ಬೆಂಗಳೂರು:ಕರೊನಾ ಸೋಂಕಿತ ಅಥವಾ ಅಂತಹ ರೋಗಲಕ್ಷಣಗಳಿರುವವರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯನ್ನು ನಿರಾಕರಿಸುವುದು ಅಥವಾ ನೀಡದಿರುವುದು ಇಲ್ಲವೇ ತಪ್ಪಿಸುವುದು ಕಾನೂನುಬಾಹಿರ ಎಂದು ರಾಜ್ಯಸರ್ಕಾರ ಆದೇಶ ಮಾಡಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಕರೊನಾ ಆರೈಕೆ ಕೇಂದ್ರಗಳನ್ನು (ಸಿಸಿಸಿ) ಹೆಚ್ಚಿಸುವ ಅಗತ್ಯವಿದ್ದು, ಸೋಂಕು ಲಕ್ಷಣ ರಹಿತರನ್ನು ಇಲ್ಲಿ ನೋಡಿಕೊಳ್ಳಲಾಗುತ್ತದೆ. ಒಟ್ಟು 1,600 ಹಾಸಿಗೆಗಳ ಹೆಚ್ಚಿನ ಸೌಕರ್ಯ ಕಲ್ಪಿಸಲು 5 ಸಂಸ್ಥೆಗಳನ್ನು ಸಿಸಿಸಿಗಳನ್ನಾಗಿ ಸರ್ಕಾರ ಅಧಿಸೂಚಿಸಿದೆ.
ಇದನ್ನೂ ಓದಿ:ಕೋವಿಡ್ ಪರೀಕ್ಷೆಗೆ ಮತ್ತಷ್ಟು ಬಲ: ವಿಕ್ಟೋರಿಯಾ ಲ್ಯಾಬ್ ಆರಂಭ, ಇಂದಿನಿಂದ ನಿಮ್ಹಾನ್ಸ್ ಲ್ಯಾಬ್ ಕಾರ್ಯ
ಕರೊನಾ ರೋಗಿಗಳು ಅಥವಾ ಅಂತಹ ಲಕ್ಷಣ ಇರುವವರಿಗೂ ಪರೀಕ್ಷೆ ಹಾಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಅಲ್ಲದೆ, ಚಿಕಿತ್ಸೆ ಹಾಗೂ ಪರೀಕ್ಷೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ವೈದ್ಯಕೀಯ ಸಂಘಗಳ ಕಾಯ್ದೆ ಅನ್ವಯ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರೋನಾ ರೋಗಿ ಬೈಕ್​ ಕಳ್ಳ ಪರಾರಿ; ಆತಂಕ ಮೂಡಿಸಿದಾತ ಮತ್ತೆ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
