ಚಿಕ್ಕಮಗಳೂರು:ದೇಶವನ್ನು ಲೂಟಿ ಮಾಡಿರುವವರ ಬಗ್ಗೆ ಹೇಳಿದರೆ ಸಿದ್ದರಾಮಯ್ಯನವರು ಏಕೆ ಮಾತನಾಡುತ್ತಾರೆ, ಅವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಎಂಬುದು ಅರ್ಥವಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​ಗೂ ನಮಗೂ ವೈಚಾರಿಕ ಸಂಬಂಧವಿದೆ. ನಾವು ಅದರಿಂದ ಪ್ರೇರಣೆಯಾಗಿದ್ದೇವೆ. ಅವರಿಗೆ ಟಿಪ್ಪು, ಬಾಬರ್​, ಔರಂಗಜೇಬ್​​, ಗಜನಿ ಜತೆ ಯಾವ ಸಂಬಂಧ ಇದೆ ಎಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ.
ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಅಂದ್ರೆ ಇವರೇಕೆ ಮುಖ ಒರೆಸಿಕೊಳ್ತಾರೆ.ಇವರಿಗೂ ಟಿಪ್ಪು-ಔರಂಗಜೇಬಿಗೂ ಏನು ಸಂಬಂಧವಿದೆ. ಇವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ನಮಗೆ ಬಸವಣ್ಣ, ನಾರಾಯಣಗುರು, ವಿವೇಕಾನಂದ, ರಾಮ, ಕೃಷ್ಣ, ಕನಕದಾಸರ ಜೊತೆ ಸಾಂಸ್ಕೃತಿಕ ಸಂಬಂಧವಿದೆ, ಇವರು ಕೂಡ ಗಜನಿ-ಗೋರಿ ಹಾಗೂ ಮೊಘಲರ ಬಗ್ಗೆ ಇರುವ ನಂಟನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ.(ದಿಗ್ವಿಜಯ ನ್ಯೂಸ್​)
ವಿಜಯವಾಣಿ, ದಿಗ್ವಿಜಯ ನ್ಯೂಸ್ ಬಿಗ್ ಇಂಪ್ಯಾಕ್ಟ್: ವಿವಾದಿತ ಚರ್ಚ್​ ಕಟ್ಟಡ ಕಾಮಗಾರಿಗೆ ಬಿತ್ತು ಬ್ರೇಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
