ಬೆಂಗಳೂರು:ಕೇಂದ್ರ ಸರ್ಕಾರ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಮಾಡಲಿದ್ದಾರೆ ಎಂಬ ಸಂಗತಿ ಹೊರಬೀಳುತ್ತಿದ್ದಂತೆ, ಇದೀಗ ಸಾಕಷ್ಟು ಚರ್ಚೆಗಳು ಬುಗಿಲೆದ್ದಿವೆ. ಸದ್ಯ ಈ ಕುರಿತು ರಾಜಕೀಯ ವಲಯದಲ್ಲಿ ಮಾತಿನ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ಭಾರತೀಯ ಸಾಹಿತ್ಯದಲ್ಲಿ‌ ಎಲ್ಲೂ ಇಂಡಿಯಾ ಹೆಸರು ‌ಕಂಡುಬಂದಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನ ‘ಇಂಡಿಯಾ’ ಹೆಸರಿನ ಮೇಲೆ ಹಕ್ಕು ಸಾಧಿಸಬಹುದೇ?! ದಕ್ಷಿಣ ಏಷ್ಯಾ ಸೂಚ್ಯಂಕ ಟ್ವೀಟ್ ಮಾಡಿದ್ದೇನು?
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಿ.ಟಿ. ರವಿ, “ಭಾರತ‌ ಎಂಬ ಹೆಸರು ‌ಇವತ್ತು ಇಟ್ಟ ಹೆಸರಲ್ಲ. ಅನೇಕ ವರ್ಷಗಳಿಂದಲೂ ಭಾರತ ಎಂದೇ ಗುರುತ್ತಿಸುತ್ತೇವೆ. ಭಾ‌ ಅಂದ್ರೆ ಬೆಳಕು ಎಂದು ಪರಿಭಾವಿಸುತ್ತೇವೆ. ಭರತ ಖಂಡ ಎಂದೇ ಹೇಳುತ್ತೇವೆ. ಭಾರತೀಯರ ಶೌರ್ಯ‌ ಪರಿಚಯಿಸುವ ಹಾಡು‌ ಈಗಲೂ ಕಿವಿಯಲ್ಲಿ ಇಂಪಾಗಿದೆ” ಎಂದು ಹೇಳಿದರು.
“ಮಹಾತ್ಮ ಗಾಂಧಿ ಅವರ ‌ಜೀವನ ಚರಿತ್ರೆಯಲ್ಲೂ ರಾಜಕೀಯ ಭಾಷಣದಲ್ಲಿ ಹೇ ರಾಮ್ ಜತೆಗೆ ಭಾರತ್ ಮಾತಾಕಿ ಜೈ ಎಂದು ಹೇಳಿದ್ದರು. ಹೋರಾಟಗಾರರು ಭಾರತ್ ಮಾತಾಕಿ‌ ಜೈ ಎನ್ನುತ್ತಲೇ‌‌ ನೇಣಿನ‌ ಕುಣಿಕೆಗೆ ಒಡ್ಡಿದ್ದರು. ಈಗ ಈ ವಿವಾದದ ದೃಷ್ಟಿ ಯಾಕೆ? ಇಂಡಿಯಾ ಎಂಬುದನ್ನು ವ್ಯಾವಹಾರಿಕವಾಗಿ ಅರಗಿಸಿಕೊಂಡಿದ್ದೇವೆ. ಪರ್ಷಿಯನರು ಸಿಂಧೂ‌ ನದಿಯನ್ನು ಉಚ್ಷರಿಸಲಾರದೇ ಹಿಂದು ಎಂದು ಕರೆದರು. ವಸಾಹತು ಶಾಹಿಗಳ ಮುಂಚೆ ಇಂಡಿಯಾ‌ ಹೆಸರು ‌ಕಂಡುಬಂದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ಚಿಂಚೋಳಿ: ರೈತರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಗೆ ನಮ್ಮ ಬೆಂಬಲ, ಪಕ್ಷಕ್ಕೆ ಅಲ್ಲ- ಪಿಕಾರ್ಡ್ ಬ್ಯಾಂಕ್ ಸದಸ್ಯ ಪಾಟೀಲ
“ಭಾರತೀಯ ಸಾಹಿತ್ಯದಲ್ಲಿ‌ ಎಲ್ಲೂ ಇಂಡಿಯಾ ಹೆಸರು ‌ಕಂಡುಬಂದಿಲ್ಲ. ಅಸ್ಮಿತೆ‌ ಹಾಗೂ ಅಸ್ತಿತ್ವ ‌ಕಳೆದುಕೊಂಡರೆ‌ ನಾವು ಯಾರು? ಭಾರತವನ್ನೇ ವಿರೋಧಿಸುವ ಮನಸ್ಥಿತಿಗೆ‌ ಬಂದಿದ್ದಾರೆ. ಇದು ಉಳಿಗಾಮಾನ‌ ಸ್ಥಿತಿ. ಬಹುಶಃ ಇದಕ್ಕೆ ಗಾಂಧಿಯವರು ಕಾಂಗ್ರೆಸ್ ‌ವಿಸರ್ಜಿಸಿದ್ದರು” ಎಂದು ಹೇಳಿದರು.
ನಾಳೆಯಿಂದ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ; ‘ಖುಷಿ’ ಚಿತ್ರಕ್ಕೆ ಟಕ್ಕರ್​ ಕೊಡಲಿವೆ ಈ 2 ಸಿನಿಮಾಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 20 =
Remember me
