೆ, ಹೆಚ್ಚುವರಿ 18 ಮತಗಳು ಉಳಿಯಲಿವೆ. ಜೆಡಿಎಸ್​ನ 19 ಮತಗಳನ್ನು ಸೇರಿಸಿದರೆ 37 ಮತಗಳಾಗಲಿವೆ. ಕುಪೇಂದ್ರರೆಡ್ಡಿಗೆ ಕೊರತೆ ಬೀಳುವ ಮತಗಳನ್ನು ‘ಅಡ್ಡಮತದಾನ’ದ ಸರಿದೂಗಿಸಿಕೊಳ್ಳುವುದು ಸವಾಲಿನದ್ದಾಗಿದೆ. ಈ ಬಗ್ಗೆ ಸ್ವಲ್ಪ ಹೊತ್ತು ವಿಚಾರ ವಿಮರ್ಶೆ ಮಾಡಿದರು ಎಂದು ಹೇಳಲಾಗಿದೆ.
ಸ್ವಪಕ್ಷದ ಶಾಸಕರ ಮೇಲೆ ಡೌಟು:ಸ್ವಪಕ್ಷದ ಕೆಲ ಶಾಸಕರ ಮೇಲೆ ಜೆಡಿಎಸ್, ಬಿಜೆಪಿ ನಾಯಕರಿಗೆ ಅನುಮಾನವಿದೆ. ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು, ಕೊರತೆ ಬೀಳುವ ಮತಗಳನ್ನು ‘ಮನಸಾಕ್ಷಿ’ಯಿಂದ ಸರಿದೂಗಿಸಿಕೊಳ್ಳುವ ತಂತ್ರೋಪಾಯ ನಡೆದಿದೆ.
ರೆಡ್ಡಿಗೆ ಡಿಕೆಶಿ ಆಪ್ತ ಏಜೆಂಟ್!:ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿಯವರಿಗೆ ಯೋಗೇಂದ್ರ ವಿಕ್ರಮ್ ಸೋಮವಾರ ಪತ್ರ ನೀಡಿ, ಕೆಆರ್​ಪಿಪಿ ಶಾಸಕ ಜನಾರ್ದನ ರೆಡ್ಡಿಯವರಿಗೆ ಚುನಾವಣಾ ಏಜೆಂಟ್ ಎಂದು ಪುರಸ್ಕರಿಸಲು ಕೋರಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತರಲ್ಲಿ ಯೋಗೇಂದ್ರ ವಿಕ್ರಮ್ ಒಬ್ಬರು ಎನ್ನಲಾಗಿದ್ದು, ಜನಾರ್ದನ ರೆಡ್ಡಿ ‘ಕೈ’ಜಾರಿ ಹೋಗದಂತೆ ನೋಡಿಕೊಳ್ಳುವ ಮುನ್ನೆಚ್ಚರಿಕೆಯಿದು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಾಶಸ್ಱ ಮತ :ಈ ಚುನಾವಣೆ ಪ್ರಾಶಸ್ಱ ಮತಗಳ ಆಧಾರದಲ್ಲಿ ನಡೆಯಲಿದೆ. ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿಯನ್ನು ಬರೆಯಬೇಕು. ಅದು ಬಿಟ್ಟು ಬೇರೆ ಯಾವುದೇ ರೀತಿಯ ಬರಹ ಇದ್ದರೆ ಅಂತಹ ಮತಪತ್ರ ತಿರಸ್ಕೃತವಾಗುತ್ತದೆ. ಚುನಾವಣಾಧಿಕಾರಿ ನೀಡುವ ಪೆನ್ನನ್ನು ಹೊರತುಪಡಿಸಿ ಬೇರೆ ಪೆನ್ ಸಹ ಬಳಸುವಂತಿಲ್ಲ.
ಜಂಟಿ ತಾಲೀಮು ನಡೆಸಿದರು :ರಾಜ್ಯಸಭೆ ಚುನಾವಣೆಗೆ ಮತದಾನಕ್ಕೆ ಮುನ್ನಾ ದಿನ ಜೆಡಿಎಸ್, ಬಿಜೆಪಿ ನಾಯಕರು ಮೊದಲ ಬಾರಿಗೆ ಸೋಮವಾರ ಜಂಟಿ ತಾಲೀಮು ನಡೆಸಿದರು. ಜೆಡಿಎಸ್ ಎನ್​ಡಿಎ ಒಕ್ಕೂಟದ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಾಥ್ ನೀಡಿ, ಹೆಚ್ಚುವರಿ ಮತಗಳ ಜತೆಗೆ ದ್ವಿತೀಯ ಪ್ರಾಶಸ್ಱದ ಎಲ್ಲ ಮತಗಳನ್ನು ವರ್ಗಾಯಿಸಲು ಯೋಚಿಸಿದೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
