ಬೆಂಗಳೂರು :ಜನಸಂಖ್ಯೆ ಬೆಳವಣಿಗೆಗೆ ಕಡಿವಾಣ ಹಾಕಲು, ಉತ್ತರ ಪ್ರದೇಶ ಮಾದರಿಯಲ್ಲಿ, ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಪಕ್ಷಕ್ಕೆ ದೇಶಕ್ಕಿಂತ ರಾಜಕೀಯ ಮುಖ್ಯ. ಆದರೆ ನಮಗೆ ರಾಜಕೀಯ ಮುಖ್ಯವಲ್ಲ, ದೇಶ ಮುಖ್ಯ ಎಂದು ಜನಸಂಖ್ಯೆ ಮಿತಿ ವಿವಾದದ ಬಗ್ಗೆ ಸಮರ್ಥನೆ ನೀಡಿದರು.
ಇದನ್ನೂ ಓದಿ:ಗರಿಷ್ಠ ಎರಡು ಮಕ್ಕಳಿದ್ದರೆ ಮಾತ್ರ ಸೌಲಭ್ಯ: ರಾಜ್ಯದಲ್ಲೂ ನಿಯಮ- ಸಿಟಿ ರವಿ ಸಿಡಿಸಿದರು ಬಾಂಬ್​!
ದೇಶಕ್ಕೆ ‌ಸ್ವಾತಂತ್ರ್ಯ ಬಂದಾಗ 30 ಕೋಟಿ ಜನಸಂಖ್ಯೆಯಿತ್ತು. ಈಗ ದೇಶದ ಜನಸಂಖ್ಯೆ 140 ಕೋಟಿ ಇದೆ. ಇಂದು ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ ಎಂದರು. ಪ್ರಾಕೃತಿಕ ಸಂಪನ್ಮೂಲ ಹೆಚ್ಚಾಗಲು ಸಾಧ್ಯವಿಲ್ಲ. ಗುಡ್ಡಗಳು‌ ಮಾಯವಾಗಿವೆ, ಅರಣ್ಯ ಮಾಯವಾಗಿವೆ. ಅಂದು 28 ಜನ ಸಾವಿನ ಸರಾಸರಿ ಇತ್ತು. ಇವತ್ತು ಸಾವಿನ ಸರಾಸರಿ ಕೇವಲ 7 ಮಾತ್ರ. ಅದಕ್ಕೆ ಜನಸಂಖ್ಯೆ ಮಿತಿ ಬಗ್ಗೆ ಚರ್ಚೆ ಹುಟ್ಟುಹಾಕಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಚರ್ಚೆ ಮಾಡದೆ ಆಪರೇಷನ್ ಮಾಡಿದೆ. ಇಂದಿರಾ ಬ್ರಿಗೇಡ್, ಸಂಜಯ್ ಬ್ರಿಗೇಡ್ ಹೆಸರಲ್ಲಿ ನಡೆದಿತ್ತು. ಆದರೆ ನಾನು ಚರ್ಚೆ ಹುಟ್ಟುಹಾಕಿದ್ದೇನೆ. ಸಾರ್ವಜನಿಕವಾಗಿ ಚರ್ಚೆಯಾಗಲಿ. ಸದನವೇ ಸಾರ್ವಭೌಮವಾದುದು. ಸದನದಲ್ಲೇ ಸಾಧಕ‌ ಬಾಧಕ ಚರ್ಚೆಯಾಗಲಿ ಎಂದರು.
ಜನಸಂಖ್ಯೆ ನಿಯಂತ್ರಿಸಲು ಸಜ್ಜಾಯ್ತು ಈ ರಾಜ್ಯ! 2026 ರೊಳಗೆ ಜನನ ದರ ಇಳಿಸುವ ಗುರಿ

ಕನ್ವರ್ ಯಾತ್ರೆ : ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟೀಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − seven =
Remember me
