ಬೆಂಗಳೂರು:ರಾಜ್ಯದಾದ್ಯಂತ ಸರ್ಕಾರವೇ ಭಾನುವಾರವಿಡೀ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರವಾಸಿ ತಾಣಗಳಲ್ಲಿ ಸಂಚರಿಸಿ ನಿಯಮ ಉಲ್ಲಂಘಿಸಿದ್ದಾರೆ.
ಇದನ್ನೂ ಓದಿ:ವಿಶೇಷ ವಿಮಾನ ಬಂದರೂ ಕ್ಯಾನ್ಸರ್​ ಜಯಿಸಿದಾಕೆಗೆ ತಾಯ್ನಾಡನ್ನು ತಲುಪಲಾಗಲಿಲ್ಲ…!
ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇಡೀ ದಿನ ಮನೆಯಲ್ಲಿದ್ದು, ಯಾರಿಗೂ ತಮ್ಮ ಭೇಟಿಗೆ ಅವಕಾಶ ನೀಡಿಲ್ಲ. ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವೇ ಸಾರ್ವಜನಿಕರಿಗೆ ತಾಕೀತು ಮಾಡಿದೆ. ಆದರೂ ಸಚಿವರೊಬ್ಬರು ಈ ರೀತಿ ಪ್ರವಾಸಿ ತಾಣಗಳಲ್ಲಿ ಬೆಂಬಲಿಗರ ಜತೆ ಸಂಚರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರಿನ ದೇವರಮನೆ, ಹೇಮಾವತಿ ನದಿಮೂಲ, ಬಲ್ಲಾಳರಾಯನದುರ್ಗ ಮುಂತಾದ ಸ್ಥಳಗಳಿಗೆ ಸಿ.ಟಿ. ರವಿ ಇಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರೊಂದಿಗೆ ಭೇಟಿ ನೀಡಿದ್ದರು. ರವಿ ಮಾಸ್ಕ್ ಧರಿಸಿದ್ದರೆ, ಕುಮಾರಸ್ವಾಮಿ ಮಾಸ್ಕ್ ಧರಿಸಿರಲಿಲ್ಲ. ಅವರಿಬ್ಬರ ಸುತ್ತಲೂ ಹತ್ತಿಪ್ಪತ್ತು ಜನ ಸೇರಿದ್ದರು. ಅವರಲ್ಲಿಯೂ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲಿಲ್ಲ.
ಇದನ್ನೂ ಓದಿ:‘ಕೇಂದ್ರ ಸರ್ಕಾರಕ್ಕೆ ಟಾರ್ಗೆಟ್​ ಚೀನಾ ಅಲ್ಲ…ಏನಿದ್ದರೂ ಕಾಂಗ್ರೆಸ್​ ಮೇಲೆ ಕಣ್ಣು…’
ಬಂಧಿತ ಮಹಿಳಾ ಪಿಎಸ್​ಐ ಅತ್ಯಾಚಾರ ಆರೋಪಿಯಿಂದ ಪಡೆದ ಲಂಚದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
