ಬೆಂಗಳೂರು:ಅಪರೂಪದ, ಅಳಿವಿನಂಚಿನಲ್ಲಿರುವ ತಳಿ ಎಂದೇ ಗುರುತಿಸಿಕೊಂಡಿರುವ ‘ಮಲೆನಾಡು ಗಿಡ್ಡ ಗೋವು’ ಕರುವಿನೊಂದಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಮನೆಗೆ ಪದಾರ್ಪಣೆ ಮಾಡಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಹಾಲಿ ಸಿಎಸ್ ಶಾಲಿನಿ ರಜನೀಶ್ ದಂಪತಿ ಕೋರಿಕೆಯಂತೆ ಅವರ ಮನೆಗೆ ಮಲೆನಾಡು ಗಿಡ್ಡ ‘ಹಂಸಿ, ಪಂಚಮಿ’ ಎಂಬ ಗೋವುಗಳು ಮತ್ತು ಕರುವಿನೊಂದಿಗೆ ಬಂದಿದ್ದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಾದ ಪ್ರಸನ್ನ ಹೆಬ್ಬಾರ್, ನಿತಿನ್ ಪ್ರಭು ಮತ್ತಿತರ ಸಾಗಣೆ ವ್ಯವಸ್ಥೆ ಮಾಡಿದ್ದಾರೆ.
ಸುಳ್ಳ ತಾಲೂಕು ಅಲೆಕ್ಕಾಡಿಯ ಾರ್ಮ್‌ನ ಒಡೆಯರಾದ ಅಕ್ಷಯ ಆಳ್ವರ ಸಂತೋಷದಿಂದಲೇ ಕಪಿಲ ತಳಿಯ ಮಲೆನಾಡು ಗಿಡ್ಡ ಗೋವು ಮತ್ತು ಕರುವನ್ನು ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.ಕಡಿಮೆ ಹಾಲು ಕೊಟ್ಟರೂ ಔಷಧೀಯ ಗುಣವುಳ್ಳದ್ದಾಗಿದೆ. ಸೆಗಣಿಯು ಜಮೀನಿನ ಆರೋಗ್ಯ ರಕ್ಷಕ ಮತ್ತು ಗೋಮೂತ್ರದಿಂದ ಅನೇಕ ಪ್ರಯೋಜನಗಳಿವೆ.
ಈ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ವಿನಾಶದ ಅಂಚಿನಲ್ಲಿರುವ ಮಲೆನಾಡು ಗಿಡ್ಡ ಗೋವು ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಸದಾಶಿವ ಮರಿಕೆ, ಅಕ್ಷಯ್ ಆಳ್ವ ಮುಂತಾದವರು ಆಂದೋಲನವನ್ನೇ ಪ್ರಾಂತದಲ್ಲಿ ಕೈಗೆತ್ತಿಕೊಂಡಿದ್ದಾರೆ.
ಸಿಎಸ್ ಶಾಲಿನಿ ರಜನೀಶ್ ಸ್ವಯಂ ಆಸಕ್ತಿವಹಿಸಿ ಈ ಗೋವು ತರಿಸಿಕೊಂಡಿರುವ ಕಾರಣ ಸಂರಕ್ಷಣಾ ಆಂದೋಲನಕ್ಕೆ ಹೊಸ ಬಲ ತುಂಬಲಿದೆ. ಅಮೂಲ್ಯವಾದ ಮಲೆನಾಡು ಗಿಡ್ಡ ತಳಿಯು ಪ್ರತಿ ಮನೆಗೆ ಕಾಲಿಡಲಿವೆ ಎಂಬ ಅಶಾಭಾವನೆಯು ಗರಿಗೆದರಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 11 =
Remember me
