ತುಮಕೂರು:ಸಿಆರ್​ಪಿಎಫ್​ ಪೇದೆಯ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದು, ವರದಕ್ಷಿಣೆಗಾಗಿ ಪೇದೆಯಿಂದಲೇ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:VIDEO| ಸಮುದ್ರದಲ್ಲಿ ಮುಳುಗುತ್ತಿರೋ ಕಾರನ್ನು ಉಳಿಸಲು ಹೋದ ಮಾಲೀಕ: ಮುಂದೇನಾಯ್ತು ನೀವೇ ನೋಡಿ!
ಗೌರಮ್ಮ(20) ಮೃತ ದುರ್ದೈವಿ. ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಹತ್ಯೆ ಮಾಡಿ ನೇಣು ಹಾಕಿ ಆತ್ಮಹತ್ಯೆ ಎಂದು ಪೇದೆ ರವೀಶ್​ ಕುಟುಂಬ ಬಿಂಬಿಸಿದೆ ಎಂದು ಆರೋಪಿಸಲಾಗಿದೆ.
ರವೀಶ್ ಸಿಆರ್​ಪಿಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾಗಿ ಆರು ತಿಂಗಳು ಮಾತ್ರ ಆಗಿತ್ತು. ಇದರ ನಡುವೆ ರವೀಶ್​ ಮತ್ತು ಕುಟುಂಬ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಹಾಗೂ ಇದೇ ವಿಚಾರಕ್ಕೆ ಹಲವು ಬಾರಿ ಜಗಳವು ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ರೇಪ್​, ಕೊಲೆ ಮಾಡುವುದಾಗಿ ಜೂ. ಎನ್​ಟಿಆರ್ ಅಭಿಮಾನಿಗಳಿಂದ ಬೆದರಿಕೆ: ನಟಿ ಮೀರಾ ಚೋಪ್ರಾ ದೂರು​
ವರದಕ್ಷಿಣೆ ತರದೇ ಇದ್ದುದ್ದಕ್ಕೆ ಹತ್ಯೆ ಮಾಡಿ ಇದೀಗ ಆತ್ಮಹತ್ಯೆ ಕತೆ ಕಟ್ಟಿದ್ದಾರೆ ಎಂದು ದೂರಿದ್ದು, ಸರ್ಕಾರಿ ಜಿಲ್ಲಾಸ್ಪತ್ರೆಗೆ ಮೃತಳನ್ನು ದಾಖಲಿಸಿ ಕುಟುಂಬವು ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕುಟುಂಬದ ವಿರುದ್ಧ ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ರಾಜ್ಯದ ಯುವಕರು ಕೆಲಸ ಗಿಟ್ಟಿಸಿಕೊಳ್ಳಲು ಇದೇ ಸದವಕಾಶವೆಂದ ಸಚಿವ ಬಿಸಿ ಪಾಟೀಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + ten =
Remember me
