ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ನಾಡಿನ ಪ್ರತಿಷ್ಠಿತ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಎಜುಕೇಶನ್ ಎಕ್ಸಪೋ ಗೆ ಅದ್ಭುತ ಸ್ಪಂದನೆ ಸಿಕ್ಕಿದೆ !
ಇಲ್ಲಿನ ಸಂಗನಬಸವ ಸಮುದಾಯ ಭವನದಲ್ಲಿ ನಡೆಯುತ್ತಿರುವ ಎಜುಕೇಷನ್ ಎಕ್ಸಪೊ ಮೂರನೇ ದಿನವಾದ ಬುಧವಾರವೂ ಸಹಸ್ರಾರು ಜನ ಪಾಲ್ಗೊಳ್ಳುವ ಮೂಲಕ ಮೇಳ ಯಶಸ್ವಿಯಾಯಿತು.
ಅದರಲ್ಲೂ ಚಾಣಕ್ಯ ಕೆರಿಯರ್ ಅಕಾಡೆಮಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂಡೋಪತಂಡವಾಗಿ ಆಗಮಿಸಿದ್ದು ಮೇಳದ ಕಳೆ ಹೆಚ್ಚಿಸಿತು.
ವಿಜಯಪುರ, ಬಾಗಲಕೊಟೆ, ಧಾರವಾಡ ಸೇರಿದಂತೆ ವಿವಿಧೆಡೆಯ 32 ಶಿಕ್ಷಣ ಸಂಸ್ಥೆಗಳನ್ನು ಒಂದೇ ಸೂರಿನಡಿ ಸೇರಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ರಾಂತಿಯನ್ನು ಮಾಡಲಾಗಿದೆ ಎಂದು ಶಿಕ್ಷಣಾಸಕ್ತರು ಹೆಮ್ಮೆ ವ್ಯಕ್ತಪಡಿಸಿದರು.
ಬರದ ನಾಡೆಂಬ ಹಣೆ ಪಟ್ಟಿ ಹೊತ್ತಿರುವ ವಿಜಯಪುರದ ಶೈಕ್ಷಣಿಕ ಬರ ನೀಗಿಸುವ ನಿಟ್ಟಿನಲ್ಲಿ ಮೇಳ ಯಶಸ್ವಿಯಾಗಿದೆ. ಇಂಥ ಮೇಳಗಳು ಇನ್ನಷ್ಟು ಹೆಚ್ಚಾಗಬೇಕು. ಇದರಿಂದ ಶಿಕ್ಷಣ ಸಂಸ್ಥೆಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ಮೇಳಕ್ಕೆ ಆಗಮಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾತ್ರವಲ್ಲ, ಮೂರು ದಿನಗಳ ಕಾಲದ ನಡೆದ ಉಪನ್ಯಾಸ, ಸಂವಾದ, ಚರ್ಚಾಗೋಷ್ಠಿಗಳಿಂದ ಅನೇಕರು ಜ್ಞಾನ ದಾಹ ತೀರಿಸಿಕೊಂಡರು. ಜ್ಞಾನದ ಹರಿವು ಹೆಚ್ಚಾಯಿತು. ಇಂಥ ಕಾರ್ಯಾಗಾರ ಹೆಚ್ಚಾಗಲಿ ಎಂದು ವಿದ್ಯಾರ್ಥಿಗಳು ಆಶಿಸಿದರು.
Sign in to your account
Please enter an answer in digits:15 + nineteen =
Remember me
