ಬೆಂಗಳೂರು:ನಿನ್ನೆ ರಾಷ್ಟ್ರ ಬಿಜೆಪಿ ಕಾರ್ಯಕಾರಿ ಸಮಿತಿಯಲ್ಲಿ ಬದಲಾವಣೆ ತರಲಾಗಿದ್ದು ಅದರಲ್ಲಿ ಸಿ.ಟಿ. ರವಿ ಹೆಸರನ್ನು ಕೈ ಬಿಡಲಾಗಿತ್ತು. ಇದರಿಂದಾಗಿ, ರಾಜ್ಯದಿಂದ ಬಿ.ಎಲ್ ಸಂತೋಷ್ ಹೆಸರು ಮಾತ್ರವೇ ಉಳಿದುಕೊಂಡಿತ್ತು. ಇದರಿಂದಾಗಿ ನಾನಾ ರೀತಿಯ ಊಹಾಪೋಹಗಳೂ ಶುರುವಾಗಿದ್ದವು.
ಇದೀಗ ಸಿ.ಟಿ. ರವಿ ಮಾಜಿ ಸಿಎಂ ಯಡಿಯೂರಪ್ಪರ ಆಶೀರ್ವಾದ ಪಡೆದಿದ್ದು ಇದರಿಂದಾಗಿ ರಾಜ್ಯಾಧ್ಯಕ್ಷ ಪಟ್ಟ ಅವರಿಗೇ ಲಭಿಸಲಿದಯಾ ಎನ್ನುವ ಅನುಮಾನ ಶುರುವಾಗಿದೆ. ಈ ಬಗ್ಗೆ ದೇವೇಗೌಡರೂ ಸಿ.ಟಿ. ರವಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, “ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಆಯ್ಕೆ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದ್ದಾರೆಯೇ ಹೊರತು ನಿರ್ಣಯವಾಗಿದೆ ಎಂದು ಹೇಳಿಲ್ಲ‌” ಎಂದಿದ್ದಾರೆ.
ಇದನ್ನೂ ಓದಿ:CT Ravi Slams Congress | ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಕಾಂಗ್ರೆಸ್​ ಮೇಲೆ ಇದೆ: ಸಿಟಿ ರವಿ
ಇನ್ನು ಯಡಿಯೂರಪ್ಪರ ಆಶೀರ್ವಾದ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, “ನಾನು 35 ವರ್ಷಗಳಿಂದಲೂ ಬಿಜೆಪಿಯಲ್ಲಿದೀನಿ. ಆಗಿನಿಂದಲೂ ಯಡಿಯೂರಪ್ಪ ಆಶೀರ್ವಾದವನ್ನು ಪಡೆಯುತ್ತಾ ಬಂದಿದ್ದೇನೆ. ಶೇಕಡ 40 ಕಮಿಷನ್ ಆರೋಪ ಮಾತ್ರವಲ್ಲ, ನೈಸ್ ಹಾಗೂ ರೀಡೂ ಅಕ್ರಮಗಳ ತನಿಖೆಗೆ ನಿರ್ಧರಿಸಿದರೆ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗಲಿದೆ. ಇಲ್ಲವೇ ಏನೋ ಒಳ ಸಂಚು ನಡೆದಿದೆ ಎಂಬ ಅನುಮಾನ ಬರುತ್ತದೆ ಎಂದು ಸಿ.ಟಿ‌.ರವಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಇನ್ನು ರಾಜ್ಯಾಧ್ಯಕ್ಷ ಸ್ಥಾನದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, “ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ದೊಡ್ಡದು. ಅದನ್ನು ಕೇಳಿ ಪಡೆಯಲಾಗದು, ಯಾವಾಗ ಏನು ಮಾಡಬೇಕೆಂದು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಭವಿಷ್ಯದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಇದನ್ನೂ ಓದಿ:ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್​ ನೀಡಿದ ಕುರಿತು ಸಿ.ಟಿ. ರವಿ ರಿಯಾಕ್ಷನ್​
ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಯಾವುದೇ ಸ್ಥಾನ, ಹೊಣೆಗಾರಿಕೆ ನೀಡಿರಲಿ, ನಾನು ಆಗಲೂ ಈಗಲೂ ಮುಂದೆಯೂ ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದ ವರಿಷ್ಠರು ಸೇವಾಮನೋಭಾವದಿಂದ ಕೆಲಸ ಮಾಡುವುದಕ್ಕೆ ಬೆಂಬಲಿಸಿದರು ಎಂದರು.
ನಾಳೆ ನಾನು ದೆಹಲಿಗೆ ಹೋಗುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಕಚೇರಿ ಖಾಲಿ ಮಾಡುವುದಕ್ಕಾಗಿ ಹೋಗುತ್ತಿದ್ದೇನೆ” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
