ಶಿವಮೊಗ್ಗ:ಹೊಟ್ಟೆಪಾಡಿಗಾಗಿ ಊರು ಬಿಟ್ಟು ಬಂದವರು ಕೆಲಸ ಮಾಡುತ್ತಲೇ ಸಮಾಧಿಯಾದ ಘಟನೆ ನಗದ ಹೊರವಲಯದ ಗೆಜ್ಜೇನಹಳ್ಳಿಯಲ್ಲಿ ಸಂಭವಿಸಿದೆ.
ಗೆಜ್ಜೇನಹಳ್ಳಿಯ ಕ್ರಷರ್​ನಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ.ಇದನ್ನೂ ಓದಿರಿಬಾಲಕನ ಪ್ರಾಣ ತೆಗೆದ ಜೋಕಾಲಿ, ಆನ್​ಲೈನ್​ ಪಾಠ ಕೇಳುತ್ತಲೇ ಪ್ರಾಣಬಿಟ್ಟ!
ಅಸ್ಸಾಂನ ಚಿರಾಂಗ್​ ಜಿಲ್ಲೆಯ ಬುಂಜಲ್​ ಗ್ರಾಮದ ದ್ವಿಕೊಲಾಂಗ್​ (25) ಹಾಗೂ ಪ್ರೆಸಿಂಗ್​ಟೋನ್​ (25) ಮೃತರು. ಆರು ತಿಂಗಳಿಂದ ಇಬ್ಬರೂ ಕ್ರಷರ್​ನಲ್ಲಿ ಕೆಲಸ ಮಾಡುತ್ತಿದ್ದರು. ಕ್ರಷರ್​ನಲ್ಲಿ ಕಟ್ಟಿದ ಜಿಂಕ್​ಶೀಟ್​ಗೆ ಮಂಗಳವಾರ ಜೆಲ್ಲಿ ಕಲ್ಲು ತುಂಬಿದ ಟ್ರ್ಯಾಕ್ಟರ್​ ತಾಗಿದ್ದರಿಂದ ಮಣ್ಣು ಕುಸಿದಿದೆ. ಇದರಿಂದ ಜಿಂಕ್​ಶೀಟ್​ ಮತ್ತು ಕಲ್ಲುಗಳು ಕೂಡ ಕೆಳಕ್ಕೆ ಜರಿದಿವೆ.
ಅವಘಡದಲ್ಲಿ ದ್ವಿಕೊಲಾಂಗ್​ ಸ್ಥಳದಲ್ಲಿಯೇ ಮೃತಪಟ್ಟರೆ, ಆಸ್ಪತ್ರೆಗೆ ದಾಖಲಾಗಿದ್ದ ಪ್ರೆಸಿಂಗ್​ಟೋನ್​ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕ್ರಷರ್​ ಮಾಲೀಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪ್ಪ-ಅಮ್ಮನಿಗೂ ಹೇಳದೆ ಮದುವೆಯಾದ ಯುವತಿ ಗಂಡನ ಮನೆಯ ಕಿಟಕಿಯಲ್ಲಿ ಶವವಾದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
