ಮಂಡ್ಯ:ನಮ್ಮ ಪಾರ್ಟಿಗೆ ಸೇರಿದರೆ ಮಾತ್ರ ನಮ್ಮ ಪಕ್ಷದ ವಿಚಾರ ಮಾತನಾಡಲು ಅರ್ಹತೆ ಬರುತ್ತೆ.ಅವರು ಯಾವಾಗ ಪಾರ್ಟಿಗೆ ಸೇರುತ್ತಾರೆ ಅಂತ ಮೊದಲು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿರನ್ನ ಸಿಎಂ ಸ್ಥಾನದಿಂದ ಬದಲಾವಣೆ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರು ಯಾವಾಗ ಭವಿಷ್ಯ ಹೇಳೋಕೆ ಶುರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ, ಅವರ ಭವಿಷ್ಯದ ಬಗ್ಗೆಯೇ ಗ್ಯಾರಂಟಿ ಇಲ್ಲ.ಕಳೆದ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೀನಿ ಅಂದಿದ್ದರು , ಆದ್ರಾ ಎಂದು ಮಾಧ್ಯಮಗಳಿಗೆ ಮರುಪ್ರಶ್ನಿಸಿದರು.
ಮೋದಿ ಅಪ್ಪನಾಣೆ ಪ್ರಧಾನಿ ಆಗಲ್ಲ ಅಂದ್ರು.ಆದ್ರೆ ಎರಡು ಬಾರಿ ಪ್ರಧಾನಿಯಾದರು, ಅವರು ಹೇಳೋದೆಲ್ಲ ಸುಳ್ಳು‌.ಸಿದ್ದರಾಮಯ್ಯ ಹೇಳಿಯೋದೆಲ್ಲ ಉಲ್ಟಾ ಆಗಿದೆ. ಲೋಕಸಭೆಯಲ್ಲಿ ಬಿಜೆಪಿ ಒಂದು ಸೀಟು ಬರಲ್ಲ ಅಂದ್ರು.ಅವರಿಗೆ ಬಂದಿದ್ದು ಒಂದು ಸ್ಥಾನ, ನಮಗೆ 25 ಸ್ಥಾನ ಬಂದಿದೆ ಎಂದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 11 =
Remember me
